ಕವಿತೆ
ಭೂಮಾತಾ
ಜೋಡಿ ಎತ್ತು ಕಟ್ಟಿಕೊಂಡು
ಬಂಡಿ ಕೊಳ್ಳ ಹೂಡಿಕೊಂಡು
ಬಂದನು ರೈತ ಮಗನು ನಿನ್ನ ಮಡಿಲಿಗೆ
ಹಸಿರು ಸೀರೆ ಉಟ್ಟುಕೊಂಡು
ಬುತ್ತಿ ಗಂಟು ಹೊತ್ತುಕೊಂಡು
ಬಂದಳು ರೈತ ಮಗಳು ನಿನ್ನ ಸೊಗಡಿಗೆ
ಕಳೆ ಕಸವ ಕಿತ್ತಿದರು
ರೆಂಟೆ ಕುಂಟೆ ಹೊಡೆದರು
ಹೊಲವು ಸಜ್ಜು ಮಾಡಿದರೂ ಬಿತ್ತನೆಗೆ
ಗುಡುಗು ಮಿಂಚು ಸಿಡಿಲು ಆರ್ಭಟ
ಮಳೆರಾಯ ಬಂದ ಭೂಮಿಗಿಳಿದು ಪಟಪಟ
ಹರುಷದಿಂದ ಕಾಳ ತುಂಬಿದರು ಭೂಉಡಿಗೆ
ಬೀಜ ನಾಟಿ ಮೇಲೆ ಬಂದು
ಗಾಳಿ ಬಿಸಿಲು ಉಂಡು ತಿಂದು
ಹಸಿರು ತುಂಬಿ ತುಳುಕಿತು ಫಸಲಿಗೆ
ಭೂಮಿತಾಯಿ ನೀ ಕೊಟ್ಟ ಹಸಿರು
ನೀನಿಲ್ಲದೆ ಇಲ್ಲ ಈ ಜಗದ ಉಸಿರು
ಶಾಂತಿಯಿಂದ ಅನ್ನ-ನೀರು ಉಸಿರನೀಟ್ಟೆ ಜೀವಿಗೆ
ಸ್ವಾರ್ಥಿ ಮನುಷ್ಯ ಭೂಮಿ ಉಳಿಸು ಹಸಿರು ಬೆಳೆಸು
ಅರಿವಿನಿಂದ ರೈತರನ್ನು ಕರೆಸು ಹರಿಸು
ಭೂಮಾತೆ- ರೈತಭಂದು ಹೆಮ್ಮೆ ಕಣ್ಣುಗಳು ಜೀವಸೃಷ್ಟಿಗೆ.
–ಸುಜಾತಾ ಪಾಟೀಲ ಸಾಂಗ್ಲಿ
ಪ್ರೀಯ ಓದುಗರೇ,
e-ಸುದ್ದಿ ಅಂತರಜಾಲ ಪತ್ರಿಕೆಗೆ ಸುದ್ದಿ, ಲೇಖನ, ಜಾಹಿರಾತು ಕಳಿಸುವವರು ಸಂಪಾದಕರಾದ ವೀರೇಶ ಸೌದ್ರಿ ಅವರ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ.
ದೂರವಾಣಿ ಸಂಖ್ಯೆ-9448805067
e-ಸುದ್ದಿ ಗೆ ಉಚಿತ ಚಂದಾದಾರರಾಗಲು ಸುದ್ದಿಯ ಕೆಳಗಡೆ ಬಲಬಾಗಲ್ಲಿ ಕಾಣಿಸುವ ಕೆಂಪು ಬೆಲ್ ಬಟನ್ ಒತ್ತಿ. ನಮ್ಮ ಎಲ್ಲಾ ಪ್ರಕಟಣೆಗಳನ್ನು ಓದಬಹುದು.