ಭೂತಾಯಿ
ಮನುಜನ ಹುಚ್ಚಾಟಕೆ
ಮಾರ್ತಾಂಡನ ಕೋಪಕೆ
ಕೆಂಪಾಗಿಹಳು ಭೂತಾಯಿ
ಯುದ್ಧ ಅಣ್ವಸ್ತ್ರ ಗಳಿಂದ
ಕಲುಷಿತ ವಾಯುವಿನಿಂದ
ಜೀವಸಂಕುಲ ಸಂತ್ರಸ್ತವಾಗಿದೆ
ಜೀವಜಲ ನದಿತೊರೆಗಳು
ಬಳಲಿ ಬತ್ತಿ ಬೆಂಗಾಡಾಗಿವೆ
ಜೀವದಾನಕೆ ಹಲಬುತಿವೆ
ಹಸಿರು ಸೀರೆಯುಟ್ಟ ವಸುಂಧರೆ ಚಿಂದಿ ತೇಪೆಯುಟ್ಟು ನಲುಗುತಿಹಳು
ಇಷ್ಟಾದರೂ ನಿರ್ಲಜ್ಜರು ನಾವು
ಇನ್ನಾದರೂ ಹೊದಿಸೋಣ
ಅವಳ ತಲೆಗೆ ಹಸಿರೆಲೆಯ ತಂಪಾ
ಊರುಕೇರಿಗಳಲಿ ಬೆಳೆಸೋಣ ಗಿಡ ಗಂಟಿಗಳ ಗುಂಪಾ
ತಡ ಮಾಡಿದರೆ ನಿಲ್ಲುತದೆ
ಜೀವಿಗಳ ಎದೆಬಡಿತದ ಪಂಪಾ
ಪೃಥೆಯ ಮಕ್ಕಳು ನಾವು
ಕ್ಷಮಯಾ ಧರಿತ್ರಿ ಅವಳು
ಪೃಕೃತಿಯ ಒಂದಂಶ ನಾವು
ಕಷ್ಟಗಳೆಷ್ಟೇ ಬರಲಿ ಅವಳು ನಕ್ಕು ಸಂಭ್ರಮಿಸುವಂತೆ
ಶ್ರಮಿಸೋಣ ಭೂತಾಯಿಯ
ಶ್ರೀ ರಕ್ಷೆ ನಮ್ಮ ಮೇಲಿರಲಿ
–ಅನ್ನಪೂರ್ಣ ಸು ಸಕ್ರೋಜಿ
ಕೊಥ್ರೂಡ ಪುಣೆ