ಆತ್ಮಾರ್ಪಣ
ಇಳೆ ನಿಮ್ಮ ದಾನ
ಬೆಳೆ ನಿಮ್ಮ ದಾನ
ದುರಂತವಹ ಮನುಜಾ
ಆಯಿತು ಅಪಾತ್ರ ದಾನ
ದಾನವೆಂದಾಕ್ಷಣ ಉದಾಸೀನ
ನಿಸರ್ಗದ ಮೌಲ್ಯ
ಮನುಜಾ ನೀನರಿಯೆ
ನಿರಂತರ ವಸುಂಧರೆ
ಶೋಷಿತೆ..
ಅದೋ ನೀನೇ ನಿನ್ನ ಕೊರಳಿಗೆ ನೇಣಿನ ಉರುಲು..
ಒಲೆ ಹೊತ್ತಿಉರಿದೊಡೆ
ನಿಲ್ಲಬಹುದು
ಧರೆ ಹೊತ್ತಿ ಉರಿದೊಡೆ ನಿಲಬಹುದೇ ಎಂದ ಶರಣರಿಗಿದೋ
ಶರಣು ಶರಣಾರ್ಥಿ..
ವಿಶ್ವಸೋಂಕು ಎಂದ ಕೊರೋನಾ ಸಹ ಓಝೋನ್ ಪರದೆಯ ವೈದ್ಯನಾದ..
ಮನುಜಾ …
ಇನ್ನಾದರೂ
ಇಳೆಯ ಗೌರವಿಸು
ಪರಿಸರ ಕಾಪಿಡುವ
ಕಂಕಣ ತೊಡು ನೀನಿಂದೇ…
ಕಾಲಕಾಲಕ್ಕೆ ಮಳೆ ಬೆಳೆ ಸುಗ್ಗಿಯ ಹಿಗ್ಗು ನಮ್ಮದಾಗಿಸಿಕೊಳಲು ದಿಟ್ಟ ಧೃಢ ಹೆಜ್ಜೆಯನಿಡು
ಜೀವದಾಯಿನಿ ಜಲ ಗಾಳಿ ಹಸಿರು ಉಸಿರು ಪ್ರಾಣಿ ಪಕ್ಷಿ ಜೀವಸಂಕುಲ ನೆಮ್ಮದಿಯ ನಿಟ್ಟುಸಿರನಿಟ್ಟು
ವಿಶ್ವ ಪ್ರೀತಿ ಬಾಂಧವ್ಯ ಬೆಸೆಯುವ ಹೊಸ ತಿದಿಯನೊತ್ತುತ್ತಾ ಮುನ್ನುಗ್ಗು…
ಯಾವ ಋಣ ಇನಿತೆನಿಸಿದರೂ…
ತಾಯಿಯ ಋಣ ಭೂಮಿಯ ಋಣ ಹರಿಯಲಾದೀತೇ…
ಭೂಮಿ ಉಳಿಸು..
ನಿನ್ನ ನೀ ಉಳಿಸು..
ನಿನ್ನ ಮುಂದಿನ ಪೀಳಿಗೆಯನೂ ಉಳಿಸು..
ಖಡಾ ಖಂಡಿತಾ ನಿಲ್ಲಿಸಿ ನಿನ್ನೀ ಅತ್ಯಾಚಾರ..
ಅದೋ ನಿನ್ನ ಗುರಿ..ಧ್ಯೇಯ…
ಭೂಮಿತಾಯಿ ಪೊರೆಯೆ ತಾಯಿ ನಿಮ್ಮ ಸೇವೆಗಾಗಿ ಆತ್ಮಾರ್ಪಣಾ..
ಸಾಧನೆ ನಮ್ಮೊಟ್ಟಿಗೆ ಮರೆಯದಿರು..
–ಶಶಿಕಲಾ ರವಿಶಂಕರ್
ಹಿರಿಯೂರು