ಪಂ.ಪುಟ್ಟರಾಜ ಸೇವಾ ಸಮಿತಿಯ  ವಾರ್ಷಿಕ ಚಟುವಟಿಕೆ ಆರಂಭೋತ್ಸವ

 ಪಂ.ಪುಟ್ಟರಾಜ ಸೇವಾ ಸಮಿತಿಯ  ವಾರ್ಷಿಕ ಚಟುವಟಿಕೆ ಆರಂಭೋತ್ಸವ

e-ಸುದ್ದಿ ಕದರಮಂಡಲಗಿ

ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗವಾದ ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯು ೨೦೨೨-೨೩ ನೆಯ ಸಾಲಿನ ವಾರ್ಷಿಕ ಚಟುವಟಿಕೆ ಆರಂಭೋತ್ಸವವನ್ನು ,ದಿನಾಂಕ ೨೪ ಎಪ್ರೀಲ್ ೨೦೨೨ ರಂದು ಬೆಳಿಗ್ಗೆ ೧೦ ಗಂಟೆಗೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಶ್ರೀ ಆಂಜನೇಯ ದೇವಸ್ಥಾನ (ಕಾಂತೇಶ) ದಲ್ಲಿ ಹಮ್ಮಿಕೊಂಡಿದ್ದಾರೆ.

ತಾಲೂಕಾ ಸಂಚಾಲಕರಿಗೆ ‘ಗುರು ಸೇವಾ ಧೀಕ್ಷೆ’ ‘ಕಲೆಗೆ ಕಣ್ಣಿತ್ತ ಪೂಜ್ಯರು’ ಕವಿಗೋಷ್ಠಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಒಳಗೊಂಡ ಈ ಸಮಾರಂಭದ ಉದ್ಘಾಟನೆಯನ್ನು ವೇ. ಚನ್ನವೀರ ಸ್ವಾಮೀಜಿ ಹಿರೇಮಠ (ಕಡಣಿ) ಸಂಸ್ಥಾಪಕರು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಇವರು ನೆರವೇರಿಸಲಿದ್ದಾರೆ.

ಕದರಮಂಡಲಗಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ನಾಗರಾಜ ಉಜ್ಜನಿ, ಆಂಜನೇಯ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಹನುಮಂತಪ್ಪ ಕುಡುಪಲಿ, ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ರಾಜ್ಯ ಕಾರ್ಯದರ್ಶಿ ಪ್ರೊ. ಮಂಜುಶ್ರೀ ಬ. ಹಾವಣ್ಣವರ ಬೆಳಗಾವಿ, ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಹಾವೇರಿ ಜಿಲ್ಲಾ ಸಂಚಾಲಕರಾದ ಶಿವರಾಜ ಉಜ್ಜನಿ ಕದರಮಂಡಲಗಿ ಇವರು ವಹಿಸಿಕೊಳ್ಳುವರು.
ಇದೇ ಸಂದರ್ಭದಲ್ಲಿ ಆಯೋಜಿಸಿರುವ ಹಾನಗಲ್ ಕುಮಾರ ಶಿವಯೋಗಿ ಗಾನಯೋಗಿ ಪಂಚಾಕ್ಷರಿ ಶಿವಯೋಗಿ ಪುಟ್ಟರಾಜರ ಕುರಿತು ‘ಕಲೆಗೆ ಕಣ್ಣಿತ್ತ ಪೂಜ್ಯರು’ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪ್ರಕಾಶ ಮನ್ನಂಗಿ ನಿವೃತ್ತ ಡಿಡಿಪಿಐ ಮೋಟೆಬೆನ್ನೂರು ಇವರು ವಹಿಸಿಕೊಳ್ಳುವರು.

ಸಂತೋಷ್ ಬಿದರಗಡ್ಡೆ, ಶ್ರೀಮತಿ ಶಕುಂತಲಾ ನಾ ದಾಳೇರ, ಡಾ. ಸುಮಾ ಹಡಪದ, ತಿಪ್ಪೇಶಪ್ಪ ದೂಳಪ್ಪ ದೂಳಪ್ಪನವರ, ಡಾಕ್ಟರ್ ಫ್ರಾನ್ಸಿಸ್ ಕ್ಸೇವಿಯರ್, ಮಂಜುಳಾ ಸ ಹಿರೇಬಿದರಿ, ಎ ಎಂ ಹರಿವಿ, ಗುಡ್ಡಪ್ಪ ಹಿಂದಿಲಮನಿ, ಚಂದ್ರಧರ್ ಚ ಕಮ್ಮಾರ್, ರತ್ನಾ ಗಿ. ಬದಿ, ಬಸವರಾಜ ಬಾಗೇವಾಡಿಮಠ, ಬಸವರಾಜ ಹಡಪದ, ಪೂಜಾರ ಹನುಮಂತರಾಯ ರಾಜೇಶ್ವರಿ ಸಾರಂಗಮಠ, ಷಣ್ಮುಖ ಶಾಸ್ತ್ರಿಗಳು ಹಿರೆಅಣಜಿ, ಪ್ರೊ.ಮಂಜುಶ್ರೀ ಬ. ಹಾವಣ್ಣವರ, ಎನ್.ಬಿ. ಬಳಿಗಾರ ಇವರುಗಳು ಸ್ವರಚಿತ ಕವನವನ್ನು ವಾಚನ ಮಾಡಲಿದ್ದಾರೆ. ಕವಿಗೋಷ್ಠಿಯ ನಿರೂಪಣೆ ಡಾ. ಸುಮಾ ಹಡಪದ ಹಳಿಯಾಳ. ಜಿಲ್ಲಾ ಸಂ: ಡಾ.ಪಂ.ಪು.ಸೇ.ಸಮಿತಿ ಉತ್ತರ ಕನ್ನಡ ಇವರು ನಡೆಸಿಕೊಡುವರು.ಕುಮಾರಿ, ಐಶ್ವರ್ಯ ಬ. ಹಡಪದ ಹಳಿಯಾಳ ವಚನ ನೃತ್ಯ ನಡೆಸಿಕೊಡಲಿದ್ದಾರೆ .

ಹಾವೇರಿ ಜಿಲ್ಲೆಯ ತಾಲೂಕಾ ಸಂಚಾಲಕರಾದ ಹಾನಗಲ್ಲಿನ ಮಹಾಲಿಂಗಯ್ಯ ಹಿರೇಮಠ, ಹಿರೇಕೆರೂರನ ಗುರುಶಾಂತಪ್ಪ ಯತ್ನಳ್ಳಿ, ಬ್ಯಾಡಗಿಯ ಟಿಪ್ಪು ಎಸ್.ಕೆ. ಹಾವೇರಿಯ ಫಕ್ಕೀರಶಟ್ರು ರಾಣೆಬೆನ್ನೂರಿನ ರೇಖಾ ಮಾಳದ, ಶಿಗ್ಗಾಂವ ರೇವಣಸಿದ್ದಯ್ಯ ಹಿರೇಮಠ, ಶಿಗ್ಗಾಂವದ ಮಹೇಶ, ರಾಣೆಬೆನ್ನೂರ ನಗರದ ಮಂಜುಳಾ ಪಾಟೀಲ್ ಇವರುಗಳಿಗೆ ‘ಗುರು ಸೇವಾ ಧೀಕ್ಷೆ’ನಡೆಯಲಿದೆ. ಎಂದು ರಾಜ್ಯ ಕಾರ್ಯದರ್ಶಿ ಪ್ರೊ. ಮಂಜುಶ್ರೀ ಹಾವಣ್ಣವರ ಬೆಳಗಾವಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

 

Don`t copy text!