ಕಾಗದ ಮತ್ತು ಬರಹ
ಋಷಿ ಮುನಿಗಳ ಧ್ಯಾನದಲಿ ಅವತರಿಸಿದೆ.
ನದಿ ತೀರದ ಮರಳ ಮೇಲೆ ಮೂಲಾಕ್ಷರಗಳಾದೆ. ಓಂಕಾರವಾಗಿ ಶ್ರೀಕಾರದಿ ಬೀಜಮಂತ್ರವಾದೆ.
ಶಿಲೆಗಳಲಿ ಅರಳಿ ಶಾಶ್ವತವಾದೆ. ತಾಳೆಗರಿಗಳ ಮೇಲೆ ನಾಟ್ಯವಾಡಿದೆ.
ಧರ್ಮಗ್ರಂಥಗಳಾಗಿ ಪೂಜ್ಯನೀಯಳಾದೆ
ಕಾಗದವಾಗಿ ಎಲ್ಲರ ಕಣ್ಮಣಿಯಾದೆ
ವ್ಯಾಪಾರಿಗಳಿಗೆ ಎಲ್ಲರಿಗೂ ಲಕ್ಷ್ಮೀಯಾದೆ
ಕಲಿಯುವವರಿಗೆಲ್ಲ ಶಾರದೆಯಾದೆ.
ಹೃದಯದರಸಿಯಾದೆ ಲೇಖಕರಿಗೆ
ವಿಮಾನವಾಗಿ ಹಾರಾಡಿದೆ ಪ್ರೇಮಿಗಳಿಗೆ
ದೋಣಿಯಾಗಿ ತೇಲಾಡಿದೆ ಮಕ್ಕಳಿಗೆ.
ಜನನಕ್ಕೆ ದಾಖಲೆ ನಾನೇ ಬೇಕು ಮರಣಕ್ಕೂ ದಾಖಲೆ ನಾನಾಗಲೇಬೇಕು
ಜೀವನದುದ್ದಕ್ಕೂ ನಾವು ಬೇಕೇ ಬೇಕು
ಕಾಗದ ಪತಿಯಾದರೆ ಬರಹ ಪತ್ನಿ
ನಮ್ಮಿಬ್ಬರ ಜೀವನ ನಿಮ್ಮನ್ನವಲಂಬಿಸಿದೆ
ನಿಮ್ಮ ಬಿಟ್ಟು ನಾವಿಲ್ಲ ನಮ್ಮ ಬಿಟ್ಟು ನೀವಿಲ್ಲ
ಅಂತರ್ಜಾಲದ ಬಲೆಯಲಿ ಸಿಕ್ಕು ತೊಳಲಾಡುತ್ತಿರುವಿರಿ ನೀವೆಲ್ಲ, ಮುಕ್ತರಾಗಿ ಹೊರಬನ್ನಿ ವಿನಂತಿಸುವೆ
ಪುಸ್ತಕ ಓದಿ ಜ್ಞಾನಿಗಳಾಗಿ
ಪುಸ್ತಕ ಖರೀದಿಸಿ ದಾನವಂತರಾಗಿ ಬರಹಗಾರರಾಗಿ ಕಾಗದ ಕಾವ್ಯ ಉಳಿಸಿ ಬೆಳೆಸಿರಿ.
-ಸೌ ಅನ್ನಪೂರ್ಣ ಸು ಸಕ್ರೋಜಿ .ಪುಣೆ