ಭವ ಬಂದನ ಬಿಡಿಸು ಬಲಭೀಮ
ಶ್ರದ್ಧೆಯಿಂದ ಕರೆದ ಮನಗಳ
ಶುದ್ಧ ಭಕ್ತಿಗೆ ಒಲಿದ ಕರುಣಾಳುವೇ
ಏಕಚಿತ್ತದಿ ನಿನ್ನ ನೆನೆಯಲು
ಭವದ ಭಾರವ ಹಗುರವಾಗಿಸಿ ಪ್ರೀತಿಯಿಂದ ಪೊರೆದೆ ಕುಲಗೋಡದ ಶ್ರೀ ಬಲಭೀಮದೇವಾ
ನೀನು ನೆಲೆಸಿದ ಈ ಕ್ಷೇತ್ರವ
ಭುವಿಯ ಸ್ವರ್ಗವಾಗಿಸಿ ನೆಲ ಜಲವ ಪಾವನಮಾಡಿ ಪಾರಿಜಾತದ ತವರು ಮಾಡಿದ
ಒಡೆಯನೆ ಕುಲಗೋಡದ ಶ್ರೀ ಬಲಭೀಮದೇವಾ
ಪ್ರಭು ಶ್ರೀ ರಾಮನಚಂದ್ರನ ಸದಾ ಹೃದಯದಲ್ಲಿರಿಸಿದ ವಜ್ರದೇಹಿಯೇ ನಂಬಿದ
ಭಕ್ತರ ಕಷ್ಟಗಳ ಸರಿಸಿ
ಉದ್ಧಾರ ಗೈದ ದಿವ್ಯ ಶಕ್ತಿ ನೀ ಕುಲಗೋಡದ ಶ್ರೀ ಬಲಭೀಮದೇವಾ
ಸೂರ್ಯ ಚಂದ್ರಾದಿಗಳಿರುವ ತನಕ ಕವಿವರ್ಯ ಕುಲಗೋಡು ತಮ್ಮಣ್ಣಪ್ಪನ ಕೀರ್ತಿಯನು ಸುವರ್ಣಾಕ್ಷರದ ಪುಟಗಳಲ್ಲಿ
ಮೂಡಿಸಿದ ಕೃಪಾಸಿಂಧುವೆ ಕುಲಗೋಡದ ಶ್ರೀ ಬಲಭಿಮದೇವಾ
ಕೌಜಲಗಿಯ ದೇಸಾಯರು
ನಿನ್ನ ಪರಮ ಭಕ್ತರಾಗಿ ಸ್ತುತಿಸಿ ನಿನ್ನ ಧನ್ಯರಾದರು
ಕಲಿಯುಗದಲ್ಲಿ ಧರ್ಮ
ಮತ್ತೆ ಉಳಿಸಿದ ವಾಯುಸುತ
ಶರಣು ನಿನಗೆ ಕುಲಗೋಡದ ಶ್ರೀ ಬಲಭೀಮಾ
ಶ್ರೀಕಾಂತ .ಅಮಾತಿ ಮುಂಬೈ