ಭರವಸೆಯ ಬೆಳಕು

ಭರವಸೆಯ ಬೆಳಕು

ಬಳಿಯಿರಲು ಜ್ಞಾನ ಕೋಶ
ಬೆಳಗುವ ಬಾ ಭಾವದೀಪ
ವಿದ್ಯೆಯ ಸುಪ್ರಭೆಯಲಿ
*ಭರವಸೆಯ ಬೆಳಕಲಿ*..

ಪಶುವಿನಂಥ ನಡೆಯು ಸಲ್ಲ
ಶಿಶುವಿನಂಥ ಮುಗ್ಧ ಭಾವ
ವಿವೇಕದರಿವು ಮೂಡಲು
ಓದು ಬೇಕು ಮೊದಲು…

ಬದುಕಿಗೊಂದು ಬೇಕು ನೆಲೆಯು
ಅಸ್ತಿತ್ವಕೆ ಬೇಕು ನಿಲುವು
ತಿಳಿಗೊಳಿಸಲು ಭ್ರಾಂತಿ-ಮತಿಯ
ಇಲ್ಲಿದೆ ಬಾ ಜ್ಞಾನ-ಕಲಶ…

ಹೊನ್ನು ಮಣ್ಣು ಎಲ್ಲಕಿಂತ
ವಿದ್ಯೆ-ವಿನಯ ಸಿರಿ-ಸಂಪದ
ಜ್ಞಾನವೊಂದೇ ತಿಳಿ ಶಾಶ್ವತ
ಮುನ್ನಡೆಸಲು ಅರಿವಿನ ಪಥ…!!

ಹಮೀದಾ ಬೇಗಂ ದೇಸಾಯಿ. ಸಂಕೇಶ್ವರ. 

Don`t copy text!