ನೆನಪಾಗುತ್ತಾಳೆ
ಹೊಕ್ಕಳು ಅಕ್ಕ
ಕದಳಿಯಾ….
ಮಾಯಾ ಮೋಹವೆಂಬ
ತನು ಸುತ್ತಿದ ಸೀರೆಯ
ಬಲೆಯ ಸಂಕೋಲೆಯ
ಕಿತ್ತೊಗೆದು….
ಪ್ರೇಮವೆಂಬ
ದಿಗಂಬರವನುಟ್ಟು
ಅಗೋಚರ ನಲ್ಲನ
ಚೆನ್ನಮಲ್ಲನ ಹುಡುಕುತ…
ಕಾಣದವನ ಕುರುಹು
ಕಂಡಕಂಡವರಿಗೆಲ್ಲ
ಕೇಳುತ ಹೇಳುತ
ಕಾಣಲು ಅರಸುತ್ತಾ….
ಅಂಗೈಯಲ್ಲಿ ಲಿಂಗವಾಗಿ
ಅಂಗಾಂಗದಲಿ
ಒಂದಾಗಿ ತನ್ನಲ್ಲೆ ಇರುವವನ
ಕೂಡಿ ಒಂದಾದಳು…
ಕದಳಿಯ ಹೊಕ್ಕವಳು
ಮತ್ತೆ ಮತ್ತೆ ನೆನಪಾಗುತ್ತಾಳೆ
ಕಾಯದ ಮಾಯದ ಮದವೇರಿದಾಗ…..!!
ಡಾ.ನಿರ್ಮಲಾ ಬಟ್ಟಲ
ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ಪ್ರೇಮಕ್ಕೆ ನಿಮ್ಮ ಇಂದಿನ ಲೌಕಿಕ ಪ್ರೇಮಕ್ಕೆ ಹೋಲಿಸುವದು ಯಾವ ರೀತಿಯಲ್ಲಿ ಹೋಲಿಕೆಯಾಗುತ್ತದೆ ಗೊತ್ತಿಲ್ಲ. ಈ ವ್ಯತ್ಯಾಸ ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿರುವ ಸೌದ್ರಿಯವರ ಗಮನಕ್ಕೂ ಬರಬೇಕಾಗಿತ್ತು.
Any way Vachana Literarure is being used for unwanted similies. Dont know where we will go and land up. Sorry to say this but its the reality of todays ignorance about Vachana Literature.