ತಾಯಿಗೂಡು
ನಿನ್ನ ಬೆಚ್ಚನೆಯ ಗೂಡಲಿ
ಗುಟಕನಿಟ್ಟು ಸಲುಹಿದೆ
ರೆಕ್ಕೆಪುಕ್ಕ ಬಿಚ್ಚಿ ಎನಗೆ
ಹಾರಲಂದು ಕಲಿಸಿದೆ
ಜಗದ ನೀತಿ ನಿಯಮ
ಬಿಚ್ಚಿಬಿಚ್ಚಿ ತಿಳಿಸಿದೆ
ರೀತಿ ನೀತಿ ತಿಳಿಸುತಾ
ಜಗದಿ ಬದುಕು ಕಲಿಸಿದೆ
ನೀನಿಲ್ಲದ ಗೂಡಲಿ
ಹೇಗೆ ಬದುಕ ಕಟ್ಟಲಿ
ನನ್ನ ನೀ ಬಿಡದಿರು
ಒಂಟಿಯಾಗಿ ಜಗದಲಿ
ನಿನ್ನ ಗೂಡಿನ ಸ್ವರ್ಗಸುಖ
ನಿತ್ಯ ಬಯಸುವೆ ನಿನ್ನ ಸಖ
–ಡಾ ದಾನಮ್ಮ ಝಳಕಿ