ಒಂದೇ ಗೂಡಿನ ಹಕ್ಕಿಗಳು

ಒಂದೇ ಗೂಡಿನ ಹಕ್ಕಿಗಳು

ಕಟ್ಟಿದೆ ಬಸವ ಗೂಡನು ಸಮಾನತೆ ಸಹಬಾಳ್ವೆ
ಹಂಚಿತಿನ್ನಬೇಕಾಗಿದೆ ಸ್ವಾರ್ಥ-ನಿಸ್ವಾರ್ಥದ ಕಾಳು-ಕಡಿ
ಬೇಗುದಿಯ ಜೀವಕೆ ಬಯಕೆಗಳ ಸೊಲ್ಲಿಲ್ಲ ಹಾದಿ ಹಾರಿ ಬಂದೆವು
ದೆಸೆ -ದಿಕ್ಕು ಹೆಕ್ಕಿ -ಮುಕ್ಕಿದೇವು
ತತ್ವ-ಸಿದ್ಧಾಂತ ರಸಭಾವ ಸುಮಧುರ ಸುಮ ಗಾನ ಗಾಂಧಿ ಬುದ್ಧ ಅಂಭೇಡ್ಕರ್ ಕುವೆಂಪು ಬೇಂದ್ರೆ ಮಾಸ್ತಿ ಅಲ್ಲಮ ಅಕ್ಕ ಒಬ್ಬೊಬ್ಬರು ಮನದ ಮೂಲೆ ಚಿಂತನ-ಮಂಥನಕೆ ಧ್ವನಿ ಯೆತ್ತಿ ಕೂಗಿದೇವು ಧರ್ಮ ಸಿದ್ಧಾಂತ ಕಾಯಕ ನಿಷ್ಠೆ ಇರುಳೆಲ್ಲ ಬೆಂದು ಬಸವಳಿದು ಹೊರಹಾಕುತ್ತೇವೆ ಗೂಡಿನಿಂದ ಜಾತೀಯತೆ
ಕೇಸರಿ -ಹಿಜಾಬ್ ರಕ್ತ ದೋಕುಳಿ ದೇಶ -ದಳ್ಳುರಿ ಬೇಡ ನಮಗೆ
ಶಾಂತಿ ಕ್ರಾಂತಿ ಧರ್ಮ ಮನುಜ ಮತ ವಿಶ್ವಪಥ
ಒಂದೇ ಗೂಡಿನ ಪಕ್ಷಿಗಳು
ಕೂಡಿ ನಲಿಯೋಣ ಹೆಕ್ಕಿ ತರೋಣ
ಕಾಳು-ಕಡಿ ತತ್ವ -ಸಿದ್ದಾಂತ
ಮರಿ-ಮಕ್ಕಳಿಗೆ ಉಳಿಸಿ ಬೆಳಸೋಣ
ಒಂದೇ ಗೂಡಿನ ಹಕ್ಕಿಗಳಾಗಿ…..

ಶ್ರೀಮತಿ ಸಾವಿತ್ರಿ ಕಮಲಾಪೂರ
ಮೂಡಲಗಿ

Don`t copy text!