ಬೈಕ್ ಕಳ್ಳರ ಸೇರೆಹಿಡಿದ ಪೋಲಿಸರು

ಬೈಕ್ ಕಳ್ಳರ ಸೇರೆಹಿಡಿದ ಪೋಲಿಸರು

ವರದಿ: ವೀರೇಶ ಅಂಗಡಿ ಗೌಡುರು

ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಇತ್ತಿಚೆಗೆ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ನೆತೃತ್ವದಲ್ಲಿ ಲಿಂಗಸುಗೂರು ಡಿ.ವೈ.ಎಸ್.ಪಿ ಎಸ್ ಎಸ್ ಹೂಲ್ಲೂರು ಹಾಗೂ ಮಸ್ಕಿ ವೃತ್ತದ ಸಿಪಿಐ ಸಂಜಿವ ಬಳಿಗಾರ ಮಾರ್ಗದರ್ಶನದಲ್ಲಿ ಮುದಗಲ್ ಪಿಎಸ್ಐ ಪ್ರಕಾಶ್ ರೆಡ್ಡಿ ಡಂಬಳ್ ಮತ್ತು ಅವರ ಸಿಬ್ಬಂದಿಗಳಾದ ಪಂಪಾಪತಿ,ಅಡಿವೆಪ್ಪ,ಅಮರೇಶ,ಮಂಜುನಾಥ ಅವರ ತಂಡವು ವಿಶೇಷ ಕಾರ್ಯಾಚರಣೆ ಮೂಲಕ ಬೈಕ್ ಕಳ್ಳರನ್ನು ಸೇರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಸಮೀಪದ ಗುಡಿಹಾಳ ಗ್ರಾಮದ ಅಪ್ಪಾಜಿ ತಂದೆ ಸಂಗಪ್ಪ ದೊಡ್ಡಮನಿ ಮತ್ತೊಬ್ಬನು ಪಟ್ಟಣದ ಮೇಗಳಪೇಟೆಯ ಶ್ರೀಧರ್ ತಂದೆ ಪರಸಪ್ಪ ಎಂದು ಗುರುತಿಸಲಾಗಿದೆ.

ಮುದಗಲ್ ಪೋಲಿಸರು ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೇಗಳಪೇಟೆಯ ಅಂಕಲಿಮಠ ಕ್ರಾಸ್ ಬಳಿ ಯುವಕರಿಬ್ಬರು ಅನುಮಾನಾಸ್ಪದವಾಗಿ ಸ್ಕೂಟಿಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿ ಅವರನ್ನು ತಡೆದು ವಿಚಾರಿಸಿ ವಾಹನದ ದಾಖಲಾತಿಗಳನ್ನು ನೀಡುವಂತೆ ಕೇಳಿದ್ದಾರೆ. ಅವರು ಯಾವುದೇ ದಾಖಲಾತಿಗಳನ್ನು ತೊರಿಸದೆ ಇದ್ದುದ್ದರಿಂದ ಅನುಮಾನಗೊಂಡು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವುದು ತಿಳಿದು ಬಂದಿದೆ.
01-03-2022 ರಂದು ಕನ್ನಾಪುರ ಹಟ್ಟಿ ಗ್ರಾಮದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಂದು ದ್ವಿಚಕ್ರ ವಾಹನ ಮತ್ತು ಇತರೆಡೆಗಳಲ್ಲಿ ಕದ್ದ ಐದು ದ್ವಿಚಕ್ರ ವಾಹನ ಕದ್ದಿರುವದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಗಳಿಂದ ಒಟ್ಟು 2,80,000 ಮೌಲ್ಯದ 6 ಬೈಕುಗಳನ್ನು ವಶಪಡಿಸಿಕೊಂಡು ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಈ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದದ್ದಾರೆ.

Don`t copy text!