ಕೂಡಲ ಸಂಗನ ಶರಣರ ನೊಸಲಿಗೆ ವಿಭೂತಿಯೆ ಶೃಂಗಾರ

 

ಕೂಡಲ ಸಂಗನ ಶರಣರ ನೊಸಲಿಗೆ ವಿಭೂತಿಯೆ ಶೃಂಗಾರ

ಜಾಗತಿಕ ಇತಿಹಾಸದಲ್ಲಿ ೧೨ನೆ ಶತಮಾನ ಅತೀ ಮಹತ್ವದ ಕಾಲ.ಸಮಾಜೋಧ್ಧಾರಕ ಆಂದೋಲನ ಭಕ್ತಿಯ ಮೂಲಕ ಹೊಸ ಜಾಗೃತಿಯನ್ನು ಉಂಟುಮಾಡಿದ ಕಾಲ. ಬಸವಣ್ಣನ ನಾಯಕತ್ವದಲ್ಲಿ ಷಟ್ ಸ್ಥಲ ಅಷ್ಟಾವರಣ ಸಿದ್ದಾಂತಗಳಿಗೆ ಪಾರಮಾರ್ಥಿಕ ನೆಲೆಯನ್ನು ಸಮಾಜಕ್ಕೆ ನೀಡಿದ ಕಾಲ. ಆದ್ದರಿಂದ ಶರಣ ಧರ್ಮ ಶರಣರ ಭಕ್ತಿಯ ಸೋಪಾನವಾಗಿದೆ.

ಅಷ್ಟಾವರಣ ಗಳಲ್ಲಿ ವಿಭೂತಿ ರುದ್ರಾಕ್ಷಿ ಗಳು ಶಿವನ ಸಾಂಕೇತಿಕ ಶಕ್ತಿಯ ಪ್ರಭೆಗಳು.ಇವೆರಡೂ ಬಹಿರಂಗದ ಆಚರಣೆಗಳಾದರೂ ಅಂತರಂಗದ ಅರಿವಿಗೆ ಪ್ರೇರಕವಾಗುವ ಶಕ್ತಿಗಳು. ಅಂತರಂಗದಲ್ಲಿ ಅಗೋಚರವಾಗಿ ಸ್ಪುರಿಸುವ ದಿವ್ಯ ಪ್ರಭೆಗಳನ್ನು ಬಹಿರಂಗದ ಆಚರಣೆ ಗೆ ತಂದವರು ಶರಣರು.

ಬಸವಣ್ಣನವರ ವಚನಗಳಲ್ಲಿ ವಿಭೂತಿಯ ವಿಸ್ತಾರತೆಯನ್ನು ವಚನ ಮೀಮಾಂಸೆ ಯ ಮೂಲಕ ಪ್ರವೇಶಿಸುವ ಪ್ರಯತ್ನ ಈ ಲೇಖನದ್ದಾಗಿದೆ. ವಿಭೂತಿ ಎಂಬುದು ಶಿವನ ಅತೀಂದ್ರಿಯ ಶಕ್ತಿ. ಇದಕ್ಕೆ ಭಸಿತ ಭಸ್ಮ ಎಂಬ ಹೆಸರು ಉಂಟು. ಶರಣ ಧರ್ಮದ ಹೇಳಿಕೆಯಂತೆ ಶ್ರೀ ವಿಭೂತಿ ಪರಶಿವನ ,ಪರಮ ಚೈತನ್ಯ ಚಿತ್ ಸ್ವರೂಪ ಎನ್ನುತ್ತಾರೆ.


ಬಸವಣ್ಣ ಹೇಳುವಂತೆ…

ಶ್ರೀ ‌ವಿಭೂತಿ ರುದ್ರಾಕ್ಷಿ ಯೆ ಭಕ್ತಿ ಮುಕ್ತಿ ಗೆ ಸಾಧನವೊ ಎನ್ನ ತಂದೆ. ಶಿವ ಶಿವ ಎಂಬ ಮಂತ್ರ‌ ಎನಗೆ ಅಮೃತಾರೋಗಣೆಯೋ ಎನ್ನ ತಂದೆ.ಕೂಡಲ ಸಂಗಮದೇವ ನಿಮ್ಮ ನಾಮದ ರುಚಿ ತುಂಬಿತೊ ಎನ್ನ ತನುವ…

ಭಕ್ತನ ಅಂಗದ ಮೇಲೆ ಲಿಂಗವಿಲ್ಲದೆ ವಿಭೂತಿ ರುದ್ರಾಕ್ಷಿಯನ್ನು ಧರಿಸಲಾಗದು.ಎಂಬ ಮನೋವೇದನೆ ಬಸವಣ್ಣನದು.

ನಿರೂಪಕನಾದ ಸಾಧಕ ತನ್ನ ಪ್ರತಿ ಹಂತದಲ್ಲಿ ಶಿವನರಿವಿನ ಬೆಂಕಿಯಲ್ಲಿ ಸುಟ್ಟು ವಿಭೂತಿಯನ್ನು ಧರಿಸುತ್ತಾನೆ. ಶಿವಮಂತ್ರ ಸಾಮಿಪ್ಯದಿಂದ ಭಗವಂತನನ್ನು ಪಡೆಯುವ ಹಂಬಲ ವುಳ್ಳವನಾಗಿರುತ್ತಾನೆ.ಶಿವ ಸಾಮಿಪ್ಯ ಮಂತ್ರವೆ ಎನ್ನ ತನು ಮನಕೆ ಚೈತನ್ಯವಾಗಿದೆ. ಶಿವನ ಆತ್ಮಾನಂದದ ಅಮೃತ ಪಡೆದು ಪರಂಜ್ಯೋತಿಯ ಸ್ವರೂಪದ ವಿಭೂತಿ ಧರಿಸಿದೆನು. ಈ ಭವಬಂಧನದಲ್ಲಿ ಶುಭ್ರತೆಯ ಭಸ್ಮವನ್ನು ಧರಿಸಿ ಶಿವಾನುಭೂತಿಯನು ಪಡೆದೆನು ಎನ್ನುತ್ತಾನೆ.

ಸಂಸ್ಕ್ರತ ಭಾಷೆಯಲ್ಲಿ ವಿಭೂತಿ ಭಸ್ಮ ಎನ್ನುತ್ತಾರೆ. ಕನ್ನಡದಲ್ಲಿ ಅಂಗಾರ .ಬೂದಿ ಎನ್ನುತ್ತಾರೆ. ಈ ಕಾರಣಕಾಗಿ ವಿಭೂತಿಯನು ಧರ್ಮದ ಶಿಷ್ಟಾಚಾರಕ್ಕಾಗಿ ಬಳಸುವುದಿಲ್ಲ .ಅದರಲ್ಲಿ ಮನೋವಿಜ್ಞಾನವಿದೆ.ವಿ ಭೂತಿ ಭಸಿತ ಭಸ್ಮ. ಕ್ಷಾರಾ ಮತ್ತು ರಕ್ಷಾ ಎಂಬ ೫ ಹೆಸರುಗಳು ಭಕ್ತನ ಆರ್ಥತೆಗೆ ಕಾರಣವಾಗುವ ಧರ್ಮ ಕವಚ ಗಳು. ಶಿವತತ್ವವನ್ನು ಪ್ರಕಾಶಗೊಳಿಸುವ ಅತೀಂದ್ರಿಯ ಸಿದ್ದಾಂತಗಳು. ಶಿವತತ್ವಕ್ಕೆ ಭಸಿತವೆಂದು ಪಾಪಗಳನ್ನು ನಾಶ ಪಡಿಸುವುದರಿಂದ ಭಸ್ಮವೆಂದು ವಿಪತ್ತುಗಳನ್ನು ಕ್ಷಯ‌ ಗೊಳಿಸುವುದರಿಂದ ಕ್ಷಾರಾವೆಂದು . ಭೂತ ಪಿಶಾಚಿಗಳಿಂದ ಕಾಪಾಡುವುದರಿಂದ ರಕ್ಷೆ ಎಂದು ಕರೆಯಲಾಗಿದೆ.

ವಿಭೂತಿ ಬಳಕೆಗೆ ಅನೇಕ ತಾತ್ವಿಕ ಅಂಶಗಳಿವೆ. ಶಕ್ತಿಯನ್ನು ವರ್ಗಾಯಿಸುವ ಅಥವಾ ಸಂವಹನ ಮಾಡುವ ಮಹತ್ತರವಾದ ಮಾದ್ಯಮವಾಗಿದೆ. ಅದು ಚೇತನ ಶರೀರವನ್ನು ನಿದೇ೯ಶಿಸುವಲ್ಲಿ ಅಥವಾ ನಿಯಂತ್ರಿಸುವಲ್ಲಿ ನೆರವಾಗುವ ಸಾಮರ್ಥ್ಯವನ್ನು ಪಡೆದಿದೆ. ಅದಲ್ಲದೆ ವಿಭೂತಿಯನ್ನು ಧರಿಸಲು ಒಂದು ಸಾಂಕೇತಿಕ ಮಹತ್ವವಿದೆ.ಅದು ಜೀವನದ ನಶ್ವರತೆ ಕುರಿತು ನಿರಂತರವಾಗಿ ನೆನಪು ನೀಡುವಂತಾಗಿದೆ.

ಬಸವಣ್ಣ ತನ್ನ ಕರಸ್ಥಲದ ಲಿಂಗವನ್ನು ಚಿತ್ ಚೈತನ್ಯ ದಾಯಕವಾಗಿ ಕಾಣುವ ಹಂಬಲ ಹೊತ್ತ ದಾಶ೯ನಿಕ. ಹೀಗಾಗಿ ಬಸವಣ್ಣನ ನಿವೇದನೆ. ಅಯ್ಯಾ ಶ್ರೀ ಮಹಾ ವಿಭೂತಿಯಿಂದ ಕಂಡೆ ಆ ನಿಮ್ಮ ದಿವ್ಯ ಬೆಳಗಿನ ಹೊಳಹ.ಈ ಎನ್ನ ಕರಸ್ಥಲದೊಳಗೆ ಅಯ್ಯಾ“. ಎನ್ನುವ ಆಚರಣೆ ಮಾರ್ಗವಾಗಿದೆ. ಭಕ್ತನ ಅಂತರಂಗದ ಆಶೋತ್ತರಗಳನ್ನು ಪ್ರಕಟಿಸುವ .ಈ ನಿವೇದನೆ ಕವಿ ಮನಸ್ಸಿನ ಕನ್ನಡಿ ಯಾಗಿದೆ.ನೊಸಲ ವಿಭೂತಿಯ ಬಗ್ಗೆ ಬಸವಣ್ಣನಿಗೆ ಇಷ್ಟಕ್ಕೆ ತೃಪ್ತಿ ಯಾಗುವುದಿಲ್ಲ. ಎನ್ನ ಕರಸ್ಥಲದಲ್ಲಿ ಜ್ಞಾನ ಭರಿತ ಪ್ರಕಾಶವನ್ನು ಕಂಡೆ.ಅಯ್ಯಾ ಎನ್ನುವಲ್ಲಿ ಶಿವನ ಜೊತೆ ಆತ್ಮಾನಂದ .
ಉದಾ.. ಆನು ಭಕ್ತನಲ್ಲಯ್ಯ .ಆನು ವೇಷದಾರಿಯಲ್ಲಯ್ಯ. ನಿಮ್ಮ ಶರಣರ ಮನೆಯ ಮಗ ನಾನಯ್ಯ.
ಶಿವನನ್ನು ಅಯ್ಯಾ ಎಂದು ಸಂಬೋದಿಸಿ ಭಕ್ತ ಬಸವಣ್ಣ ವಿಶಿಷ್ಟ ಅನುಭಾವಿ ಯಾಗುತ್ತಾನೆ.

ವಿಭೂತಿಯನ್ನು…ಕಲ್ಪ . ಅನುಕಲ್ಪ .ಉಪಕಲ್ಪ ಅಕಲ್ಪ ಎಂದು ತಂತ್ರ ಶಾಸ್ತ್ರದಲ್ಲಿ ೪ ಭಾಗಗಳಾಗಿ ಹೇಳಲಾಗಿದೆ.ಇವುಗಳಲ್ಲಿ ಕಲ್ಪಭಸ್ಮ ಶ್ರೇಷ್ಠವೆಂದು.ಅದು ದೊರೆಯದಿದ್ದಲ್ಲಿ ಈ ಮೂರು ಭಸ್ಮಗಳನ್ನು ಉಪಯೋಗಿಸಬಹುದೆಂದು ಹೇಳಲಾಗುತ್ತದೆ. ಪರ್ಯಾಯ ಭಸ್ಮವನ್ನು ತಯಾರಿಸಲು .ಹಾಲು. ತುಪ್ಪ. ಜೇನುತುಪ್ಪದ ಜೊತೆಗೆ ಹಸುವಿನ ಸೆಗಣಿಯಿಂದ ಸುಟ್ಟ ನಂತರ ಉಂಟಾಗುವ ಭಸ್ಮವನ್ನು ಪವಿತ್ರ ವಿಭೂತಿ ಎಂದು ಕರೆಯಲಾಗುತ್ತದೆ. ಇದು ಶಿವನ ಆರಾಧನಾ ಅಂಶವಾದ ವಿಭೂತಿ ಆಧ್ಯಾತ್ಮದ ಶಕ್ತಿ ಲಭಿಸುತ್ತದೆ. ಅನಾರೋಗ್ಯ ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ. ವಿಭೂತಿಯ ಇನ್ನೊಂದು ಅರ್ಥ ವೆಂದರೆ ಆರೊಗ್ಯವನ್ನು ಗುಣಪಡಿಸುವ ಶಕ್ತಿಯಿದೆ. ಪಾಶ್ಚಾತ್ಯರು ಅನೇಕ ಔಷಧಗಳಿಗೆ ವಿಭೂತಿ ಬಳಸುತ್ತಾರೆ.

ಲಿಂಗಾಯತ ಸಿದ್ದಾಂತದ ಪ್ರಕಾರ ಈ ಬೌತಿಕ ದೇಹ ಚೇತನವನ್ನು ನಿದೇ೯ಶಿಸುವಲ್ಲಿ ಅಥವಾ ನಿಯಂತ್ರಿಸುವಲ್ಲಿ ನೆರವಾಗುವ ಸಾಮರ್ಥ್ಯ ವನ್ನು ವಿಭೂತಿ ಪಡೆದಿದೆ. ಬಸವಣ್ಣನ ಮಾತುಗಳನ್ನು ಗಮನಿಸಬೇಕು. ಶ್ರೀ ವಿಭೂತಿ ರುದ್ರಾಕ್ಷಿ ಯಿದ್ದರೆ ಲಿಂಗವೆಂಬೆ. ಇಲ್ಲದವರ ಭವಿ ಎಂಬೆ.ಕೂಡಲ ಸಂಗಮ ದೇವ.ಸದ್ಭಕ್ತರ ನೀನೆಂಬೆ..

ವಿಭೂತಿಗೆ ಈ ದೇಹವನ್ನು ಪವಿತ್ರ ಗೊಳಿಸುವ ಶಕ್ತಿಯಿದೆ.ವಿಭೂತಿ ಧಾರಣದಿಂದ ಸಚ್ಚಾರಿತ್ರ್ಯ ಧರ್ಮ ಪ್ರವರ್ತಕ ನಿಷ್ಕಲ್ಮಶ ಮನದ ಪ್ರತಿಬಿಂಬಿತ ನಾಗುತ್ತಾನೆ.ಭಕ್ತಿ ಮಾರ್ಗದ ಶರಣನೆಂದು ಗುರುತಿಸುವ ಶಕ್ತಿ ಭಸಿತಕ್ಕಿದೆ. ಲಿಂಗಾಯತ ಧರ್ಮದ ಲಾಂಛನ ಎಂಬುದು ಗಮನಾರ್ಹ.

ನೀರಿಗೆ ನೈದಿಲೆಯೆ ಶೃಂಗಾರ.ಸಮುದ್ರಕ್ಕೆ ತೆರೆಯೆ ಶೃಂಗಾರ.ನಾರಿಗೆ ಗುಣವೆ ಶೃಂಗಾರ.ಗಗನಕ್ಕೆ ಚಂದ್ರಮನೆ ಶೃಂಗಾರ. ನಮ್ಮ ಕೂಡಲ ಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ.

ಈ ವಚನ ಬಸವಣ್ಣ ನವರ ಆದ್ಯಾತ್ಮ ಮಾರ್ಗದ ವಿಶೇಷ ಬೆಳಕು ಮತ್ತು ಬೆಡಗು. ಇಲ್ಲಿಯ ಪದಗಳು ನೈದಿಲೆ . ಸಮುದ್ರ. ನಾರಿ. ಚಂದ್ರ ಪದಗಳು ಭಿನ್ನ ಅರ್ಥ ವನ್ನು ಸೂಚಿಸುವ ಶಬ್ದಗಳು.

ಮನವೆಂಬ ಸರೋವರದಲ್ಲಿ ಸಾತ್ವಿಕ ಗುಣದ ನೈದಿಲೆ ಹುಟ್ಟಿ ದಾಗ ಸಂಸಾರ ಸಾಗರ ಗೆಲ್ಲಲು ಸಾಧ್ಯವಾಗುತ್ತದೆ. ಪರಾಶಕ್ತಿ ರೂಪವಾದ ಸ್ತ್ರೀ ಅವಳ ನಡೆ ನುಡಿಯ ಗುಣವೆ ಸೌಂದರ್ಯದ ಆಭರಣ ವಾಗುತ್ತದೆ.ಆತ್ಮತತ್ವ ವೆಂಬ ನೀಲ ಆಗಸದಲ್ಲಿ ಚಂದ್ರನೆಂಬ ಶಾಂತಿ ಧೂತನಾದ ಶರಣನು ನೊಸಲಿಗೆ ವಿಭೂತಿ ಧರಿಸಿ ಶರಣ ಭಕ್ತ ಸಮುದಾಯದಲ್ಲಿ ತಾತ್ವಿಕ ಜ್ಞಾನವನ್ನು ಕೊಡುವ ಅನುಭಾವಿ.

ಶೃಂಗಾರ ಎಂಬ ಮಾತಿನ ಆಂತರಿಕ ಅರ್ಥವೆ ಪ್ರಧಾನವಾದುದು. ಮೂರು ಬೆರಳುಗಳಿಂದ ಮೂರು ರೇಖೆಗಳು ಮೂಡುವಂತೆ ಧರಿಸುವ ತ್ರಿಪುಂಡ ಧಾರಣ ಕ್ರಮವೆ ಶ್ರೇಷ್ಠ ವಾದದ್ದು. ಅರ್ಥ ವತ್ತಾದದ್ದು.ಮನಸ್ಸಿನ ಕಾಮನೆಗಳನ್ನು ಗೆದ್ದು ಪರಿಶುದ್ಧ ವಾದುದನ್ನು ಅದು ಪ್ರತಿಬಿಂಬಿಸುತ್ತದೆ.

ಮೊದಲ ಸಾಲು ಅಹಂ ಅನ್ನು ತೆಗೆದು ಹಾಕಿದರೆ ಎರಡನೆ ಸಾಲು ಅಜ್ಞಾನವನ್ನು ತೆಗೆದು ಹಾಕುತ್ತದೆ. ಮೂರನೆ ಸಾಲು ಕೆಟ್ಟ ಕಮ೯ಗಳನ್ನು ತೆಗೆದು ಹಾಕುವುದು.ನಾವು ಧರಿಸುವ ಭಸ್ಮವು ನಮ್ಮನ್ನು ಎಚ್ಚರಿಸತಕ್ಕಂತಹ ಅಂಶಗಳು. ನಮ್ಮ ಸುಳ್ಳು ಗಳನ್ನು ದೇಹದೊಂದಿಗೆ ಸುಡಬೇಕು.ಜನನ ಹಾಗು ಮರಣದ ಮಿತಿಯಿಂದ ಮುಕ್ತರಾಗಬೇಕೆಂದು ತಿಳಿಸುತ್ತದೆ. ಕೂಡಲ ಸಂಗನ ಶರಣರ ನೊಸಲಿಗೆ ವಿಭೂತಿ ಯೆ ಶೃಂಗಾರವೆಂದು ಅಡ್ದ ವಿಭೂತಿ ಇಲ್ಲದವರ ಮುಖವ ನೋಡಲಾಗದೆಂದು ಬಸವಣ್ಣ ಹೇಳುತ್ತಾನೆ.

ವಿಭೂತಿಯನ್ನು ಧರಿಸುವ ಕ್ರಿಯೆ ಯೋಗ ಕ್ರಿಯೆ ಯಾಗಿದೆ. ಇದುವೆ ಶಿವಯೋಗದ ಹಂತವಾಗಿದೆ. ದೇಹದ ಸಪ್ತ ಚಕ್ರಗಳಿಗೆ ಶಕ್ತಿಯುತವಾದ ಕೇಂದ್ರ ಬಿಂದುಗಳಿವೆ.ಇವು ಸ್ಥೂಲ ಸೂಕ್ಷ್ಮ ಕಾರಣ ಶರೀರಗಳ ಮೂಲಕ ಆವೃತವಾಗಿವೆ. ಈ ಚಕ್ರಗಳು ಮೂಲಾಧಾರ . ಸ್ವಾಧಿಸ್ಟಾನ.ಮಣಿಪುರ .ಅನಾಹತ .ವಿಶುದ್ದ .ಆಜ್ಞಾ ಮತ್ತು ಸಹಸ್ರಾರ ಚಕ್ರ . ಇದಕ್ಕೆ ಪತಾಂಜಲಿ ಯೋಗದ ಶಿವಯೋಗದ ವಿಸ್ತಾರತೆಯ ಜ್ಞಾನ ಸಾಂದ್ರತೆ ಬೇಕಾಗುವುದು.
ನಮ್ಮ ಶರಣ ಸಂಸ್ಕ್ರತಿಯಲ್ಲಿ  ಸಾಧಕ ವ್ಯಕ್ತಿಯ ಬೆಳವಣಿಗೆಯಲ್ಲಿ ವಿಭೂತಿಯು ಸಾಧನತ್ರ್ಯವಾಗಿದೆ ಭಸ್ಮವು ಭಕ್ತಿ ಯ ಕಂಪನವನ್ನು ಕೊಡುತ್ತದೆ.ಇದರ ಹಿಂದಿರುವ ವಿಜ್ಞಾನ ವನ್ನು ಪುನಃ ಚೇತನ ಗೊಳಿಸುತ್ತದೆ.

-ಡಾ .ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು
ರಾಯಚೂರು.

Don`t copy text!