ನೀರಮೇಲಿನ ಗುಳ್ಳೆ ಬದುಕು

ನೀರಮೇಲಿನ ಗುಳ್ಳೆ ಬದುಕು

ಬದುಕೆ ಒಂದು
ವಿಚಿತ್ರ
ಆಕಾರ ನಿರಾಕಾರ
ವಿರದ ಕುರುವು
ಇದ್ದಷ್ಟು ದಿವಸ
ನಕ್ಕು ನಗಿಸುವ ಗುರುತು
ರೂಪವೇ ಇಲ್ಲದ ಬದುಕು
ಬಿಸಿಲು ಕುದುರೆ
ಬೆನ್ನಟ್ಟಿದಂತೆ
ನೀರಿನ ಗುಳ್ಳೆಯ
ಪಯಣ
ವಿದಿಯ ಎತ್ತುಗಳು
ಬಾಳಿನ ಬಂಡಿ
ದೂಡಬೇಕು
ಗುರಿ ಮುಟ್ಟಲು
ತೆವಳಲೇಬೇಕು
ಇದ್ದಷ್ಟು ದಿನ
ಸಂತೋಷ -ದುಃಖ
ಮೈಮರೆತು ಸಾಗಬೇಕು
ಪ್ರೀತಿ ಹಂಚಿ
ಹೋಗಬೇಕು
ರಾಗ ದ್ವೇಷ ಇಲ್ಲದೇ
ಮಮ್ಮಲ ಮರಗಬೇಕು
ನಾವು ಬದುಕಬೇಕು
ಅವರು ಬದುಕಬೇಕು
ಬಸವತತ್ವವ
ಹೊತ್ತು ಸಾಗಬೇಕು
ಭಾರವಾಗದಂತೆ
ಇದೇ ಅಲ್ಲವೇ ?
ಅಣ್ಣ ನ ಆಸೆ
ನಮ್ಮೆಲ್ಲರ ಹೋರಾಟ
ಗುದ್ದಾಡಿ ವದ್ದಾಡಿ
ಸೋತು ಗೆದ್ದು
ಬಸವ ಬಾ ಎಂದು
ಕರೆದಾಗ
ಬಿಟ್ಟು ಹೋಗುವ
ಕುರುಹು
ಕೊನೆಗೆ
ನೆನಪಿಗೊಂದು
ಮಾಲೆ
ಶ್ರಂದ್ದಾಂಜಲಿ ಅರ್ಪಣೆ
ಇಷ್ಟೇ ಬದುಕು……..

ಶ್ರೀಮತಿ ಸಾವಿತ್ರಿ ಕಮಲಾಪೂರ
ಮೂಡಲಗಿ

Don`t copy text!