ಗಜಲ್ ರಚನೆಗೆ ಹೃದಯವಂತಿಕೆ ಅವಶ್ಯ-ಸಿದ್ಧರಾಮ ಹೊನ್ಕಲ್ ಅಭಿಮತ

ಗಜಲ್ ರಚನೆಗೆ ಹೃದಯವಂತಿಕೆ ಅವಶ್ಯ-ಸಿದ್ಧರಾಮ ಹೊನ್ಕಲ್ ಅಭಿಮತ

e-ಸುದ್ದಿ ವಿಜಯಪುರ

ಗಜಲ್ ಒಂದು ಕಾವ್ಯ ಪ್ರಕಾರವಾಗಿದ್ದು ,ಕಾಮ-ಪ್ರೇಮ, ನೋವು-ನಲಿವು ,ಸುಖ-ದುಃಖ, ವಿರಹ-ವೇದನೆ ಗಳನ್ನು ಅಕ್ಷರದಲ್ಲಿ ಹಿಡಿದಿಡುವ ಸಾಮಥ್ರ್ಯ ಹೊಂದಿದೆ. ಕನ್ನಡದಲ್ಲಿ ೨೦೦ ಕ್ಕೂ ಹೆಚ್ಚು ಜನ ಗಜಲ್ ಕಾರರು ಇದ್ದಾರೆ. ಗಜಲ್ ಕಾರನಿಗೆ ಅಂತಃಕರಣ ಹಾಗೂ ಹೃದಯವಂತಿಕೆ ಇದ್ದರೆ ಉತ್ತಮವಾದ ಗಜಲ್ ಗಳು ಸೃಷ್ಟಗೊಳ್ಳುತ್ತವೆ. ಎಂದು ಸಿದ್ಧರಾಮ ಹೊನ್ಕಲ್ ಹೇಳಿದರು.

ಅವರು ನಗರದ ವನಿತಾ ಉತ್ಕರ್ಷ ಮಂಡಳದ ಸಭಾ ಭವನದಲ್ಲಿ ಪ್ರಭಾವತಿ ಎಸ್ ದೇಸಾಯಿಯವರ “ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ” ಮತ್ತು” ದರ್ಪಣ”ಕೃತಿಗಳ ಲೋಕಾರ್ಪಣಾ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತಾಡಿದರು.

ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಮತ್ತು ಗಗನ ಪ್ರಕಾಶನಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಪಾಲರೆಡ್ಡಿ ಮುನ್ನೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಗಜಲ್ ಅಂದರೆ ಬದುಕಿನ ಅನುಸಂದಾನವೆಂದು ಹೇಳಿದರು.

ಕವಿಯತ್ರಿ ಹೇಮಲತಾ ವಸ್ತ್ರದ ಅವರ” ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ”ಮತ್ತು ” ದರ್ಪಣ” ಕೃತಿಗಳನ್ನು ಪರಿಚಯಿಸಿದರಲ್ಲದೆ ತರಹೀ ಗಜಲ್ ಗಳ ಮಹತ್ವ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಂಬುನಾಥ ಕಂಚ್ಯಾಣಿ ಮಾತನಾಡಿ ವಿಜಯಪುರ ದಲ್ಲಿ ಗಜಲ್ ಕಾವ್ಯ ಸಮೃದ್ಧವಾಗಿ ಬೆಳೆಯಲು ಸ್ಪಂದನ ಸಾಹಿತ್ಯ ಆಸಕ್ತರ ಬಳಗ ಕಾರಣವೆಂದು ಹೇಳಿದರು. ಸ್ಪಂದನ ಬಳಗದ”ಗಜಲ್ ಸ್ಪಂದನ”ಗ್ರಂಥ ಹಿರಿಯ ಸಾಹಿತಿಗಳ ಮೆಚ್ಚುಗೆಗೆ ಪಾತ್ರವಾಯಿತೆಂದು ಹೇಳಿದರು.ವೇದಿಕೆಯಲ್ಲಿ ಪ್ರೇಮಾ ಹೂಗಾರ,ಪ್ರಭಾವತಿ ದೇಸಾಯಿ ಉಪಸ್ಥಿತರಿದ್ದರು.

ಗಿರಿಜಾ ಮಾಲಿಪಾಟೀಲ ಸ್ವಾತಿಸಿದರು.ಸಿದ್ಧರಾಮ ಬಿರಾದಾರ ವಂದಿಸಿದರು. ಎನ್ಂಎಂ,ಹಂಡಿ ಕಾರ್ಯಕ್ರಮ ನಿರೂಪಿಸಿದರು . ಕಾರ್ಯಕ್ರಮದಲ್ಲಿ ಡಾ.ಬಾಳಾಸಾಹೇಬ ಲೋಕಾಪೂರ,ಡಾ.ಚನ್ನಪ್ಪ ಕಟ್ಟಿ,ವಿ ಸಿ ನಾಗಠಾಣ ,ಮಲ್ಲಿಕಾರ್ಜುನ ಮೇತ್ರಿ. ಸಂಗಮೇಶ ಬದಾಮಿ,ಮಲ್ಲಿಕಾರ್ಜುನ ಯಂಡಿಗೇರಿ ,ಸುಭಾಸ ಯಾದವಾಡ, ಮುಂತಾದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಸಾಹಿತ್ಯ ಕ್ಷೇತ್ರದಿಂದ ದೂರಾದ ಮಕ್ಕಳ ಸಾಹಿತಿಗಳಾದ ಕಂಚ್ಯಾಣಿ ಶರಣಪ್ಪನವರ ಆತ್ಮಕ್ಕೆ ಶಾಂತಿಕೋರಿ ಮೌನ ಆಚರಿಸಲಾಯಿತು.

ಮಧ್ಯಾಹ್ನದ ಗಜಲ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಡಾ.ಬಿ ಜಗದೀಶ ಮಾತನಾಡಿ ೨೦” ಜನ ಗಜಲ್ ಕಾರರು ವಾಚನ ಮಾಡಿದ ಗಜಲ್ ಗಳನ್ನು ವಿಮಶಿ೯ಸಿ ಮಾತನಾಡಿದರು.,ಗಜಲ್ ರಚನೆಗೆ ಧ್ಯಾನ,ಪ್ರೀತಿ ದಯೆ,ಬೇಕೆಂದು ,ವಚನಗುಮ್ಮಟ ಮತ್ತು ಗೋಳಗುಮ್ಮಕ್ಕೆ ಹೆಸರಾದ ವಿಜಯಪುರ ಈಗ ಗಜಲ್ ಗುಮ್ಮಟವಾಗಿ ಹೆಸರು ಮಾಡಿದೆಂದು ಹೇಳಿದರು.

ಡಾ.ಮಲ್ಲಿನಾಥ ತಳವಾರ ಗಜಲ್ ಕಾವ್ಯದ ಹುಟ್ಟು, ಬೆಳವಣಿಗೆ ಕುರಿತು ಮಾತಾಡಿದರು. ಗಜಲ್ ರಚನಾಕಾತಿ೯ ಪ್ರಭಾವತಿ ದೇಸಾಯಿ ಲೇಖಕಿಯ ಪರಮಾತನಾಡಿದರು. ತಾವು ಈ ಮಟ್ಟಕ್ಕೆ ಬೆಳೆಯಲು ಹಿರಿಯರಾದ ಕಂಚ್ಯಾಣಿ ಶರಣಪ್ಪನವರ ಆಶೀವಾ೯ದ ಹಾಗೂ ಪ್ರೋತ್ಸಾಹ ಕಾರಣವೆಂದು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಡಾ.ರೇಖಾ ಪಾಟೀಲ,ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ,ಗೌರಿ ಪಾಟೀಲ,ಪ್ರಕಾಶಸಿಂಗ್ ರಜಪೂತ, ಬಿ.ಎಸ್.ಸಜ್ಜನ,ಸಿದ್ಧಲಿಂಗಪ್ಪ ಹದಿಮೂರು,ಸುಮಾ ಗಾಜರೆ,ಹೇಮಲತಾ ವಸ್ತ್ರದ ,ವಿದ್ಯಾವತಿ ಅಂಕಲಿಗಿ, ಕೃಷ್ಣ ಬೀಡಕರ,ಪ್ರಿಯಾ ಪ್ರಾಣೇಶ ಹರಿದಾಸ , ಮುಂತಾದವರು ಗಜಲ್ ವಾಚನ ಮಾಡಿದರು.

Don`t copy text!