ಜಾತ್ಯಾತೀತ ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವ ವಿಶ್ವವ್ಯಾಪಿ ಗೊಳ್ಳಲಿ

ಜಾತ್ಯಾತೀತ ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವ ವಿಶ್ವವ್ಯಾಪಿ ಗೊಳ್ಳಲಿ

e-ಸುದ್ದಿ ಬೈಲಹೊಂಗಲ

ಬಸವಣ್ಣನವರು ಜಗತ್ತಿಗೆ ನೀಡಿದ ವಚನಗಳು ಇಂದಿಗೂ ಪ್ರಸ್ತುತ ಅವುಗಳನ್ನು ವಿಶ್ವವ್ಯಾಪಿಗೊಳಿಸುವ ಕೆಲಸ ಎಲ್ಲರೂ ಮಾಡಬೇಕು ಎಂದು ಸ್ಥಳೀಯ ಪತ್ರಿ ಬಸವ ನಗರದ ಪತ್ರಿಬಸವೇಶ್ವರ ಜಾತ್ರಾಮಹೋತ್ಸವದ ಪ್ರಥಮ ದಿನದ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ  ಶ್ರೀ ಮಹಾಂತೇಶ ಕೌಜಲಗಿ ಮಾತನಾಡಿದರು.

ಷಟಸ್ಥಲ ಧ್ವಜಾರೋಹಣ ನೆರವೇರಿಸಿದ  ಶರಣ ದಂಪತಿಗಳಾದ ವೀಣಾ ಮಹೇಶ್ ಹಿರೇಮಠ ನಿಸ್ವಾರ್ಥ ಸೇವೆ ದಾಸೋಹ ಭಾವನೆಯಿಂದ ಕಟ್ಟಿದ ಸಂಘ ಸಂಸ್ಥೆಗಳು ಧರ್ಮ ಸಮಾಜ ನಾಡು ದೇಶ ಕಟ್ಟುತ್ತವೆ ಎಂದರು.

ಮಡಿವಾಳಪ್ಪ ಸಂಗೊಳ್ಳಿ ಮಾತನಾಡಿ ಲಿಂಗಾಯತರ ಪ್ರತಿಯೊಂದು ಕಾರ್ಯಕ್ರಮಗಳು ಷಟಸ್ಥಲ ಧ್ವಜಾರೋಹಣದೊಂದಿಗೆ ನೆರವೇರಬೇಕು ಎಂದರು. ಶರಣೆ ಪ್ರೇಮಕ್ಕ ಅಂಗಡಿ ನೇತೃತ್ವ ವಹಿಸಿದ್ದರು ಎ ಎಸ್ ಐಯ್ ಅಶೋಕ್ ಸಾಲಿ ಶಿವಾನಂದ ಮಡಿವಾಳರ ಶ್ರೀಶೈಲ್ ಶರಣಪ್ಪನವರು ಮಹೇಶ್ ಕೋಟಗಿ ಸಂತೋಷ್ ಕೊಳವಿ ನಾಗನಗೌಡ ಪಾಟೀಲ್ ವೀರಭದ್ರಪ್ಪ ಕಾಪಸೆ ದುಂಡಯ್ಯ ಕುಲ್ಕರ್ಣಿ ಮಹಾದೇವ್ ಕರಡಿಗುದ್ದಿ ಮಲ್ಲಯ್ಯ ಮಠಪತಿ ಪತ್ರಯ್ಯ ಕುಲಕರ್ಣಿ ನಗರದ ಸದ್ಭಕ್ತರು ಅಜಗಣ್ಣ ಹಾಗೂ ಮುಕ್ತಾಯಕ್ಕ ಬಳಗ ಉಪಸ್ಥಿತರಿದ್ದರು

ಸುವರ್ಣ ಬಿಜಗುಪ್ಪಿ ಸ್ವಾಗತಿಸಿದರು ಕಲಾವತಿ ಕಡಕೋಳ ವಂದಿಸಿದರು ಕಮಲಾಕ್ಷಿ ಅರಳಿಕಟ್ಟಿ ನಿರೂಪಿಸಿದರು

Don`t copy text!