ಪ್ರತಿಪಲನ

ಪ್ರತಿಪಲನ

ಮನಸದು ಕನ್ನಡಿ
ಬದುಕಿನ ಮುನ್ನುಡಿ

ಪ್ರೀತಿ ಪ್ರೇಮ ಕರುಣೆ
ಪ್ರತಿಫಲಿಸಲಿ

ಅಳಿಸಬೇಕು ಚಿತ್ತ ವಿಕಾರ
ಮದಮತ್ಸರ ಅಹಂಕಾರ

ಶುದ್ಧ ಚಿತ್ತದ ನಡೆನುಡಿ
ಸುಂದರ ಅಲಂಕಾರ

ಭ್ರಾಂತಿ ಸಂಶಯ
ಸರಿದರೆ ತಪ್ಪುವುದು ಪ್ರಮಾದ

ಆಲಸ್ಯ ವ್ಯಾಧಿಗೆ ಮೂಲ
ದುಖಃ ಹತಾಶಯ ಕಾಲ

ಅವಿರತಿ ಕಳೆದು
ನೆಲೆಸಲಿ ಶಾಂತಿ ಮನದಿ

ಕನ್ನಡಿಯಲ್ಲಿ ಸಂತೃಪ್ತ
ಬದುಕು ಕಾಣಲಿ

ಮುನ್ನುಡಿಯಲಿ
ಬದುಕಿನಸಾರ ಸ್ವಾರಸ್ಯವಿರಲಿಿ

 

ಡಾ. ನಿರ್ಮಲ ಬಟ್ಟಲ

Don`t copy text!