ಮೇ ಡೇ

ಮೇ ಡೇ


ಪಾಶ್ಚಾತ್ಯರಲ್ಲಿ 1886ರಿಂದ ಈ ಮೇ ಡೇ ಅಂದರೆ ಕಾರ್ಮಿಕರ ದಿನಾಚರಣೆಯು ಆರಂಭವಾಯಿತು. ಭಾರತದಲ್ಲಿ 1923ರಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಿದರು. ಕಾಮಿರ್ಕರ ದಿನಾಚರಣೆ ಸೂಕ್ತವಾದ ದಿನವಾಗಿದೆ . ದುಡಿದು ಶ್ರಮವಹಿಸಿ ಎಲ್ಲ ಉದ್ಯಮಗಳಲ್ಲೂ ಮಾಲಿಕರ ಯಶಸ್ಸಿಗೆ ಬೆನ್ನೆಲುಬಾಗಿ ನಿಲ್ಲುವ ಕೆಲಸಗಾರರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ಒಳ್ಳೆಯ ವಿಷಯವೇ ಆದರೆ ಬಹಳಷ್ಟು ದೇಶಗಳಲ್ಲಿ ಮೇ ಡೇಯ ಆಚರಣೆ ಆಗುತ್ತಿದೆಯಾದರೂ ಕಾರ್ಮಿಕರ ಸಮಸ್ಯೆಗಳ ಪರಿಹಾರದ ಕಡೆಗೆ ಗಮನ ಕಡಿಮೆ ಎಂದು ಅನಿಸುತ್ತದೆ.

ಬೇರೆ ಏಕೆ ನಮ್ಮ ಭಾರತದಲ್ಲಿಯೇ ಇನ್ನು ಬಹಳಷ್ಟು ಸುಧಾರಣಾ ಕೆಲಸಗಳು ನಡೆಯ ಬೇಕಿದೆ. ಇಎಸ್‌ಐ ಸೌಲಭ್ಯ, ಪಿಎಫ್‌ ಸೌಲಭ್ಯ ಎಲ್ಲ ರೀತಿಯ ಅನೇಕ ಸೌಲಭ್ಯಗಳನ್ನು ನರೇಗಾ ಮನ್‌ರೇಗಾ ದಂತಹ ಅನೇಕ ಯೋಜನೆಗಳು ಬಂದರೂ ಸ್ವಾತಂಥ್ರ್ಯ ದೊರೆತು 75 ವರ್ಷಗಳು ಮುಗಿದರೂ ಕಾರ್ಮಿಕರ ಯೋಗಕ್ಷೇಮಕ್ಕೆ ಇನ್ನು ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ.

ಸಧ್ಯದ ಪರಿಸ್ಥಿತಿಯಲ್ಲಿ ಸಂಘಟಿತ ಮತ್ತು ಅಸಂಘಟಿತ ಎರಡು ಬಗೆಯ ಕಾರ್ಮಿಕರು ಇದ್ದಾರೆ. ಸಂಘಟಿತ ಕಾರ್ಮಿಕರ ವಿಮೆ, ಆರೋಗ್ಯ, ಪಿಂಚಣಿ ಮೊದಲಾದ ಸೌಲಭ್ಯಗಳ ನೊಂದಣಿ ಮತ್ತು ಕಾರ್ಮಿಕ ಸಂಘಗಳಲ್ಲಿ ಅವರ ಸದಸ್ಯತ್ವ ಇರುತ್ತದೆ. ಸಂಘಟಿತ ಕಾರ್ಮಿಕರ ಜೀವನ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ ಆದರೆ ಅಸಂಘಟಿತ ಕಾರ್ಮಿಕರ ಅಭಿವೃದ್ಧಿ ಇನ್ನೂ ಬಹಳಷ್ಟು ಮಟ್ಟಿಗೆ ಆಗಬೇಕಿದೆ.

ಅಸಂಘಟಿತ ಕಾರ್ಮಿಕರ ಬಗೆಗೆ ಸರಕಾರ ಗಮನ ಹರಿಸಬೇಕು. ಕಾರ್ಮಿಕ ಸಂಘಗಳು ಕೂಡ. ಸಾಮಾನ್ಯ ಪ್ರಜೆಯಾಗಿ ನಮ್ಮ ನಿಮ್ಮೆಲ್ಲರ ಕರ್ತವ್ಯವೆಂದರೆ ನಮ್ಮ ಆಸುಪಾಸಿನಲ್ಲಿರುವ ಕೂಲಿ ಕಾರ್ಮಿಕರಿಗೆ ಅವರ ಸಲುವಾಗಿ ಇರುವ ಸರಕಾರಿ ಮತ್ತು ಅರೆ ಸರಕಾರಿ ಸೌಲಭ್ಯಗಳು ಮತ್ತು ಸವಲತ್ತುಗಳ ಮಾಹಿತಿ ನೀಡುವುದು. ಅದನ್ನು ಪಡೆಯಲು ಅವರಿಗೆ ಸಹಾಯ ಮಾಡುವುದು. ಅವರ ಮಕ್ಕಳಿಗೆ ಮತ್ತು ಅವರಿಗೆ ವಿದ್ಯೆಯ ಮಹತ್ವವನ್ನು ತಿಳಿಸುತ್ತಾ ಇರುವುದು. ಸ್ವಲ್ಪ ಹಣವನ್ನು ಕೈ ಎತ್ತಿ ಕೊಡುವುದು ಅಥವಾ ಮನೆಯಲ್ಲಿ ಉಳಿದ ತಿನ್ನುವ ಪದಾರ್ಥವನ್ನು ಯಾರಾದರೂ ಕೊಡುತ್ತಾರೆ ಅದು ಅವರ ಸಮಸ್ಯೆಯ ಪರಿಹಾರವಾಗುವುದಿಲ್ಲ. ಕೆಲವೊಮ್ಮೆ ಅನ್ನ ದಾನ ಧನ ದಾನಕ್ಕಿಂತ ತಿಳುವಳಿಕೆ ಹಿತವಾದ ಮಾತುಗಳ ಮೂಲಕ ಸಮಯ ದಾನ ಬಹಳ ಯೋಗ್ಯ ಎನಿಸುತ್ತದೆ.
ಈ ರೀತಿಯ ಕಾರ್ಮಿಕ ದಿನಾಚರಣೆ ಹಿಂದೆ ಮಾಡಿದ್ದೆವೋ ಇಲ್ಲವೋ ಗೊತ್ತಿಲ್ಲ ಆದರೆ ಇನ್ನು ಮುಂದೆ ಈ ರೀತಿಯಿಂದ ನಮಗೆ ಭೇಟಿಯಾಗುವ ಅಸಂಘಟಿತ ಕಾರ್ಮಿಕರಿಗೆ ನೆರವಾಗಿ ಕಾರ್ಮಿಕ ದಿನದ ಆಚರಣೆ ಮಾಡೋಣ.

ಮಾಧುರಿ ಬೆಂಗಳೂರು

Don`t copy text!