ನಿತ್ಯ ಹುಟ್ಟುವನು
ಶತಮಾನದ ಕತ್ತಲೆಯ
ಕಳೆಯೆ ಉದಯಿಸಿದ
ಹೊಸ ಸೂರ್ಯನು
ಸಮತೆಯ ಬೆಳದಿಂಗಳ
ಬೆಳಕ ತಂದು ಮಾನವತೆ
ಬೆಳಗಿದ ಶಶಿತೇಜನು
ಕನ್ನಡಕೆ ಮುನ್ನುಡಿ ಬರೆದು
ಮಹಾಮನೆಯನು
ಜ್ಞಾನದಂಗಳ ಮಾಡಿದವನು
ಕಾಯಕದ ನಾಯಕನು
ದಾಸೋಹ ದೀಕ್ಷೆ ಕೊಟ್ಟು
ಹಸಿವು ಬಡತನ ಓಡಿಸಿದವನು
ಅಂಗೈಯೊಳು ಲಿಂಗ
ಅರಿವೇ ಗುರುವೆಂಬ ಮಂತ್ರ
ಆಚಾರವೇ ಸ್ವರ್ಗವೆಂದವನು
ಸ್ತ್ರೀ ಕುಲದ ಕಳಂಕ ಕಳೆದು
ಭಕ್ತಿ ಪತವನು ತೆರೆದು
ಸತಿಪತಿಯ ಭಕ್ತಿ ಹಿತವೆಂದವನು
ಧನ್ಯತಾಭಾವದಲಿ
ದೀನರನು ಅಪ್ಪಿ
ಶರಣಕೆ ಶರಣು ಶರಣೆಂದವನು
ನವಸಮಾಜದ ಕನಸನು
ನನಸು ಮಾಡಿ
ಕ್ರಾಂತಿ ಕಹಳೆಯುದಿದನು
ವಚನ ಹೊತ್ತಿಗೆಯನಿಟ್ಟು
ಸಮಾನತೆಗಾಗಿ ಮಿಡಿವ
ಮನದಲಿ ನಿತ್ಯಹುಟ್ಟುವನು
–ಡಾ. ನಿರ್ಮಲ ಬಟ್ಟಲ