ಸಹಕಾರಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಆರಂಭ- ಕೃಷ್ಣಾರಡ್ಡಿ
e-ಸುದ್ದಿ ಮಸ್ಕಿ
ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಕಲ್ಯಾಣ ಕರ್ನಾಟಕದ ಕೊಡುಗೆ ಅಪಾರವಾಗಿದ್ದು ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ವಿಶ್ವಾಸದಿಂದ ಸಾರ್ವಜನಿಕರು ಸಹಕಾರ ಕ್ಷೇತ್ರದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಆರಂಭವಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರ ನಿಯಮಿತ ಅಧ್ಯಕ್ಷ ಬಿ.ಎಚ್.ಕೃಷ್ಣಾರಡ್ಡಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ನಡೆದ ಶ್ರೀ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ೨೨ನೇ ವಾರ್ಷಿಕೋತ್ಸವ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರದಲ್ಲಿ ಪ್ರಧಾನಿ ಮೋದಿ ಮತ್ತು ಸಹಕಾರ ಸಚಿವರಾದ ಅಮಿತ್ ಷಾ ನೇತೃತ್ವದಲ್ಲಿ ದೇಶದಲ್ಲಿ ಸಹಕಾರ ಕ್ಷೇತ್ರದ ಬದಲಾವಣೆಯ ಹೊಸ ಕ್ರಾಂತಿ ಆರಂಭವಾಗಿದೆ ಎಂದರು.
ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಿದೆ. ಶೇ.೧ಕ್ಕಿಂತ ಕಡಿಮೆ ಪ್ರಮಾಣ ಇರುವ ಸಹಕಾರಿಗಳು ಮಾಡುತ್ತಿರುವ ತಪ್ಪಿನಿಂದಾಗಿ ಇಡೀ ಸಹಕಾರ ಕ್ಷೇತ್ರವನ್ನು ಅನುಮಾನಿಸುವುದು ಬೇಡ ಎಂದರು.
ರಾಜ್ಯದಲ್ಲಿ ಸೌಹಾರ್ದ ಕಾಯ್ದೆಯಲ್ಲಿ ೫ ಸಾವಿರಕ್ಕಿಂತ ಹೆಚ್ಚು ಸಹಕಾರಿ ಸಂಘಗಳು ಉತ್ತಮ ಕೆಲಸ ನಿರ್ವಹಿಸುತ್ತಿವೆ. ಮಸ್ಕಿಯ ಭ್ರಮರಾಂಬ ಸಹಕಾರಿ ಸಂಸ್ಥೆ ರಾಜ್ಯದ ಪ್ರಮುಖ ಸಹಕಾರಿ ಸಂಘವಾಗಿದ್ದು ಮಾದರಿ ಸಂಸ್ಥೆಯಾಗಿ ಬೆಳದಿದೆ ಎಂದು ಕೃಷ್ಣಾರಡ್ಡಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಭ್ರಮರಾಂಬ ಸಹಕಾರಿ ಸಂಸ್ಥೆಯ ಪ್ರಚಾರ ವಿಡಿಯೋ ಬಿಡುಗಡೆದರು. ನಂತರ ಮಾತನಾಡಿದ ಅವರು ಗ್ರಾಹಕ ಸದಸ್ಯರ ವಿಶ್ವಾಸ ಮತ್ತು ಸಾಲಗಾರ ಮರುಪಾವತಿಯಿಂದ ಸಹಕಾರ ಸಂಘ ಬೆಳೆಯಲು ಸಾಧ್ಯ. ಭ್ರಮರಾಂಬ ಸಹಕಾರ ಸಂಘ ಕಳೆದ ೨೨ ವರ್ಷಗಳಿಂದ ಉತ್ತಮ ಸೇವೆ ನೀಡಿದ ಪರಿಣಾಮ ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ ಭ್ರಮರಾಂಬ ಸಹಕಾರಿ ಸಂಸ್ಥೆ ರಾಜ್ಯ ಮಟ್ಟದ ಕರ‍್ಪೋರೇಟ್ ಸಂಸ್ಥೆಗಳAತೆ ಐಫೈ ಕಟ್ಟಡ ಹೊಂದುವ ಮೂಲಕ U್ಪಟ್ಟಿ ಹೆಜ್ಜೆ ಇಟ್ಟಿದೆ ಎಂದರು.
ಕಕಲ್ಯಾಣ ಕರ್ನಾಟಕದಲ್ಲಿರು ಸಹಕಾರಿ ಸಂಸ್ಥೆಗಳು ಇಡೀ ರಾಜ್ಯಕ್ಕೆ ಮಾದರಿ ಸಂಸ್ಥೆಗಳಾಗಿ ರೂಪಗೊಂಡಿವೆ. ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಿಗೆ ಉತ್ತರದಾಯಿಗಾಗಿ ಕೆಲಸ ನಿರ್ವಹಿಸಬೇಕು. ಅಂದಾಗ ಮಾತ್ರ ಬೆಳವಣಿಗೆ ಹೊಂದಲು ಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ ಹೇಳಿದರು.
ರಾಜ್ಯದ ಬೇರೆ ಬೇರೆ ಸಹಕಾರಿಗಳು ಮಾದರಿ ಸಂಸ್ಥೆಗಳನ್ನು ನೋಡಬೇಕೆಂದರೆ ಕಲ್ಯಾಣ ಕರ್ನಾಟಕದ ಕಡೆ ಮುಖ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಆರ್ಶೀವಚನ ನೀಡಿದರು. ಅಖೀಲ ಭಾರತ ಸಹಕಾರ ಭಾರತಿ ಸಂರಕ್ಷಕರಾದ ರಮೇಶ ವೈದ್ಯ, ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿರ್ದೆಶಕ ಗುರುನಾಥ ಜಾಂತಿಕರ್, ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ, ಭ್ರಮರಾಂಬ ಸಹಕಾರ ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ, ಮಹಾಂತೇಶ ಮಸ್ಕಿ ಮಾತನಾಡಿದರು. ಭ್ರಮರಾಂಬ ಸಹಕಾರಿಯ ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ. ಸಿಇಒ ವೀರೇಶ ಹಿರೇಮಠ ಇದ್ದರು.
ಕಲ್ಯಾಣ ಕರ್ನಾಟಕದಲ್ಲಿರು ಸಹಕಾರಿ ಸಂಸ್ಥೆಗಳು ಇಡೀ ರಾಜ್ಯಕ್ಕೆ ಮಾದರಿ ಸಂಸ್ಥೆಗಳಾಗಿ ರೂಪಗೊಂಡಿವೆ. ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಿಗೆ ಉತ್ತರದಾಯಿಗಾಗಿ ಕೆಲಸ ನಿರ್ವಹಿಸಬೇಕು. ಅಂದಾಗ ಮಾತ್ರ ಬೆಳವಣಿಗೆ ಹೊಂದಲು ಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ ಹೇಳಿದರು.
ರಾಜ್ಯದ ಬೇರೆ ಬೇರೆ ಸಹಕಾರಿಗಳು ಮಾದರಿ ಸಂಸ್ಥೆಗಳನ್ನು ನೋಡಬೇಕೆಂದರೆ ಕಲ್ಯಾಣ ಕರ್ನಾಟಕದ ಕಡೆ ಮುಖ ಮಾಡುವ ಸನ್ನಿವೇಶ ನಿರ್ಮಾಣ ವಾಗಿದೆ ಎಂದರು.