ರಾಜೇಶ ಕೃಷ್ಣನ್ ತಂಡದಿಂದ ರಂಜಿಸಿದ ಸಂಗೀತ ಸಂಜೆ
e-ಸುದ್ದಿ ಮಸ್ಕಿ
ಖ್ಯಾತ ಹಿನ್ನಲೆ ಗಾಯಕ ರಾಜೇಶ ಕೃಷ್ಣನ್ ಮತ್ತು ಸರಿಗಮಪ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಪಟ್ಟಣದ ಶ್ರೀಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಘದವರು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸಿನಿಮಾ ಮತ್ತು ಭಕ್ತಿಗೀತೆ ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಅಪ್ಪು ಅಭಿನಯಿಸಿದ ಚಿತ್ರಗೀತೆಗಳಿಗೆ ಪ್ರೇಕ್ಷಕರು ಫೀಧಾ ಆಗಿದ್ದಲ್ಲದೆ ಕುಣಿದು ಕುಪ್ಪಳಿಸಿ ಅಪ್ಪು ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದರು.
ಒಂದು ಹಂತದಲ್ಲಿ ಪ್ರೇಕ್ಷಕರು ಅಪ್ಪ ಸಿನಿಮಾ ಹಾಡು ಹಾಡುವಂತೆ ಒತ್ತಾಯಿಸಿ ಸಿಳ್ಳಿ ಕೇಕೆ ಹಾಕಿ ನೂಕು ನೂಗ್ಗಲು ಎಬ್ಬಿಸಿದರು. ಪಿಎಸ್‌ಐ ಸಿದ್ದರಾಮ ಬಿದರಾಣಿ ಗಲಾಟೆಯಾಗದಂತೆ ಮುನ್ಚೆಚ್ಚರಿಕೆ ವಹಿಸಿದ್ದರು.
ಸಂಗೀತ ಸಂಜೆ ಕಾರ್ಯಕ್ರಮವನ್ನು ರಾಯಚೂರು ಜಿಲ್ಲಾ ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಐ.ಎಸ್.ಗಿರಡ್ಡಿ ಉದ್ಘಾಟಿಸಿ ಮಾತನಾಡಿದರು. ಗಚ್ಚಿಮಠದ ಶ್ರೀವರರುದ್ರಮುನಿ ಶಿವಾಚಾರ್ಯರು, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ,ಸಹಕಾರಿಯ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ ಮಾತನಾಡಿದರು.
ದೇವರಾಜ ಗುತ್ತೆದಾರ ದಂಪತಿಯನ್ನು ಸತ್ಕರಿಸಲಾಯಿತು. ಸಹಕಾರಿಯ ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ ಇದ್ದರು.