ಸುಡುವ ಸೂರ್ಯ
ಸುಡುವ ಸೂರ್ಯ
ನೆತ್ತಿಗೆರಿಸಿಕೊಂಡು
ಕೋಪ
ಸೂರ್ಯನುಗುಳಿದ
ಕೆಂಡದುಂಡೆ
ಭೂಮಿಯದೆಯದು
ಅಗ್ನಿಕುಂಡ
ಹಸಿರು ಬೆವೆತಿದೆ
ಉಸಿರು ಬಳಲಿದೆ
ಬಿಸಿಯ ಮಾರುತ ಬೀಸಿ
ಜೀವಜಾಲಕೆ ಧಗಧಗೆ
ಕರಿಯ ಮೋಡ ಕಟ್ಟು
ಸುರಿಸು ಹೂಮಳೆ
ಇರಲಿ ಪ್ರೇಮ ಸಿಂಚನ
ಭೂಮಿ ಬಾನಿನ
ಸಿಟ್ಟು ಸೆಡವಿಗೆ
ಬೆಸುಗೆ ನೀನು
ಸುಡುವ ಸೂರ್ಯನ
ಸಿಟ್ಟು ಕರಗಿಸು
ಭೂಮಿಯನು ರಮಿಸು
ಹಸಿರು ನಗಲಿ ಉಸಿರುು
–ಡಾ. ನಿರ್ಮಲ ಬಟ್ಟಲ