ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ ಪೋಲಿಸರು
ವರದಿ – ವೀರೇಶ ಅಂಗಡಿ
ಗೌಡೂರು
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿ ಜಪ್ತಿ ಮಾಡಿರುವ ಘಟನೆ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಅಂಕಲಿಮಠ ಕ್ರಾಸ್ ಬಳಿ ದಾಳಿ ನಡೆಸಿದ ಮುದಗಲ್ ಠಾಣೆ ಪೊಲೀಸರೊಂದಿಗೆ
ಸುಮಾರು 5.92 ಲಕ್ಷ ಮೌಲ್ಯದ 296 ಕ್ವಿಂಟಾಲ್‍ನ 605 ಅಕ್ಕಿ ಮೂಟೆ ಹಾಗೂ ಲಾರಿಯನ್ನು ವಶಕ್ಕೆ ಪಡೆ ಎಂದು ಆಹಾರ ನೀರಿಕ್ಷಕರಾದ ಅಬ್ದುಲ್ ರವೂಫ್ ಮಾಹಿತಿ ನಿಡಿದ್ದಾರೆ.
ಪಡಿತರದಾರರಿಂದಲೇ ಪಡಿತರ ಅಕ್ಕಿ ಖರೀದಿ ಮಾಡಿದ್ದ ಆರೋಪಿ ನಾಗೇಶ್ ,ವಿರೂಪಾಕ್ಷ ಗೌಡ, ಮಣಿಕಂಠ ಎಂಬುವವರಿಗೆ ಒಂದು ಲೋಡ್ ಮಾರಲು ಮುಂದಾಗಿದ್ದ. ಈ ವೇಳೆ ದಾಳಿ ನಡೆಸಿದ್ದ ಪೊಲೀಸರು ಪಡಿತರ ಅಕ್ಕಿ ದಂಧೆ ನಡೆಸುತ್ತಿದ್ದ ನಾಗೇಶ್‍ನನ್ನು ಸೆರೆ ಹಿಡಿದಿದ್ದಾರೆ. ಪೊಲೀಸರ ಮುಂದೆ ನಾಗೇಶ ಎಂಬಾತ ತಪ್ಪು ಒಪ್ಪಿಕೊಂಡಿದ್ದಾನೆ.
ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಾಳಿಯಲ್ಲಿ ಮುದಗಲ್ ಠಾಣೆಯ ಪಿಎಸ್ಐ ಪ್ರಕಾಶ್ ರೆಡ್ಡಿ ಡಂಬಳ್ ಸೇರಿದಂತೆ ಆಹಾರ ಇಲಾಖೆ ಅಧಿಕಾರಿಗಳು ಪೋಲಿಸ್ ಸಿಬ್ಬಂದಿಗಳು ಇದ್ದರು.