ತಾಯ್ತನದ ಬಾಗಿಲು ಮುಟ್ಟಿ
ತಾಯ್ತನದ ಬಾಗಿಲು ಮುಟ್ಟಿ
ಬಂದವಳು,
ಅಮ್ಮ ಎಂದು ಕರೆಯಿಸಿಕೊಳ್ಳುವ
ಭಾಗ್ಯ ಇಲ್ಲದವಳು,
ತುಂಬಿದ ಮನಸನು
ಹಗುರಾಗಿಸಿದವಳು,
ತಾಯಾಗಲು ಪರದಾಡಿ
ಸೋತಿಹಳು,
ತಾಯ್ತನದ ನೋವ ನುಂಗಿ
ತಣಿದವಳು,
ನಿಂದನೆಗಳ ನೀರ ಮೇಲೆ
ನಡೆದು ಬಂದಳು,
ತಾಯಾಗಿಯೂ
ತಾಯಾಗದವಳು,
ತಾಯಂದಿರ ದಿನದಂದು
ಹೊಟ್ಟೆಗೆ ತಣ್ಣನೆ ಬಟ್ಟೆ ಹಾಕಿ
ಗಟ್ಟಿಯಾಗಿ ಕಣ್ಣ ಮುಚ್ಚಿ
ಮಲಗುತ್ತಿರುವವಳು…..
–ಫರ್ಹಾನಾಜ್ ಮಸ್ಕಿ
ಸ.ಪ್ರ.ದ.ಕಾ. ನೆಲಮಂಗಲ- 562123