ನಿನ್ನ ಪ್ರೀತಿಯ ಅನುಬಂಧ!!

ನಿನ್ನ ಪ್ರೀತಿಯ ಅನುಬಂಧ!!

ನವಿರಾದ ಅನುಬಂಧ
ಅಮ್ಮನ ಜೊತೆ ಸಂಬಂಧ
ವಿನೂತನ ಭಾವ ಬಂಧ
ಜನುಮ ಜನುಮದ ಬಂಧ

ಎದೆ ಹಾಲು ಅಮೃತವುಣಿಸಿದೆ
ನೋವು ನಲಿವು ಭಾಗಿಯದೆ
ಅಪಾರ ಪ್ರೀತಿ ಕಂದನ ಮೇಲಿದೆ
ಜೀವ ತುಂಬುವ ಚೇತನ ನೀನಾದೆ

ಅರಳುವ ಹೂವಿನ ಅಲಂಕಾರ
ನಿತ್ಯ ಮಾಡುವೇ ನಿರಂತರ
ಹೊಸ ಜೀವ ತರುವ ವಸುಂಧರ
ನಿನ್ನ ಪ್ರೀತಿ ಪ್ರೇಮ ಸುಮಧುರ

ಜೀವ ಪಣಕ್ಕಿಟ್ಟು ಜೀವ ಕೊಟ್ಟೆ
ಹತ್ತು ಹಲವು ನೋವು ನಾ ಕೊಟ್ಟೆ
ನಿದ್ದೆ ಊಟ ಮರೆತು ಪ್ರೀತಿ ಕೊಟ್ಟೆ
ಜೀವದಾತೆ ನಿನಗೇನು ನಾ ಕೊಟ್ಟೆ?!

ಶಬ್ಧ ತೋಚದೆ ಮನ ಮೌನವಾಯಿತು
ಅಪರೂಪದ ಶಕ್ತಿ ನೋಡಿ ಸಂರಸವಾಯಿತು
ಮನ ಕೂಗಿ ಕೂಗಿ ಕರೆಯಿತು ನಲಿಯಿತು
ಅಮ್ಮನ ಪ್ರೀತಿಗೆ ಸಮವಿಲ್ಲವೆಂದಿತು

ಕವಿತಾ ಮಳಗಿ

Don`t copy text!