ಅಮ್ಮನ ನೆನೆದು…

ಅಮ್ಮನ ನೆನೆದು…

ರಕುತ ಮೆತ್ತಿ ಹೊರಬಂದ
ಮಾಂಸದ ಮುದ್ದೆ ಇದ್ದ
ನನ್ನ ಕೆತ್ತಿ ತಿದ್ದಿ ತೀಡಿ
ಮೂರ್ತಿಯಾಗಿಸಿದ ಶಿಲ್ಪಿ ನೀನು…

ನಿನ್ನ ಸೆರಗು ಹಿಡಿದುಕೊಂಡೇ
ಬೆಳದವಳು ನಾನು
ಇಂದು ಸೆರಗು ಕಟ್ಟಿ ನಿಲ್ಲಬಲ್ಲ
ಗಟ್ಟಿಗಿತ್ತಿಯಾಗಿಸಿದೆ ನೀನು..

ನಿನ್ನ ಮಡಿಲ ಬೆಚ್ಚನ್ನ *ಗೂಡಲಿ*
ನಿಶ್ಚಿಂತಳಾಗಿ ಸುಖಿಸುತಿದ್ದೆ
ಬದುಕಿನ ಕಹಿಯ ಮರೆಮಾಚಿ
ಸಿಹಿಯ ಹಂಚಲು ಕಲಿಸಿದೆ ನೀನು..

ಅಮ್ಮ ನಿನ್ನ ಜೀವಾಳದ ಕಣ ಕಣ
ರಕುತದ ಹನಿ ಹನಿಯು ನಾನು
ನನ್ನ ರೆಕ್ಕೆ ಬಲಿತು ಹಾರಲುಬಿಟ್ಟು
ಬಾರದೂರಿಗೆ ಹೊರಟೆ..ಯಾಕೆ ನೀನು..??

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 

Don`t copy text!