ಮೇ 26ರಂದು 101 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಶಿವಪುತ್ರ ಗಾಣಾದಾಳ
e-ಸುದ್ದಿ ಲಿಂಗಸುಗೂರು
ಮೇ 26ರಂದು 101 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಶಿವಪುತ್ರ ಗಾಣಾದಾಳ*.
ಇದೇ ತಿಂಗಳ ಮೇ 26ರಂದು 101 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರುನಾಡ ವಿಜಯ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಕರ್ನಾಟಕ ಉಸ್ತುವಾರಿಗಳಾದ ಶಿವಪುತ್ರ ಗಾಣದಾಳ ತಿಳಿಸಿದ್ದಾರೆ.
ಅವರು ಶನಿವಾರದಂದು ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕರೋನಾ ಮಹಾಮಾರಿಯಂತಹ ಸುದೀರ್ಘ ಅಂತರದ ಲಿಂಗಸುಗೂರು ಪಟ್ಟಣದಲ್ಲಿ ಪ್ರಪ್ರಥಮಬಾರಿಗೆ 101 ಜೋಡಿಗಳ ಸಾಮೂಹಿಕ ಮದುವೆ ಸಮಾರಂಭವನ್ನು ಆಯೋಜಿಸಲಾಗಿದ್ದು ಸಂತಸ ತಂದಿದೆ. ಲಿಂಗಸುಗೂರು ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 101 ಜೋಡಿಗಳು ಮದುವೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರುನಾಡ ವಿಜಯ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎನ್ ದೀಪಕ್ ವಹಿಸಲಿದ್ದಾರೆ. ಉಸ್ತುವಾರಿಯಾಗಿ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಮಹೇಶ ಆರ್.ಎಸ್ ವಹಿಸುವರು
ವಿವಾಹ ನೋಂದಣಿಗೆ ಮೇ 21 ಕೊನೆಯ ದಿನಾಂಕ ವಾಗಿದ್ದು ಆಸಕ್ತಿ ಇರುವವರು ಆದಷ್ಟು ಬೇಗನೆ ಕಛೇರಿಯಲ್ಲಿ ನೋಂದಣಿ ಮಾಡಿಸಲು ಮನವಿ ಮಾಡಿದರು.
ನೊಂದಾಯಿಸಲು ದೂರವಾಣಿ ಸಂಖ್ಯೆಗಳು 9901676087,9632055426, 9844934973,87222900393.ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ನಾಯಕ್, ಮಂಜುನಾಥ್ ಭೂಪೂರು, ಸಂಜೀವ ಹುನುಕುಂಟಿ, ರಂಗಪ್ಪ ಹನುಮಂತಪ್ಪ ನೀರಲಕೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.