ನಾ ಎನನ್ನಲಿ?

ನಾ ಎನನ್ನಲಿ?

ಜಗದಲಿ ಕಣ್ಣು ತೆರೆದಾಗ

ನನ್ನ ಮೊದಲ ದೇವರೆನ್ನೆಲೆ
ಅಂಬೆಗಾಲು ಇಡಲು
ತಿಳಿಸಿದ ಮಮತೆ ಎನ್ನಲೇ
ದಾಪುಗಾಲಿಟ್ಟು ನಡೆಯಲು
ಕಲಿಸಿದ ಸ್ನೇಹಿತೆಯೆನ್ನಲೆ
ನಡೆನುಡಿ ಕಲಿಸಿದ
ದಿಗ್ಗಜ ಎನ್ನಲೇ
ತೊದಲುನುಡಿಯಿಂದ
ಸಂತಸಪಟ್ಟ ಧರತಿ ಎನ್ನಲೇ
ಅಕ್ಷರಕಲಿಸಿದ
ಅಕ್ಷರವ್ವ ಎನ್ನಲೇ
ನಡೆನುಡಿಯಿಂದ ಬಾಳು ಬೆಳಗಿದ
ಪಣತೆ ಎನ್ನಲೇ
ಅಡಿಗಡಿಗ ನನ್ನ ತಿದ್ದಿ
ತೀಡಿದ ಗುರು ಎನ್ನಲೇ
ಜಗದಲಿ ದಿಟ್ಟ ಬಾಳು
ಕಲಿಸಿದ ಧೀರೆ ಎನ್ನಲೇ
ನನ್ನನು ಸದಾ ರಕ್ಷಿಸುವ
ಜಗನ್ಮಾತೆ ಎನ್ನಲೇ
ಸಾಲುತ್ತಿಲ್ಲ ಶಬ್ದಗಳು
ಹುಟ್ಟಿಲ್ಲ ಪದಗಳು ಎನ್ನಲೇ
ನಿನಗೆ ನಿನೇ ಸಾಟಿ
ಅವ್ವಾ ಎನ್ನಲೇ

ಡಾ ದಾನಮ್ಮ ಝಳಕಿ
ಬೆಳಗಾವಿ

Don`t copy text!