ಜೇನು ನುಡಿ

ಜೇನು ನುಡಿ

ಚಂದದ ಅಂದದ ಒಲವಿನನುಡಿ
ಅವ್ವನೆಂಬ ಆಪ್ತ ವಾತ್ಸಲ್ಯದ ನುಡಿ
ಅಚ್ಚು ಮೆಚ್ಚಿನ ಅಚ್ಚು ಬೆಲ್ಲದ ನುಡಿ
ಸವಿ ಜೇನು ಸಿಹಿ ಮಧುರ ನುಡಿ

ಬೆಚ್ಚಿ ಬಿದ್ದಾಗ ಬಾಯಲ್ಲಿ ಬರುವ ನುಡಿ
ಧೈರ್ಯ ನೀಡುವ ಧೀರತೆಯ ನುಡಿ
ನಿಚ್ಚ ಮಲ್ಲಿಗೆಯ ಜಗದ ನಿಜ ನುಡಿ
ನೋವು ನಲಿವಿಗೆ ಉಲಿಯುವ ನುಡಿ

ಕಚ್ಚಾಡಿದರೂ ಎಲ್ಲರ ನುಡಿಯಲ್ಲಿ
ನೊಂದು ಬಿಚ್ಚಿ ಬರುವ ಮೊದಲನುಡಿ.
ಸರ್ವಭಾಷೆಯ ಶುದ್ಧ ಹೊನ್ನುಡಿ
ಅಮ್ಮ ಎನ್ನುವ ಚಂದದ ಚಲ್ವ ನುಡಿ

ಶಬ್ದಾರ್ಥವಿಲ್ಲದ ಸುಂದರ ನುಡಿ
ಭಾವ ಸ್ಪಂದನ ಅಂತರಂಗದ ನುಡಿ
ಉಪಮಾ ಅಲಂಕಾರಗಳಿಲ್ಲದ ನುಡಿ
ಶಬ್ದಗಳ ಒರತೆಯ ಕೊರತೆ ಇಲ್ಲದ ನುಡಿ

ಜಗದ ಮೊದಲ ಮೂಲ ನುಡಿ
ಮಗುವಿನ ತೊದಲು ಮುದ್ದು ನುಡಿ
ಎಷ್ಟು ಬರೆದರು ಕಡಿಮೆ ನಿನಗೆ ..
“ಅಮ್ಮ” ಎನ್ನುವ ಶುದ್ಧ ಚಿನ್ನದ ನುಡಿ
ನವರತ್ನಧ ನಿತ್ಯ ನೂತನ ರಮ್ಯ ನುಡಿ. ..


.

ಶಾರದಾ ಅಂಬೇಸಂಗೆ ಮುಂಬಯಿ

Don`t copy text!