ಅಮ್ಮ……..

ಅಮ್ಮ……..

ತಾಯಿ ಎಂದರೆ ನಮಗೆ ಜನುಮ ನೀಡಿದಳು. ಅಮ್ಮ, ತಾಯಿ, ಆಯಿ, ಮಾ ಮೊದಲಾದ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಮಹಿಳೆ ನಮ್ಮನ್ನು ಈ ಭೂಮಿಗೆ ತಂದವಳು ಒಂದು ಹೆಣ್ಣಿನ ಜನ್ಮ ಪರಿಪೂರ್ಣತೆಯನ್ನು ಕಂಡು ಕೊಳ್ಳುವುದೇ ಅವಳು ತಾಯಿಯಾದಾಗ.

ಒಂಭತ್ತು ತಿಂಗಳ ಆ ನೋವು ಪಡೆದ ಪುನರ್ಜನ್ಮ ಮಗುವಿನ ಒಂದು ಹೂ ನಗೆ ಎಲ್ಲವನ್ನೂ ನಿವಾರಿಸುತ್ತದೆ. ತನ್ನ ರಕ್ತ ಮಾಂಸ ಹಂಚಿಕೊಂಡು ಹುಟ್ಟಿದ ಮಗು ತಾಯಿಯ ಸಂಪೂರ್ಣ ಪ್ರಪಂಚವಾಗಿ ಬಿಡುತ್ತದೆ. ಬೇರೆಲ್ಲ ಕೆಲಸಗಳು ಸಂಬಂಧಗಳಿಂಗಿಂತ ತಾಯಿಗೆ ಮಗು ಮಗುವಿನ ಆರೈಕೆ ಬೆಳವಣಿಗೆ ಇದೇ ವಿಚಾರಗಳಿಂದ ಆವರಿಸಿರುತ್ತಾಳೆ. ಇಂತಹ ತ್ಯಾಗಮಯಿ ಮಮತಾಮಯಿಗೆ ಕೇವಲ ಒಂದೇ ದಿನ ಸಾಕಾಗುವದಿಲ್ಲ. ನಾವು ಬದುಕಿರುವ ಪ್ರತಿ ದಿನದವೂ ಉಸಿರಾಡುವ ಪ್ರತಿ ಕ್ಷಣವೂ ಆಕೆಗೇ ಮೀಸಲು.

ನಮ್ಮ ಬಾಲ್ಯ ಮತ್ತು ಯೌವ್ವನದಲ್ಲಿ ನಮಗೆ ಶ್ರೀ ರಕ್ಷೆಯಾಗಿ ನಿಂತು ಕಾಪಾಡಿದ ತಾಯಿಗೆ ಅವಳ ಮುಪ್ಪಿನಲ್ಲಿ ನಮ್ಮ ಆಸರೆಯ ನಮ್ಮ ಪ್ರೀತಿ ಅವಶ್ಯಕತೆ ಇರುತ್ತದೆ. ಅವಳು ನಮ್ಮಿಂದ ಏನನ್ನೂ ಬಯಸದೇ ನೀಡಿದ್ದಳೋ ಅದನ್ನೇ ನಾವು ಅವಳಿಗೆ ಹಿಂದಿರುಗಿ ಕೊಡುವ ಅವಳ ಸೇವೆ ಮಾಡುವ ಸಮಯ ಬಂದಾಗ ನಾವು ಪಲಾಯನ ಮಾಡದೇ ಹೋದರೆ ಅವಳಿಗೆ ನಮ್ಮ ಮದರ್ಸ್‌ ಡೇ ಉಡುಗೊರೆ.

ಪಾಶ್ಚಾತ್ಯರ ಸಂಸ್ಕೃತಿ ನಾವು ಏಕೆ ಮದರ್ಸ ಡೇ ಆಚರಿಸಬೇಕು ಎನ್ನುವುದು ಸಮಂಜಸವಾದ ಪ್ರಶ್ನೇಯೇ ಆದರೆ ಅವರಂತೆ ಆಚರಿಸುವುದು ಬೇಡ, ನಾವು ದಿನವೂ ಆಚರಿಸುವ ಅಭ್ಯಾಸ ಬೆಳೆಸಿಕೊಳ್ಳೋಣ. ನಾವು ಕೂಡ ನಮ್ಮ ತಾಯಂದಿರಿಗೆ ದಿನವೂ ನಮಸ್ಕಾರ ಮಾಡಿ ಅವಳ ಮಾತನ್ನು ಕೇಳಿದಾಗ ನಮ್ಮ ಮಕ್ಕಳೂ ಕೂಡ ನಮ್ಮ ಮಾತನ್ನು ಕೇಳುತ್ತಾರೆ.

ಆಡಂಬರದ ಯಾವುದೇ ಹಬ್ಬ ನಮಗೆ ಅವಶ್ಯಕತೆ ಇಲ್ಲ. ಇಹದಲ್ಲೂ ಪರದಲ್ಲೂ ಮೃತ್ಯುವಿನ ನಂತರವೂ ತಾಯಿಗೆ ಹೆಜ್ಜೆ ಹೆಜ್ಜೆಗೂ ಕೃತಜ್ಞತೆಯನ್ನು ಸಲ್ಲಿಸುವುದನ್ನು ಕಲಿತಿದ್ದೇವೆ. ನಮ್ಮ ಸಂಸ್ಕೃತಿಯ ಹೆಮ್ಮೆಯನ್ನು ತಿಳಿಸುತ್ತಾ ಇತ್ತೀಚಿನ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದವರಿಗೂ ನಮ್ಮ ಹಿರಿಮೆಯನ್ನು ತಿಳಿಸಿ ಮಾತೃದೇವೋ ಭವ. ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧವಿಲ್ಲ ಎಂಬ ಸಂದೇಶ ಸಾರೋಣ.

ಎಲ್ಲ ತಾಯಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು


ಮಾಧುರಿ ದೇಶಪಾಂಡೆ

Don`t copy text!