ಬಿಜೆಪಿ ಆಡಳಿತದಲ್ಲಿ ಬ್ರಹ್ಮಾಂಡ ಭ್ರಷ್ಠಾಚಾರ,ದುರ್ಬಲ ಮುಖ್ಯಮಂತ್ರಿ -ಹರಿಪ್ರಸಾದ

ಬಿಜೆಪಿ ಆಡಳಿತದಲ್ಲಿ ಬ್ರಹ್ಮಾಂಡ ಭ್ರಷ್ಠಾಚಾರ,ದುರ್ಬಲ ಮುಖ್ಯಮಂತ್ರಿ -ಹರಿಪ್ರಸಾದ

e-ಸುದ್ದಿ ಲಿಂಗಸುಗೂರು

ರಾಷ್ಟ ಮತ್ತು ರಾಜ್ಯ ರಾಜಕಾರಣದಲ್ಲಿ ೮ ವರ್ಷಗಳ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ, ಯಾರೊಬ್ಬರನ್ನು ಬಂಧಿಸಿ ಶಿಕ್ಷೆ ನೀಡಲು ಸಾಧ್ಯವಾಗಿಲ್ಲವೆಂದು ಹಾಗೂ ಮುಖ್ಯ ಮಂತ್ರಿ ದುರ್ಬಲರಾಗಿರುವರೆಂದು  ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.
ಪಟ್ಟಣದಲ್ಲಿ ಸುದ್ಧಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಪಿಎಸ್‌ಐ ಹಾಗೂ ಉಪನ್ಯಾಸಕರ ನೇಮಕಾತಿಯಲ್ಲಿ ಗೃಹ ಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು ನೇರವಾಗಿ ಭಾಗಿಯಾಗಿದ್ದಾರೆ. ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದರು ಏನು ಮಾಡಲು ಸಾಧ್ಯವಾಗುತ್ತಿಲ್ಲ. ಮತ್ತೊಂದುಕಡೆ ಅದೇ ಪಕ್ಷದ ಶಾಸಕರೊಬ್ಬರು ಮುಖ್ಯಮಂತ್ರಿಯಾಗಲು ೨೫೦೦ ಕೋಟಿ ರೂ. ಲಂಚ ಕೊಡಬೇಕೆಂದು ಆರೋಪಿಸಿರುವುದು ಬಿಜೆಪಿ ಪಕ್ಷದ ಭ್ರಷ್ಟಾಚಾರವನ್ನು ಎತ್ತಿತೋರಿಸುತ್ತಿದೆ. ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಪ್ರಕರಣಗಳನ್ನು ಮರೆಮಾಚಲು ಹಲಾಲು, ಹಿಜಾಬ್ ಎಂಬ ಕೋಮುದ್ವೇಷವನ್ನು ಹರಡಿ ರಾಜ್ಯದ ಸಾಮಾರಸ್ಯವನ್ನು ನಾಶಮಾಡುತ್ತಿದೆ.ಎಂದರು
ಲೋಕಾಯುಕ್ತ ತನಿಖೆಗೆ ಒತ್ತಾಯ:
ನಾರಾಯಣಪೂರು ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಇದನ್ನು ತನಿಖೆ ಮಾಡಲು ಬಂದ ಸದನ ಸಮಿತಿ ಸದಸ್ಯರಿಗೆ ಸ್ಥಳೀಯ ಬಿಜೆಪಿ ಮುಖಂಡರು ದೌರ್ಜನ್ಯ ಮಾಡಿ ತನಿಖೆ ಕೈಗೊಳ್ಳಲು ಅವಕಾಶ ನೀಡದಿರುವುದು ಪ್ರಜಾಪ್ರಭುತ್ವವನ್ನು ಹಣಕಿಸುವಂತೆ ಬಿಜೆಪಿ ಮುಖಂಡರು ನಡೆದುಕೊಳ್ಳುತ್ತಿದ್ದಾರೆ. ಕಾಲುವೆ ಕಾಮಗಾರಿಯಲ್ಲಿ ೪೦೦ ಕೋಟಿ ಕೆಲಸ ಮಾಡಿಲ್ಲ ಆದರೆ ೮೦೦ ಕೋಟಿ ಹಣ ಪಡೆದಿದ್ದಾರೆ. ಈ ಕಂಪನಿಯ ವಿರುದ್ಧ ಲೋಕಾಯುಕ್ತ ತನಿಖೆ ಒತ್ತಾಯಿಸುತ್ತೇನೆ ಎಂದರು.
ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ:
ಬಿಜೆಪಿಯ ಈ ಭ್ರಷ್ಟಾಚಾರದ ವಿರುದ್ಧ ನಮ್ಮ ಪಕ್ಷ ನಿರಂತರವಾಗಿ ಹೋರಾಟ ಮಾಡುತ್ತಿದೆ. ಮುಂದೆಯು ಮಾಡುತ್ತೇವೆ. ಆದರೆ ಮಾಧ್ಯಮಗಳು ನಮ್ಮ ಹೋರಾಟವನ್ನು ಕಡೆಗಣಿಸಿರುವುದರಿಂದ ಪ್ರಚಾರವಾಗಿಲ್ಲಎಂದರು.
ಈ ಸಂಧರ್ಭದಲ್ಲಿ ಶಾಸಕ ಡಿಎಸ್ ಹೂಲಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಶರಣಪ್ಪ ಮೇಟಿ, ಪಾಮಯ್ಯ ಮುರಾರಿ, ಮಹ್ಮದ್ ರಫೀ, ಮಹಾಂತೇಶ ಪಾಟೀಲ್ ಮುದಗಲ್, ಶರಣಬಸವ ಸೇರಿ ಇತರರು ಇದ್ದರು.

 

 

Don`t copy text!