ಹಟ್ಟಿ ಪ.ಪಂ. ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ
ವರದಿ – ವೀರೇಶ ಅಂಗಡಿ ಗೌಡೂರು
ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯ ಪ.ಪಂ ಅಧ್ಯಕ್ಷೆ ವಿಜ್ಜಮ್ಮ ನಾಗರೆಡ್ಡಿ ಜೇರಬಂಡಿ ಅವರ ವಿರುದ್ಧ ಪ.ಪಂ ಸದಸ್ಯರು ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಮಂಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಹಿಂದೆ ಜಯಗಳಿಸಿದ್ದ ಪ.ಪಂ ಅಧ್ಯಕ್ಷೆ ವಿಜ್ಜಮ್ಮ ನಾಗರೆಡ್ಡಿ ಜೇರಬಂಡಿ ಅವರ ಪತಿ ಪಟ್ಟಣದ ಅಭಿವೃದ್ದಿ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದುದಲ್ಲದೆ ಸರ್ವಾಧಿಕಾರಿಯಂತೆ ವರ್ತಿಸಿ ಏಕಪಕ್ಷೀಯ ನಿರ್ಣಯ ಕೈಗೊಳ್ಳುತ್ತಿದ್ದರೆಂದು ಆರೋಪಿಸಿ 9 ಜನ ಸದಸ್ಯರು ಅವರ ವಿರುದ್ಧ ತಿರುಗಿ ಬಿದ್ದಿದ್ದರು.
ಕಳೆದ ಕೆಲ ದಿನಗಳ ಹಿಂದೆ ಸದಸ್ಯರು ಲಿಖಿತವಾಗಿ ಮೇಲಾಧಿಕಾರಿಗಳಿಗೆ ಅವಿಶ್ವಾಸ ಮಂಡನೆ ಕೋರಿ ಮಾಹಿತಿ ನೀಡಿದ್ದರು.
ಸೋಮುವಾರದಂದು ಪ.ಪಂ.ಕಾರ್ಯಾಲಯದಲ್ಲಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಮಂಡಿಸಲಾಯಿತು.
ಸಭೆಯ ಆರಂಭದಲ್ಲಿ ಪ.ಪಂ ಮುಖ್ಯಾಧಿಕಾರಿ ಅಭಿಷೇಕ್ ಪಾಂಡೆ ಅವರು ಅವಿಶ್ವಾಸ ಮಂಡನೆಗೆ ಅನುಸರಿಸಬೇಕಾದ ನಿಯಮಾವಳಿಗಳ ಮಾಹಿತಿ ನೀಡಿದರು. 9 ಸದಸ್ಯರು ಅವಿಶ್ವಾಸ ಮಂಡನೆ ಗೊತ್ತುವಳಿಗೆ ಬೆಂಬಲಿಸಿ ಕೈ ಎತ್ತುವ ಮೂಲಕ ತಮ್ಮ ಅಭಿಪ್ರಾಯ ಸೂಚಿಸಿದರು. 6 ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು.
ಈ ಅವಿಶ್ವಾಸ ನಿರ್ಣಯದ ಪ್ರತಿಯನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ಪ.ಪಂ ಮುಖ್ಯಾಧಿಕಾರಿ ಮಾಹಿತಿ ನೀಡಿದರು.
ಈ ಸಂಧಬದಲ್ಲಿ ಉಪಾಧ್ಯಕ್ಷೆ ನಾಗರತ್ನ ಶರಣಗೌಡ ಗುರಿಕಾರ, ಪ.ಪಂ. ಸದಸ್ಯರಾದ ಸಿರಾಜುದ್ದೀನ್, ಬಾಬು ನಾಯಿಕೊಡಿ, ವಿದ್ಯಾಶ್ರೀ, ಶ್ರೀನಿವಾಸ್, ರೇಣುಕಾ ಗುಂಡಪ್ಪ, ರಂಗನಾಥ್ ಮುಂಡರಗಿ, ಪಾರ್ವತಿ ನಿಂಗಪ್ಪ ಮನಗೂಳಿ, ದುರುಗಮ್ಮ ದುರುಗಪ್ಪ, ಜಿ.ಶ್ರೀನಿವಾಸ್ ಕಾಂಗ್ರೆಸ್ ಮುಖಂಡರಾದ ಜೆ ಸುಭಾನ್, ಹನುಮಂತ ರೆಡ್ಡಿ, ಮೈಹಿಬುಬ್ ಮೇಕಾನಿಕ್, ನಿಂಗಪ್ಪ ಮನಗೂಳಿ, ಭೀಮರಾಯ್ಯ, ಯಂಕೊಬ್ ಪವಾಡೆ, ಮೌನೇಶ್ ಮನಗೂಳಿ, ಮೌನೇಶ್ ಕಾಕಾನಗರ, ಶರಣಬಸವ ಮೇದಿನಪೂರ್, ರಮೇಶ್, ಮಂಜು ಬಡಿಗೇರ್, ಆದಪ್ಪ ಮನಗೂಳಿ, ಪೊಲೀಸ್ ಇಲಾಖೆಯ ಪಿ.ಎಸ್.ಐ ರಾಮಲಿಂಗಪ್ಪ ಜಮಾದಾರ್ ನಿಂಗನಗೌಡ ಹುಚ್ಚರೆಡ್ಡಿ, ಕಾಂಗ್ರೆಸ್ ಕಾರ್ಯಕತರು ಇತರರೂ ಉಪಸ್ಥಿತರಿದ್ದರು.