ಬದುಕು ನೀರಮೇಲಿನ ಗುಳ್ಳೆ
ನೀರ ಬೊಬ್ಬಳಿಕೆಗೆ ಕಬ್ಬುನದ ಕಟ್ಟುಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ
ಮಹಾದಾನಿ ಕೂಡಲಸಂಗಮದೇವನ ಪೂಜಿಸಿ
ಬದುಕು ಓ ಕಾಯವ ನಿಶ್ಚೈಸದ
ನೀರ ಬೊಬ್ಬಳಿಕೆಗೆ ಕಬ್ಬುನದ ಕಟ್ಟುಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ
12 ನೇ ಶತಮಾನದ ಶಿವಶರಣರ ಬದುಕು ಇವತ್ತಿನ ನಮ್ಮೆಲ್ಲರಿಗೂ ಆದರ್ಶನೀಯವಾದುದು .ಹಾಗೂ ಸತ್ಯ ಶುದ್ಧವಾದುದು ಕೂಡಾ. ಶರಣರು ನಡಿದಂತೆ ನಡೆದು ತೋರಿಸಿ ಬದುಕಿನ ಆದರ್ಶದ ಅನೇಕ ಪಥವನ್ನು ನಮಗೆ ತೋರಿದಂಥವರು .ಗುಡಿ ಗುಂಡಾರಗಳನ್ನು ವರ್ಜಿಸಿ ತಮ್ಮ ಕಾಯದಲ್ಲಿಯೇ ಭಗವಂತನನ್ನು ತೋರಿದವರು ಶಿವಶರಣರು.
ಶಿವನೊಬ್ಬನೇ ಸರ್ವೋತ್ಕೃಷ್ಟ ದೇವರು, ಆತನು ಸಾವಿಲ್ಲದ ಕೇಡಿಲ್ಲದ ದೇವ, ಭವವಿಲ್ಲದ ಭಯವಿಲ್ಲದ ದೇವ, ತೆರಹಿಲ್ಲದ ಕುರುಹಿಲ್ಲದ ದೇವ ಸೀಮೆಯಿಲ್ಲದ ನಿಸ್ಸೀಮ ದೇವ, ದೇವ ಮಹಾದೇವ, ಆತನೇ ಜಗದ ಆರಾಧ್ಯ, ಎಲ್ಲರೂ ಆತನ ಕೈಹಿಡಿದು ಸುಖವಾಗಿ ಶಾಶ್ವತವಾಗಿ ಬಾಳಿರಿ, ಎಲ್ಲರೂ ಒಂದಾಗಿ ಮುಂದಾಗಿ, ಚಂದಾಗಿ ಆನಂದವಾಗಿರಿ ಎಂದು ಹೇಳುವುದೇ ಬಾಳಿನ ತಿರುಳು.ಎಂದು ಹೇಳಿದವರು.
ಸತ್ಯಶುದ್ಧಕಾಯಕವಾವುದೇಯಾಗಲಿ ಅದು ಪವಿತ್ರವಾದುದು. ಅದೇ ಕೈಲಾಸ, ಎಲ್ಲರೂ, ಜನ ನಾಯಕರೂ ಒಂದಿಲ್ಲೊಂದು ಕಾಯಕವನ್ನು ಮಾಡಲೇಬೇಕು. ಅನ್ಯರ ಸಂಪಾದನೆಯಿಂದ ಬದುಕುವ ಜೆಗಣಿಗಳಾಗಬಾರದು ಎಂದು ಹೇಳಿ ಸಮಾಜದಲ್ಲಿ ಸ್ವಯಂಪೂರ್ಣತೆಯನ್ನೂ ಆರ್ಥಿಕ ಸ್ವಾವಲಂಬನವನ್ನೂ ಶ್ರಮ ಗೌರವ ಬುದ್ಧಿಯನ್ನೂ ತರುವಂತಹ ಆರ್ಥಿಕ ಕ್ರಾಂತಿಯನ್ನು ಮಾಡಿದರು. ಅಂತರಂಗ ಬಹಿರಂಗ ಶುದ್ಧಿಗಳೇ ಚರಮಸಿದ್ಧಿಗೆ ಮೂಲವೆಂದು ಹೇಳಿ ”ಆಚಾರವೇ ಸ್ವರ್ಗ, ಅನಾಚಾರವೇ ನರಕ, ಸತ್ಯದ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ’, ”ದಯವೇ ಧರ್ಮದ ಮೂಲ, ಸದುವಿನಯವೇ ಸದಾಶಿವನೊಲುಮೆ, ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ, ಆಗಿರುವವರಿಗೆ ಮರಣವೇ ಮಹಾನವಮಿ’ ಎಂದು ಹೇಳಿ ನೀತಿಯ ನೆಲೆಗಟ್ಟಿನ ಮೇಲೆಯೇ ಸುಂದರ ಸಮಾಜ ಮಂದಿರ ನಿಲ್ಲಬಲ್ಲುದು ಎಂದು ಬಸವಣ್ಣನವರು ಹೇಳಿದ್ದಾರೆ. ಈ ದೇಹವು ನೀರಮೇಲಿನ ಗುಳ್ಳೆಯಂತೆ.
ಕಬ್ಬಿಣದ ಕಟ್ಟು ನಿರ್ಮಿಸಿ ಶಾಶ್ವತವಾಗಿಸುವ ಪ್ರಯತ್ನ ಮೂರ್ಖತನದ್ದು . ಎಂದು ಅರುಹಿ ಹೋದವರು ನಮ್ಮ ಶಿವಶರಣರು
ಮಹಾದಾನಿ ಕೂಡಲಸಂಗಮದೇವನ ಪೂಜಿಸಿ
ಬದುಕು ಓ ಕಾಯವ ನಿಶ್ಚೈಸದೆ
ಈ ಸಮಾಜದಲ್ಲಿ ಇರುವಷ್ಟು ದಿವಸ ಈ ಕಾಯವನ್ನು ಕಾಯಕಕ್ಕೆ ಸವೆಸಿ ನಂತರ ಸಮಾಜಕ್ಕೆ ಬಿಟ್ಟು ಹೋಗುವ ಬದುಕಿನ ಮಾರ್ಗ.
ನಮ್ಮ ಅರಿವಿನಿಂದ ಭಗವಂತನ ನಾಮಸ್ಮರಣೆ ಮಾಡಬೇಕು. ಆಂತರಿಕ ಶುದ್ಧ ಮನದಿಂದ ಭಗವಂತನನ್ನು ವಲಿಸಿಕೊಳ್ಳಬೇಕು ಅಂದರೆ ತನಗೆ ತಾನೇ ದೇವರಾಗಿ ನಿಲ್ಲುವುದು.ನಾನು ಬದುಕುವುದರ ಜೊತೆಗೆ ಇನ್ನೊಂದು ಜೀವಿಯನ್ನು ಬದುಕಿಸುವುದು. ಶರಣರು ತಮ್ಮ ಕಾಯದಲ್ಲಿಯೇ ಅರ್ಚನೆ ಪೂಜೆ ದೀಪ ದೀಪಾರತಿ ಅರಿವಿನ ಕುರುವು ಇದಕ್ಕೆ ಮೋಕ್ಷವಿಲ್ಲ.ಎಂದು ಅರುಹಿಹೋದ ಶಿವಶರಣರಾಗಿದ್ದಾರೆ.
ಭಗವಂತನು ಮಹಾದಾನಿ ಇರುವಷ್ಟು ದಿನ ಅವನನ್ನೇ ನಂಬಿ ಸ್ಮರಣೆ ಅರ್ಚನೆ ಮಾಡಿದರೆ ಅವನು ಮೋಕ್ಷವನ್ನು ಕರುಣಿಸುವನು ದೇಹವನ್ನು ನಂಬದೆ ಭಗವಂತನನ್ನು ನಂಬಿ ಬದುಕಬೇಕು ಎಂಬ ಭಾವ .
ಅಂದರೆ ಸಮಾಜದಲ್ಲಿ ಬಳಲಿದವರಿಗೆ ,ನೊಂದವರಿಗೆ ,ಹಸಿದವರಿಗೆ ನೆರವಾಗುವುದು ದೇವರಂತಾಗುವುದು ಎನ್ನುವ ಅರ್ಥ. ಇತರರಿಗೆ ಸಹಾಯ ಮಾಡುತ್ತ ಇತರರಿಗಾಗಿ ನಾವು ಬದುಕಿ ಬಾಳುವುದೇ ಸುಂದರ ಅತೀ ಸುಂದರವಾದುದು.ಇದು ನೀರ ಮೇಲಿನ ಗುಳ್ಳೆ ಯಾವಾಗವಡೆದು ಹೋಗುವುದೋ ಗೊತ್ತಿಲ್ಲ. ಹಾಗೇನೆ ನಮ್ಮ ಜೀವ ಜೀವನ .ಈ ಜೀವಕ್ಕೆ ಕಬ್ಬಿಣದ ಕಟ್ಟುಕಟ್ಟಿಕೊಂಡು ನನಗೆ ಸಾವು ಬೇಡ ಎಂದರೆ ಬಿಡುವುದೇ ನಾವು ಎಲ್ಲಿದ್ದರೇನು ಹೇಗಿದ್ದರೇನು ಭಗವಂತ ಬಾ ಎಂದು ಕರೆದಾಗ ಈ ಭುವಿಯನ್ನು ಬಿಟ್ಟು ಹೋಗಲೇಬೇಕು ಬಯಲಲ್ಲಿ ಬಯಲಾಗಲೇಬೇಕಾಗುತ್ತದೆ .ಅದಕ್ಕಾಗಿ ಭಗವಂತನನ್ನು ನಂಬಿ ನಡೆ ಎಂದರೆ ನಿನ್ನನ್ನು ನೀನು ನಂಬು ಎನ್ನುವ ಸತ್ಯವನ್ನು ಅರುಹಿಹೋದವರು ಶಿವಶರಣರು…..
ಶ್ರೀಮತಿ ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ