ಮೌನಿ
ನಿನ್ನ ಮೌನದ
ಹಿಂದಿನ ಮಾತು
ಅರ್ಥವಾಗದು
ಏಕೋ ಏನೋ…
ಮುಗ್ಧ ಹುಡುಗಿ ಅವಳು
ಅರ್ಥವಾಗದು ಏನೂ
ತುಸು ಕಿವಿ ಹಿಂಡಿ
ತಿಳಿಸಿ ಹೇಳಬಾರದೇನು…
ನೀ ಮೌನಿಯಾಗಿ
ಅವಳನ್ನು ದೂರ ತಳ್ಳಿ
ಬಿಟ್ಟು ಮರೆಯಲು
ನಿನಗೆ ಸಾಧ್ಯವೇನು….
ನಿನ್ನನ್ನೇ ಹಚ್ಚಿಕೊಂಡ ಜೀವ
ಹೇಳಲಾರದ ಭಾವ
ಮೂಕ ಹಕ್ಕಿಯ ನೋವ
ನಿನ್ನ ಮನ ಅರಿಯದೇನು…
ಕಣ್ತೆರೆದು ನೋಡು ಒಮ್ಮೆ
ಅದೇ ನಿಷ್ಕಲ್ಮಶ ಮುಖ
ನಸು ನಕ್ಕು ಅವಳೊಡನೆ
ಮಾತನಾಡಬಾರದೇನು….
–ಗೀತಾ ಜಿ.ಎಸ್.
ಹರಮಘಟ್ಟ ಶಿವಮೊಗ್ಗ