ನನ್ನವ್ವ

ನನ್ನವ್ವ

ಪ್ರೀತಿ ಮಳೆಸುರಿಸುವ
ಮಾತೊಳಗೂ ಅವಳೆ
ಮಮತೆಯ ಹಾಲುಣಿಸಿ
ಬೆಳೆಸಿದವಳು ಅವಳೆ
ಅವಳೇ ನನ್ನವ್ವ
ನನ್ನ ಹಡೆದವ್ವ

ಕಣ್ಣ ಕನ್ನಡಿಯೊಳಗೆ
ಕಾಣುವಳು ಅವಳೆ
ವಾತ್ಸಲ್ಯದ ರೂಪದ
ಪ್ರತಿಬಿಂಬವೂ ಅವಳೆ
ಅವಳೇ ನನ್ನವ್ವ
ನನ್ನೊಳಗಿರುವ ನನ್ನವ್ವ

ಹಿಡಿಯಷ್ಟು ಹೃದಯಕ್ಕೆ
ಹಿಡಿಸದಷ್ಟು ಒಲವಿತ್ತಳು
ಏಳು ಜನ್ಮ ಸಾಲದೆನಗೆ
ತೀರಿಸಲಾಗದ ಋಣ ಅವಳೆ
ಅವಳೆ ಅವ್ವ
ಅವಳೇ ನನ್ನವ್ವ

ಉಸಿರ ಹೆಸರೊಳಗೂ
ಇರುವವಳು ಅವಳೆ
ಬದುಕು ಹಾರೈಸಿ
ಹರಸಿದಳು ಇವಳೇ
ಇವಳೇ ಅವ್ವ
ಉಸಿರಿಗೆ ಹೆಸರಿವಳೇ ನನ್ನವ್ವ!

ಸರೋಜಾ ಶ್ರೀಕಾಂತ್ ಅಮಾತಿ,ಮುಂಬೈ

Don`t copy text!