ಅರಿವು

ಅರಿವು

ಭ್ರಮೆಯಿಂದ ಆಚೆ
ನಮ್ಮೊಳಗೆ ಇಣುಕಿ
ಆಳಕ್ಕೆ ಇಳಿಯುವ
ಪರಿಶುದ್ಧ ನೋಟ..!

ವ್ಯೆಥೆ- ವ್ಯಸನ
ಗತದ ನೆರಳು ದ್ವಂದ್ವಗಳಿರದ
ಸತ್ಯದ ಸಹವಾಸ
ಆತ್ಮವಿಶ್ವಾಸದ ಒಳಬೆಳಕು..!

ಪೂಜೆ ಬೇಕಾಗಿಲ್ಲ..
ಚಿಂತನ ಮಂಥನದಿ
ಸ್ವಚ್ಛಗೊಂಡ
ತನು-ಮನ-ಭಾವ..!

ಪಾಂಡಿತ್ಯ ವ್ಯಾಖ್ಯಾನ
ವಿಮರ್ಶೆಗಳೆಲ್ಲ ನಗಣ್ಯ
ಕಣ್ಮುಚ್ಚಿ ಧ್ಯೇನಿಸುವ
ಎಚ್ಚರದ ಸ್ಥಿತಿ..!

ಸಮಷ್ಟಿಯತ್ತ ಹೆಜ್ಜೆ
ಆಚಾರದಲ್ಲಿ ಪ್ರಕಟಗೊಂಡ
ಸಪ್ತಶೀಲಗಳ ಅಂತರ್ಯಾತ್ರೆ
ಉದಾತ್ತ ಬದುಕಿನ ಗುರುಪಥ…!

ಪ್ರೊ ಜಯಶ್ರೀ.ಕೆ.ಶೆಟ್ಟರ.
ಇಳಕಲ್ಲ.

Don`t copy text!