ದೈಹಿಕ ಶಿಕ್ಷಣ ಉಪನ್ಯಾಸಕನ ಸಮಗ್ರ ಕೃಷಿ ಕಾಯಕ

ದೈಹಿಕ ಶಿಕ್ಷಣ ಉಪನ್ಯಾಸಕನ ಸಮಗ್ರ ಕೃಷಿ ಕಾಯಕ

ವರದಿ ವೀರೇಶ ಅಂಗಡಿ ಗೌಡೂರು

e-ಸುದ್ದಿ ಲಿಂಗಸುಗೂರು

ದೈಹಿಕ ಶಿಕ್ಷಣ ಉಪನ್ಯಾಸ ಕಾಯಕದ ಜೋತೆಗೆ ಸ್ವಂತ ಜಮೀನಿನಲ್ಲಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ವೀರೇಶ್ ಗೌಡರ್.

ಹೌದು ಲಿಂಗಸುಗೂರು ತಾಲ್ಲೂಕಿನ ನಿರಲಕೆರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಬಾವಿ ಗ್ರಾಮದ ವೀರೇಶ ಗೌಡರ್ ದೈಹಿಕ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅಲ್ಲದೇ ಲಿಂಗಸುಗೂರು ಪಟ್ಟಣದ ಬಸವೇಶ್ವರರ ಕಾಲೇಜಿನಲ್ಲಿ ದೈಹಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಿನ ವೇಳೆಯಲ್ಲಿ ಕಾಲೇಜಿನಲ್ಲಿ ಸೇವೆ ಮಧ್ಯಾಹ್ನದಿಂದ
ಕೃಷಿಯ ಕಾಯಕದಲ್ಲಿ ನಿರತರಾಗುವರು.

ವಿರೇಶ /ದುರುಗನ ಗೌಡರ್ ಅವರಿಗೆ ಕೃಷಿಯಲ್ಲಿ ಸಾಥ್ ನಿಡಿದವರು ಸಹೋದರ ವಿರೇಶ/ಕನಕನ ಗೌಡರ್ ಇವರು ಕೂಡಾ ಬಿ.ಎ.ಪದವಿಧರರು. ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೊಸ ಹೊಸ ಮಾದರಿ ಬೆಸಾಯ ಪದ್ದತಿಯಲ್ಲಿ ತೊಡಗಿಕೊಂಡು ಯಶಸ್ವಿಯಾಗಿದ್ದಾರೆ.

ಇತ್ತಿಚಿಗಷ್ಟೆ ಕದ್ರಿ ಲೇಪಾಕ್ಷಿ 18/12 ಹೆಸರಿನ ತಳಿಯ ಶೆಂಗಾ ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆದಿದ್ದಾರೆ.ಅರ್ದ ಎಕರೆಗೆ 50 ಕೆ.ಜಿ‌.ಬಿತ್ತನೆ ಮಾಡಿ 45 ರಿಂದ 50 ಚೀಲ ಇಳುವರಿ ಪಡೆದಿದ್ದಾರೆ.ಇದಕ್ಕೆ 6500-7500 ಬೆಲೆ ಸಿಗುತ್ತಿದ್ದು ಉತ್ತಮ ಆದಾಯದ ನಿರಿಕ್ಷೆಯಲ್ಲಿದ್ದಾರೆ.ಈ ಬೆಳೆ ಬೆಳೆಯಲು ಐದು ತಿಂಗಳು ಕಾಲಾವಧಿ ತೆಗೆದುಕೊಂಡಿದ್ದು ಡಿಸೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಿ ಸಧ್ಯ ರಾಶಿ ಮಾಡಿದ್ದಾರೆ.

ಕೃಷಿ ಕಾಯಕ ಅಷ್ಟೇ ಅಲ್ಲದೆ ಉಪ ಕಸಬಾಗಿ ಟಗರು, ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ.ಇದರಿಂದ ಕೃಷಿ ಭೂಮಿಗೆ ಸಗಣಿ ಗೊಬ್ಬರ ಅಲ್ಲದೆ ಉತ್ತಮ ಲಾಭದಾಯಕ ಆದಾಯವು ಕೂಡಾ ಬರುತ್ತಿದೆ.

ಜೇನು ಸಾಕಾಣೆಯಲ್ಲಿಯೂ ವಿರೇಶ ಗೌಡರ್ ಗುರಿತಿಸಿಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಜೆನು ಸಾಕಾಣಿಕೆ ಮಾಡುತ್ತಿದ್ದಾರೆ. ಅವರ ಕೃಷಿ ಕಾಯಕಕ್ಕೆ ಹಲವಾರು ರೈತ ಪ್ರಶಸ್ತಿಗಳು ಸಂದಿವೆ.ಅವರ ಕೃಷಿ ಕಾಯಕದಲ್ಲಿ ಇನ್ನಷ್ಟು ಯಶಸ್ಸು ಹೊಂದಲಿ ಎಂಬುದು ನಮ್ಮ ಆಶಯ.

ನಮ್ಮ ಪ್ರದೇಶದಲ್ಲಿ ಈ ತಳಿಯ ಬೆಳೆಯ ಉತ್ತಮ ಇಳುವರಿ ಬರುತ್ತಿದ್ದು ಲಾಭದಾಯವಾಗಿದ್ದು ರೈತರು ಇದನ್ನು ಬಿತ್ತನೆ ಮಾಡಬಹುದು – ವಿರೇಶ ಗೌಡರ್.

ಬಿತ್ತನೆ ಬೀಜಗಳು ವಿರೇಶ ಗೌಡರ್ ಬಳಿ ದೊರೆಯುತ್ತವೆ. ಅವರ ಸಂಪರ್ಕ ಸಂಖ್ಯೆ
+91 99866 95202.

Don`t copy text!