ಮಾಡಿದ್ದುಣ್ಣೊ ಮಾರಾಯಾ

ಮಾಡಿದ್ದುಣ್ಣೊ ಮಾರಾಯಾ


..

ಮಾಡಿದ್ದನ್ನು ಉಣ್ಣಬೇಕೆ
ಬೇಕಾದದ್ದನ್ನು ಮಾಡಬೇಕೆ
ಉತ್ತರ ನಾವೆ ಕಂಡುಕೊಳ್ಳಬೇಕೆ
ಕಂಡಕಂಡವರ ಕೇಳುತ ತಿರಗಬೇಕೆ

ಅಕ್ಕಿ ಬೇಕಾದರೆ ಭತ್ತವನ್ನೆ ಬಿತ್ತಬೇಕೆ
ತವಡ ಬಿತ್ತಿ ಭತ್ತವ ನಿರೀಕ್ಷೀಷಬೇಕೆ
ಅಂಗಳ ಸ್ವಚ್ಛ ಬೇಕಾದರೆ ಕಸಗುಡಿಸಿ
ತಿಪ್ಪೆಗೆ ಹಾಕಬೇಕಾ
ತಿಪ್ಪೆಯಲಿ ಕುಳಿತು ಶುಭ್ರ ಅಂಗಳದ ಕನಸು ಕಾಣಬೇಕೆ..

ನಿಯತ್ತಿನ ನಾಯಿಯ ಸಾಕಬೇಕಾ
ನರಿಸಾಕಿ ನಾಯಿಯ ನಿಯತ್ತ ಬಯಸಬೇಕೆ
ಉತ್ತಮ ಆಡಳಿತ ಬೇಕಾದರೆ
ಸಜ್ಜನರ ಆರಿಸಬೇಕೆ
ದುರ್ಜನರ ಆರಿಸಿ ರಾಮರಾಜ್ಯದ ಕನಸು ಕಾಣಬೇಕೆ

ರಾಜಕಾರಣ’ ರಾಜಕಾರಣಿ’ ಯ ಹೀಗೆಳೆಯುತ
ಅವರ ಸುತ್ತ ಮುತ್ತ ಸಲಾಮ್ ಹೊಡೆಯುತ
ಅವರ ಗೆಳೆತನ ಬೀಗತನ ಬಯಸುತ
ಹಿಂಬಾಲಕರಾಗಬೇಕಾ
ತತ್ವ ಮರೆತ ಈ ನರಿಗಳ ಮೂತಿಗೊದೆಯಬೇಕಾ..

ಎನು ಮಾಡಬೇಕೆನ್ನುವದೆ ಗೊಂದಲವಾಗಿರುವಾಗ
ಪ್ರಶ್ನಿಸುವ ಹಕ್ಕು ನನಗಿರಬೇಕಾ
ಉತ್ತರ ನಿರೀಕ್ಷಿಸುವ ಛಾತಿ ಹೊಂದಬೇಕಾ….

✍️ ಸರ್ವಮಂಗಳಾ ಅರಳಿಮಟ್ಟಿ ಬೆಳಗಾವಿ

Don`t copy text!