ಕದಳಿ ಹೊಕ್ಕವಳ

ಎಲ್ಲವನೂ ತೊರೆದು
ತನ್ನಿಚ್ಚೆಯ ಬದುಕಿಗೆ
ಅರಮನೆಯ ಧಿಕ್ಕರಿಸಿ
ಹೊರಟಳು ಅಕ್ಕ
ಚೆನ್ನಮಲ್ಲಿಕಾರ್ಜುನನ
ಅರಸುತ ಬೆತ್ತಲೆಯ
ಬಯಲಿನಲ್ಲಿ
ಯಾರನ್ನೂ ಕಾಡಲಿಲ್ಲ
ಬೇಡಲಿಲ್ಲ
ಬಾಳ ನೂಕಿದಳು
ಒಂಟಿ ಸಲಗ
ಗಿಡ ಮರ ಬಳ್ಳಿ
ಪ್ರಾಣಿ ಹುಲಿ ಆನೆ ಕರಡಿ
ಇಂಪು ಹಾಡಿನ ಶುಕ ಪಿಕ
ನವಿಲು ಜೀವ ಪಕ್ಷಿ
ಗಿರಿ ಕಂದರಗಳ ಮಾರ್ಧನಿ
ಕಡಿದ ಚಂದನ ತೇಯ್ದ
ಪರಿಮಳ
ನಾರಿವಾಳ ಸಿಹಿ ಮರ್ಜನ
ಮಹಾ ಮನೆಯ ಮಗಳಾಗಿ
ಮಲ್ಲಿಕಾರ್ಜುನನ ಮಧುವಳಗಿತ್ತಿ
ದಿಟ್ಟ ನಡೆಯ ಮೂರುತಿ
ದಶ ದಿಕ್ಕು ಕಲ್ಯಾಣದ ಕಿರೂತಿ
ಒಂಬತ್ತು ಶತಕಗಳು ಉರುಳಿದವು
ಕದಳಿ ಹೊಕ್ಕವಳ
ಹೆಜ್ಜೆ ಗುರುತು ಹುಡುಕುತ
ಸಿಗಲಿಲ್ಲ ಮಹಾದೇವಿ
ಉರಿಯುಂಡ ಕರ್ಪೂರ
ಬೆಳಗಾದಳು ಬಸವನ
ಅನುಭಾವ ಮಂಟಪಕೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!