ಬಸವಣ್ಣ ನಮಗೇಕೆ ಬೇಕು ?
ಬಸವಣ್ಣ ಜಗವು ಕಂಡ ಶ್ರೇಷ್ಠ ಸಾರ್ವಕಾಲಿಕ ಸಮಕಾಲೀನ ಸಮತೆಯ ಶಿಲ್ಪಿ ಸತ್ಯ ಶಾಂತಿ ಪ್ರೀತಿ ಅನುಪಮ ಮಾನವ ಮೌಲ್ಯಗಳನ್ನು ಮರ್ತ್ಯದಲ್ಲಿ ಬಿತ್ತರಿಸಿದ.
ಪ್ರಾಯಶ ಎಲ್ಲಾ ಹಂತದಲ್ಲೂ ಶ್ರೇಣೀಕೃತ ವವ್ಯಸ್ಥೆ ಮಾಲೀಕತ್ವ ತಂತ್ರಗಾರಿಕೆ ಶೋಷಣೆಯ ಪಾರುಪತ್ಯವನ್ನು ಅಲ್ಲಗಳೆದು . ಸರಳ ಸಹಜ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಆರ್ಥಿಕ ರಾಜಕೀಯ ಧಾರ್ಮಿಕ ಆಧ್ಯಾತ್ಮಿಕ ರಂಗಗಳಲ್ಲಿ ಅಮೂಲ್ಯಗ್ರಹ ಬದಲಾವಣೆ ಕಂಡ ಮಹಾ ಮಾನವತಾವಾದಿ.
ಕಳೆದ ಮೂರು ದಿನಗಳಿಂದ ಕಮ್ಯುನಿಸ್ಟ್ ಸ್ನೇಹಿತರ ಜೊತೆ ನಿರಂತರವಾಗಿ ಚರ್ಚಿಸಿದೇನು ಬುದ್ಧ ಬಸವಣ್ಣ ಮಾರ್ಕ್ಸ, ಮಹಾತ್ಮಾ ಗಾಂಧೀ, ಡಾ ಲೋಹಿಯಾ ಜೆಪಿ ಅಂಬೇಡ್ಕರ ಇವರ ತತ್ವಗಳು ತಿರುವಳ್ಳಾರ ನಾರಾಯಣಗುರು ,ಸರ್ವಜ್ಞ ,ಕಬೀರ ಶಿಶುನಾಳ ಶರೀಫರ ಸಾಮಾಜಿಕ ಚಳುವಳಿಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಸಾಮಾಜಿಕ ಆಂದೋಲನದಲ್ಲಿ ಜನಪರವಾಗಿ ನಡೆದಿದ್ದೇ ಆದರೆ ಖಂಡಿತ ಪ್ರಗತಿಪರ ಆರೋಗ್ಯಕರ ಸಮೃದ್ಧಿ ಸಮಾಜವನ್ನು ಕಾಣಬಹುದಿತ್ತು.ಆದರೆ ನಾವೆಲ್ಲಾ ಒಬ್ಬೊಬ್ಬ ದಾರ್ಶನಿಕರನ್ನು ಒಂದು ಧರ್ಮ ಪಂಥ ಜಾತಿ ಗುಂಪಿಗೆ ಸೇರಿಸದೆವು.
ವ್ಯಕ್ತಿಗತ ಅಭಿಪ್ರಾಯ ಗುಂಪುಗಾರಿಕೆ ಮೌಢ್ಯಗಳು ಕಂಧಾಚರಣೆ ,ಅಸ್ಥಿರತೆ ಅನ್ಯಾಯ ಹಿಂಸೆ ಕೋಮು ಗಲಭೆ ದೊಂಬಿಗಳಲ್ಲಿ ನಮ್ಮಲ್ಲಿರುವ. ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ. ಬಸವಣ್ಣ ಅತ್ಯಂತ ಪ್ರಾಯೋಗಿಕ ಮನಸ್ಸಿನ ಕ್ರಾಂತಿ ಪುರುಷ .ಜೀವನದ ಪ್ರತಿ ಹಂತಕ್ಕೂ ತಿರುವಿನಲ್ಲಿ ಸಮಸ್ಯೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಶ್ರೇಷ್ಠ ಕಾರ್ಮಿಕ ಶ್ರಮಿಕ ವರ್ಗದ ನಾಯಕ. ಕಾರ್ಲ್ ಮಾರ್ಕ್ಸ್ ಜಗತ್ತಿಗೆ ಶ್ರಮದ ಮಹತ್ವವನ್ನು ಅದರ ಹಿಂದಿನ ಗೌರವವನ್ನು ( Dignity of labor ) ತಿಳಿಸಿಕೊಟ್ಟರೆ ಬಸವಣ್ಣ ಕಾಯಕದ ಗೌರವದ ( Dignity of labor ) ಜೊತೆಗೆ ಕಾಯಕದಲ್ಲಿನ ದೈವತ್ವದ ( Divinity of labor)ಮಹತ್ವವನ್ನು ತಿಳಿಸಿದನು.
ಆದರೆ ಇಂದು ಮಠಗಳು ಆಶ್ರಮಗಳು ಮಂಟಪ ಪ್ರತಿಷ್ಠಾನ ವ್ಯಾಪಾರಿ ಕೇಂದ್ರಗಳಾಗಿವೆ . ಬಸವಣ್ಣ ಬಂಡವಾಳ – ಜನರಿಗೆ ಧರ್ಮವೆಂಬ ಹುಸಿ ಮಾದಕ ನಶೆ ಕೊಟ್ಟು ಅವರನ್ನು ಪೊಳ್ಳು ಆಚರಣೆಗೆ ಹಚ್ಚಿ ,ಲಿಂಗಾಯತ ಧರ್ಮದ ನಿಜ ಸತ್ವವನ್ನು ವಿರೂಪಗೊಳಿಸಿ ತಮ್ಮ ತಮ್ಮ ಪಾರುಪತ್ಯ ಮೆರೆಯಲು ಮುಗ್ಧ ಭಕ್ತರನ್ನು, ಕಾಳ ಧನಿಕರನ್ನು ಏಕಕಾಲಕ್ಕೆ ಬಳಸಿಕೊಂಡು ಭ್ರಮೆ ಭ್ರಾಂತಿ ಹುಟ್ಟಿಸುವ ವ್ಯವಹಾರವನ್ನು ನಡೆಸಿಕೊಂಡು ಹೋಗುವ ತಂತ್ರಗಾರಿಕೆ ಮಾತ್ರ .
ಜಾತ್ಯತೀತ ಮನೋಭಾವನೆ ನಿಲ್ಲ ಬೇಕಾದ ಬಸವ ಭಕ್ತರು ಕಾವಿ ಸನಾತನ ವೈದಿಕರ ಅಣತಿಗೆ ಹೆಜ್ಜೆ ಹಾಕುತ್ತಿರುವುದು ನೋವಿನ ಸಂಗತಿ ಮತ್ತು ದುರಂತವಾಗಿದೆ.
ಬುದ್ಧ ಸ್ತ್ರೀ ಸಮಾನತೆ ಮಹಿಳಾ ಸ್ವಾತಂತ್ರ,ಕ್ಕೆ ಅಷ್ಟು ಬೇಗ ಸ್ಪಂದಿಸಲಿಲ್ಲ ಮತ್ತು ಮಹಿಳೆಯರಿಗೆ ಸಮಾನತೆಯಯನ್ನು ಕಂಡುಕೊಳ್ಳುವಲ್ಲಿ ಆಧ್ಯಾತ್ಮಿಕ ಧಾರ್ಮಿಕ ಹಕ್ಕುಗಳನ್ನು ನೀಡುವಲ್ಲಿ ಸ್ವಲ್ಪ ಮಾತಿಗೆ ವಿಳಂಬ ನೀತಿ ಕಂಡು ಬಂತು. ಮಠಗಳ ಆಶ್ರಮಗಳನ್ನು ( monarchy ) ವಿರೋಧಿಸಲಿಲ್ಲ. ಬುದ್ಧನ ಕಾಲದಲ್ಲಿಯೇ ಆಶ್ರಮಗಳು ಹುಟ್ಟಿಕೊಂಡವು.
ಬಸವಣ್ಣ ಬುದ್ಧನ ಕನಸು ಆತನ ಮುಂದುವರೆದ ಪಯಣ . ಬುದ್ಧ ಹಚ್ಚಿದ ಕಿಡಿಯನ್ನು ಗಣಾಚಾರಿ ಬಸವಣ್ಣ. ಜ್ವಾಲೆಯನ್ನಾಗಿ ಮಾಡಿ ದೇಶದ ಮೂಲೆ ಮೂಲೆಗೂ ಬೆಳಕು ಜಾಗೃತಿ ಚೆಲ್ಲಿ ಸಮತೆ ಸಾರಿದ ವಿಭೂತಿ ಪುರುಷ .ವರ್ಗ ವರ್ಣ ಲಿಂಗ ಭೇದ ,ಆಶ್ರಮಭೇದಗಳನ್ನು ಸಂಪೂರ್ಣ ಅಲ್ಲಗಳೆದು ಸಮಾಜವಾದವನ್ನು ಮೊತ್ತ ಮೊದಲು ಇಂಡಿಯಾದ ನೆಲದಲ್ಲಿ ಪ್ರಯೋಗಿಸಿದ ಕಾರಣೀಕರ್ತ ಬಸವಣ್ಣ.
ಇಂದು ಮತ್ತೆ ಬಸವಣ್ಣ ನಮಗೇಕೆ ಬೇಕು ಎನ್ನುವ ಆತ್ಮ ವಿಮರ್ಶೆ ವಿಶ್ಲೇಷಣೆ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ. ಅಂಬೇಡ್ಕರ ಅವರು ಬಸವಣ್ಣ ತತ್ವಗಳಿಗೆ ಮಾರು ಹೋಗಿ ಸಂಸತ್ತು ನಿರ್ಮಿಸಿದ ಪಿತಾಮಹ ಎಂದು ಹೊಗಳಿದರು . ಜಾತಿ ಕಲಹ ಕೋಮು ಗಲಭೆ ವರ್ಗ ಸಂಘರ್ಷವಾದಾಗಲೆಲ್ಲ ನಮಗೆ ನೆನಪಾಗುವದು ಬಸವಣ್ಣ ಮತ್ತೆ ಆತನ ಲಕ್ಷಾಂತರ ಶರಣರು. ಇಂದು ದೇಶ ಜಗತ್ತು ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ನಲುಗುತ್ತಿದೆ.
ಶಾಂತಿ ಸೌಹಾರ್ದತೆ ಪ್ರೀತಿ ನಮ್ಮ ಉಸಿರಾಗಲಿ .ಇವನಾರವ ಇವನಾರವ ಎಂದೆನಿಸದೆ ಸಕಲ ಜೀವಾತ್ಮರನ್ನು ಪ್ರೀತಿಸೋಣ.
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ