ದೇವ ನಿನ್ನ ಪೂಜಿಸಿ ಚೆನ್ನನ ಕುಲ ಚೆನ್ನವಾಯಿತು.
ವೇದ ಪುರಾಣಗಳಲ್ಲಿ ವರ್ಣಾಶ್ರಮದ ಪರಿಕಲ್ಪನೆಯಲ್ಲಿಯ ಬ್ರಾಹ್ಮಣ,ಕ್ಷತ್ರೀಯ,ವೈಶ್ಯ,ಶೂದ್ರ ಎಂಬದು ಅಚ್ಚುಕಟ್ಟಾದ ಸಾಮಾಜಿಕ ವ್ಯವಸ್ಥೆಗೆ ಮಾಡಿದ ವಿಂಗಡನೆಯಾಗಿತ್ತು. ಕುಲ ಕಸುಬುಗಳನ್ನು ಆದರಿಸಿ ಯಾರು ಶ್ರೇಷ್ಠ ಕನಿಷ್ಠರೆಂಬ ಭಾವನೆ ಇರಲಿಲ್ಲ.ಸಾಮಾಜಿಕವಾಗಿ ಎಲ್ಲರ ಸ್ಥಾನಮಾನಗಳು ಸಮಾನವಾಗಿದ್ದವು.ಆದರೆ ಕಾಲಗತಿಸಿದಂತೆ ಈ ವ್ಯವಸ್ಥೆಯ ತಪ್ಪಾದ ಅಥೈಯಿಸುವಿಕೆಯಿಂದ ಬ್ರಾಹ್ಮಣ,ಕ್ಷತ್ರೀಯ,ವೈಶ್ಯರು ಶ್ರೇಷ್ಠರೆಂದು, ಶೂದ್ರರು ಕನಿಷ್ಠರೆಂದು ಭಾವನೆ ಮೇಲ್ವರ್ಗ,ಕೇಳವರ್ಗ,ಶ್ರೇಷ್ಠ ಕನಿಷ್ಠರೆಂಬ ಸಾಮಾಜಿಕ ಸ್ಥರ ವಿನ್ಯಾಸಗಳು ಸೃಷ್ಠಿಯಾದವು.ಅಸಮಾನತೆ ಸಾಮಾಜಿಕ ಪಿಡುಗಾಗಿ ಮನುಷ್ಯ ಮನುಷ್ಯರನ್ನೆ, ಪ್ರಾಣಿಗಳಂತೆ ಕೀಳಾಗಿ ಕಾಣುವಂತಾಯಿತು. ಕೆಳವರ್ಗದವರ ಜೀವನ ಅತ್ಯಂತ ಹಿನಾಯವಾಗಿತ್ತು.ಅಂತಹ ಪರಿಸ್ಥಿತಿಯಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಿದರು. ಜಾತಿ ಮತಗಳನ್ನು ತೊಡೆದು ಹಾಕಲು ಮಾತು, ಕೃತಿಯ ಮೂಲಕ ಆಚರಣೆಯಲ್ಲಿ ತಂದರು. ಕೆಳ ಜಾತಿಯ ಜನರಲ್ಲಿ ಮನೆಮಾಡಿದ ಅಜ್ಞಾನ, ಅಂಧಕಾರವನ್ನು ತೊಡೆದು ಹಾಕಲು ಜ್ಞಾನದ ಜ್ಯೋತಿಯನ್ನು ಬೆಳಗಿಸಿದರು.
ಶ್ರೀ ವಿಭೂತಿಯ ಹೂಸದವರ
ಶ್ರೀ ರುದ್ರಾಕ್ಷಿಯ ಧರಿಸದವರ
ನಿತ್ಯ ಲಿಂಗಾರ್ಚನೆಯ ಮಾಡದವರ
ಜಂಗಮವೇ ಲಿಂಗವೆಂದರಿಯದವರ
ಸದ್ಭಕ್ತರ ಸಂಗದಲ್ಲಿರದವರ ತೋರದಿರು ಕೂಡಲಸಂಗಮದೇವಾ.
ಶಿವಪಥವನ್ನು ಅರಿಯುವ ಸರಳ ಸಾಧನಗಳಾದ ವಿಭೂತಿ, ರುದ್ರಾಕ್ಷಿ, ಲಿಂಗ, ಜಂಗಮರ ಪರಿಕಲ್ಪನೆಯ ಮೂಲಕ ಭಕ್ತಿ ಪಥವನ್ನು ತೊರಿಸಿಕೊಟ್ಟರು. ಲಿಂಗಪೂಜೆಯನ್ನು ಕಲಿಸಿ ಮಹಾ ಭಕ್ತರನ್ನಾಗಿ ಮಾಡಿ ಸಾಮಾಜಿಕ ಪರಿವರ್ತನೆಯನ್ನು ತಂದರು. ಕೇಳಜಾತಿಯ ಜನರು ಅಂತರಂಗದಲ್ಲಿ ಅಡಗಿದ್ದ ಭಕ್ತಿ ಪ್ರಭೆಯನ್ನ ಅನುಭಾವವನ್ನು ಹುಟ್ಟುಕಾಕಿದರು.
ಭಕ್ತಿಯಿಲ್ಲದ ಬಡವ ನಾನಯ್ಯ
ಕಕ್ಯಯ್ಯನ ಮನೆಯಲ್ಲಿ ಬೇಡಿದೆ
ಚನ್ನಯ್ಯನ ಮನೆಯಲ್ಲಿ ಬೇಡಿದೆ
ದಾಸಯ್ಯನ ಮನೆಯಲ್ಲಿ ಬೇಡಿದೆ
ಎಲ್ಲ ಪುರಾತರು ನರೆದು ಭಕ್ತಿ ಬಿಕ್ಷೆವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು ಕೂಡಲ ಸಂಗಮ ದೇವಾ.
ಅವರು ಉಂಟು ಮಾಡಿದ ಸಾಮಾಜಿಕ ಸಂಚಲನ ಟೀಕೆಗೆ ಗುರಿಯಾಯಿತು ಮೇಲ್ವರ್ಗದ ಜನರ ಅಸಹನೆಗೆ ಕಾರಣವಾಯಿತು ಅಂತವರಿಗೆ ಉತ್ತರವಾಗಿ ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದ್ದಾರೆ.
ಹೊಲೆಯೊಳಗೆ ಹುಟ್ಟಿ, ಕುಲವನರಸವೆ
ಎಲವೋ ಮಾತಂಗಿಯ ಮಗ ನೀನು
ಸತ್ತದನವನೆಳೆವ ನೇತ್ತನ ಹೊಲೆಯ
ಹೋತ ತಂದು ನೀವು ಕೊಲುವಿರಿ
ಶಾಸ್ತçವೆಂಬುದು ಹೋತಿಂಗೆ ಮಾರಿ
ವೇದಂವೆಂಬುದು ನಿಮಗೆ ತಿಳಿಯದು
ನಮ್ಮ ಕೂಡಲಸಂಗಮ ದೇವರ ಶರಣರು
ಕರ್ಮ ವಿರಹಿತರು
ಶರಣ ಸನ್ನಿತರು ಅನುಪಮ ಚರಿತ್ರರು
ಅವರಿಗೆ ತೊರಲು ಪ್ರತಿ ಇಲ್ಲವೊ.
ಎಲ್ಲಾ ಮನುಷ್ಯರು ನವಮಾಸಗಳು ಹೊಲಸೊಳೊಗೆ ಕಳೆದು ಹುಟ್ಟಿ ಬರುವರು. ಅದನ್ನು ಅರಿಯದೆ ಕುಲ, ಜಾತಿಯನ್ನ ಹುಟುಕುವ ಮನುಜ, ವೇದ ಶಾಸ್ತç ಓದಿದ ಪಂಡಿತರೇ ಶಾಸ್ತçದ ಹೆಸರಿನಲ್ಲಿ, ಮಾಂಸ ಭಕ್ಷಣೆೆಗಾಗಿ ಹೋತವನ್ನು ಬಲಿಕೊಡುವವರು. ಆದರೆ ಸತ್ತ ದನವನ್ನು ಎತ್ತಿ ಹಾಕುವವನನ್ನ ಹೊಲೆಯನೆಂದು ಕರೆಯುವುದು ಯಾವ ನ್ಯಾಯ? ಎಂದು ಪ್ರಶ್ನಿಸುತ್ತಾರೆ. ಶಾಸ್ತçವೆ ಇಲ್ಲಿ ಹೋತಿನ ಜೀವಕ್ಕೆ ಆಪತ್ತನ್ನು ತಂದಿದೆ. ಅಂಥ ಶಸ್ತçವನ್ನು ಆಚರಿಸುವ ನಿಮಗೆ ವೇದದ ನಿಜವಾದ ಆಶಯ ನಿಮಗೆ ಅರ್ಥವಾಗಿಲ್ಲ ಎನ್ನುತ್ತಾರೆ ಬಸವಣ್ಣನವರು.
ಯಾರು ಕೂಡಲ ಸಂಗನಲ್ಲಿ ಶರಣಾಗಿ ಕಾಯಕ ದಾಸೋಹ ಸಿದ್ದಾಂತವನ್ನು ಪಾಲಿಸುತ್ತಾ, ಎಲ್ಲರೂ ಒಂದೆ ಎಂಬ ಭಾವನೆಯಿಂದಸಮಾಜದ ಒಳಿತಿಗಾಗಿ ತಮ್ಮ ತಮ್ಮ ಕಾಯಕವನ್ನು ನಿಷ್ಟೆಯಿಂದ ಮಾಡುತ್ತಾರೊ, ಅವರಿಗೆ ಕರ್ಮ ಕಾಡುವುದಿಲ್ಲಾ. ಶರಣಸಂಗದಲ್ಲಿ ಇದ್ದು ಅನುಪಮಚರಿತ್ರೆಯನ್ನು ಹೊಂದಿದವರಿಗೆ ಹೊಲೆಯಿಲ್ಲವೇಂಬುವುದೇ ಇಲ್ಲ ಎಂದು ಅತ್ಯಂತ ಮಾರ್ಮಿಕವಾಗಿ ಈ ವಚನದಲ್ಲಿ ಹೇಳಿದ್ದಾರೆ.
ವ್ಯಾಸ ಭೋವಿತಿಯ ಮಗ,
ಮಾರ್ಕಂಡೇಯ ಮಾತಂಗಿಯ ಮಗ ,
ಮಂಡೋಧರಿ ಕಪ್ಪೇಯ ಮಗಳು
ಕುಲವನರಸದಿರಿ ಭೋ
ಕುಲದಿಂದ ಮುನ್ನೆನಾದಿರಿಂಭೋ
ಸಾಕ್ಷಾತ್ ಅಗಸ್ತö್ಯ ಕಬ್ಬಲ
ದುರ್ವಾಸ ಮಚ್ಚಿಗ,ಕಷ್ಯಪ ಕಮ್ಮಾರ
ಕೌಂಡಿಲ್ಯನೇಂಬ ಋಷಿ ಮುರುಭುವನರಿಯೇ ನಾಯಿದ ಕಾಣಿ ಭೋ
ನಮ್ಮ ಕೂಡಲ ಸಂಗಮದೇವಾ ವಚನವಿಂತೆದುದು ಸ್ವಪಚೋಪಿಯಾದರೆನು
ಶಿವಭಕ್ತನೇ ಕುಲಜ ಭೋ
ವೇದ, ಪುರಾಣದಲ್ಲಿಯ ಮಹಾಪುರುಷರು ,ಋಷಿಮುನಿಗಳು ಕೆಳಜಾತಿಯವರೆ, ಅವರೆಲ್ಲಾ ಸ್ಮರಣಿಯರು ಸಾಧಕರು ಎಂದಾದರೆ,ಆ ಕುಲದಲ್ಲಿ ಹುಟ್ಟಿದವರಿಗೆಕೆ ಕೀಲು ಎನ್ನುವ ಹಣೆಪಟ್ಟಿ ,ಸಮಾಜದಿಂದ ಬಹಿಸ್ಕಾರ. ಕಸುಬಿನಿಂದ ಜಾತಿ ಹೊರತು ಜ್ಞಾನದಿಂದಲ್ಲ. ಇವರೆಲ್ಲ ತಮ್ಮ ಜ್ಞಾನ, ತಪಸ್ಸು ,ಸಾಧನೆಗಳಿಂದ ಅಜರಾಮರರಾಗಿರುವರು. ಅಂತವರಿಗೆ ಇಲ್ಲದ ಕಿಳು ಭಾವನೆ ಅದೇ ಕುಲದಲ್ಲಿ ಹುಟ್ಟಿದ ಸಾಮಾನ್ಯರಿಗೆ ಕುಲವನ್ನೆಕೆ ಕೀಳಾಗಿವುದು. ಆದ್ದರಿಂದ ಯಾರು ಶಿವಭಕ್ತನಾಗಿರುವನು ಅವನೇ ಉತ್ತಮನು ಎಂಬುವುದನ್ನು ಸಾರಿದ್ದಾರೆ.
ಶಿವನನ್ನ ಆರಾಧಿಸಿ ಕುಲಕ್ಕೆ ಕೀರ್ತಿತಂದು ಶರಣಪಥದಲ್ಲಿ ದೇವರನ್ನ ಒಲಿಸಿಕೊಂಡಿರುವ ಅನುಭಾವಿಗಳನ್ನ ತಮ್ಮ ವಚನದಲ್ಲಿ ಹಾಡಿಹೊಗಳಿದ್ದಾರೆ.
ದೇವ ನಿಮ್ಮ ಪೂಜಿಸಿ ಚನ್ನನ ಕುಲ ಚನ್ನವಾಯಿತು
ದೇವ ನಿಮ್ಮ ಪೂಜಿಸಿ ದಾಸನ ಕುಲ ದೇಸವಡೆಯಾಯಿತು
ದೇವ ನಿಮ್ಮಡಿಗೆರಗಿ ಮಡಿವಾಳ ಮಾಚಯ್ಯ ನಿಮ್ಮಡಿಯಾದ
ನಿನೋಲಿದ ಕುಲಕ್ಕೆ ನಿನೋಲ್ಲದ ಹೊಲೆಗೆ ಮೆರೆಯುಂಟೆ ದೇವಾ
ಜಾತಿ ವಿಜಾತಿಯಾದರೆನು ಅಜಾತಂಗೆ ಶರಣೆಂದೆನ್ನದವನು
ಆತನೆ ಹೊಲೆಯ ಕೂಡಲ ಸಂಗಮ ದೇವಾ
ಜಾತಿಯ ಕಾರಣದಿಂದಾಗಿ ಕೀಳಾಗಿ ಕಾಣಲ್ಪಡುವ ಜನರಿಗೆ ದೇವರನ್ನ ಪೂಜಿಸುವ ,ಒಲಿಸಿಕೊಳ್ಳುವ ಪರಿಯನ್ನ ತಿಳಿಸಿದರು.ಪ್ರತಿಯೊಬ್ಬನ ಹೃದಯದಲ್ಲಿ ಅಡಗಿರುವ ದೈವತ್ವವನ್ನು ಹೊರತೆಗೆದು ಕುಲ,ಜಾತಿಯನ್ನು ಮೀರಿದೇವರನ್ನ ಒಲಿಸಿಕೊಂಡವರನ್ನು ಶರಣರೆಂದು ಕರೆದರು.
ಜಾತಿ, ಕುಲ ಎಂದು ಟೀಕಿಸುವ ಜನರಿಗೆ ನೇರವಾಗಿ
ವೇದವನೊದಿದರೇನು? ಶಾಸ್ತçವಕೆಳಿದರೆನಯ್ಯಾ
ಜಪವಮಾಡಿದರೇನು? ತಪವಮಾಡಿದರೆನಯ್ಯಾ
ಎನು ಮಾಡಿದರೇನು ನಮ್ಮ ಕೂಡಲ ಸಂಗಯ್ಯನ ಮನ ಮುಟ್ಟದನ್ನಕ್ಕಾ.
ವೇಧ ಶಾಸ್ತç ಪುರಾಣಗಳನ್ನು ಓದಿ ಜಪತಪವನ್ನು ಮಾಡಿ ಆತ್ಮಜ್ಞಾನವನ್ನು ಹೊಂದದೆ ದಾಂಭಿಕ ಆಚರಣೆಗಳಿಂದ ದೇವರನ್ನ ಒಲಿಸಿಕೊಳ್ಳಲು ಸಾಧ್ಯವಿಲ್ಲ. ಕಾಯಕ ನಿಜಭಕ್ತಿಯಿಂದ ಮಾತ್ರ ಪರಮಾತ್ಮನನ್ನು ತಲುಪಬಹುದು ಎಂದು ಸಾರಿದರು.
೧೨ನೇಯ ಶತಮಾನದಲ್ಲಿಯೆ ಇಂತಹ ಸಾಮಾಜಿಕ ಬದಲಾವಣೆಯನ್ನು ತಂದು ಮಾನವ ಕುಲವನ್ನು ಉದ್ದರಿಸಿದ ಮಹಾ ಮಾನವತಾವಾಧಿಯಾದ ಬಸವಣ್ಣ ಕಾಯಕದ ಮೂಲಕ ಆರ್ಥಿಕ ಸಬಲತೆಯನ್ನು ವೃತ್ತಿ ಗೌರವವನ್ನು ಜಾರಿಗೆ ತಂದರು.ಸಮಾನತೆಯ ಮೂಲಕ ಸಾಮಾಜಿಕ ಸಬಲತೆಯನ್ನö ಪ್ರಜಾಪ್ರಭುತ್ವ ಪರಿಕಲ್ಪಣೆಯನ್ನ ದಾಸೋಹದ ಮೂಲಕಸಹಕಾರ ತತ್ವವನ್ನು ಹಂಚಿಕೊAಡು ತಿನ್ನುವ ನೀತಿಯನ್ನು ಬೇಳೆಸಿದರು. ದಯೆಯ ಮೂಲಕ ಮಾನವಿಯತೇಯ ಪರೀಕಲ್ಪಣೆಯನ್ನು ಬೇಳೆಸಿ ಪ್ರಾಣಿ ಹಿಂಸೆಯನ್ನು ತಡೆಗಟ್ಟಿದರು.
ಭಕ್ತಿಯ ಮೂಲಕ ಜ್ಞಾನ ಸಂಪಾದನೆಯ ಮಾರ್ಗವನ್ನು ಆತ್ಮಸಾಕ್ಷಾತ್ಕಾರವನ್ನು ಸರಳ ರೀತಿಯಲ್ಲಿ ಆಚರಣೆಯಲ್ಲಿ ತಂದು ತಿಳಿಸಿಕೊಟ್ಟರು.
ಬಸವಣ್ಣನವರ ತಂದ ಈ ಎಲ್ಲ ಸಾಮಾಜಿಕ ವಿಚಾರಗಳು ಎಂದೆಂದಿಗೂ ಪ್ರಸ್ತುತ.
ಮಾನವ ಕುಲಕ್ಕೆ ಅವರು ಭೋದಿಸಿದ ಆತ್ಮಜ್ಞಾನ , ತತ್ವಜ್ಞಾನ ಮನುಕುಲವನ್ನ್ ಸುಜ್ಞಾನದೆಡೆಗೆ ಕೊಂಡೊಯ್ಯುವ ದಿವ್ಯಜ್ಯೋತಿಗಳು.
–ಡಾ.ನಿರ್ಮಲಾ ಬಟ್ಟಲ
ಪ್ರಾಚಾರ್ಯರು.
ಮ.ನ.ರ.ಸಂಘದ
ಶಿಕ್ಷಣ ಮಹಾವಿದ್ಯಾಲಯ
ಮಹಾಂತೇಶ ನಗರ ಬೆಳಗಾವಿ.