ನೂತನ ಪತ್ರಿಕಾ ಭವನವನದ ಉದ್ಘಾಟನೆ ಹಾಗೂ ಸಭಾಭವನ ಅಡಿಗಲ್ಲು ಸಮಾರಂಭ
ವರದಿ ವೀರೇಶ ಅಂಗಡಿ ಗೌಡೂರು
ಲಿಂಗಸುಗೂರು ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಲಿಂಗಸುಗೂರು ತಾಲೂಕು ಘಟಕ ವತಿಯಿಂದ ನೂತನವಾಗಿ ನಿರ್ಮಿಸಿರುವ ಪತ್ರಿಕಾ ಭವನ ಉದ್ಘಾಟನೆ ಹಾಗೂ ಸಭಾಭವನ ಅಡಿಗಲ್ಲು ಮತ್ತು ಸನ್ಮಾನ ಸಮಾರಂಭವನ್ನು ರಾಯಚೂರು ಸಂಸದರಾದ ರಾಜಾ ಅಮರೇಶ್ವರ ನಾಯಕ ರವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸುದ್ದಿ ಮನೆಯಲ್ಲಿ ಕೇಲಸ ಮಾಡುವ ಪತ್ರಕರ್ತರು ವೃತ್ತಿ ಘನತೆಯನ್ನು ಕಾಪಾಡಿಕೊಂಡು ಪಕ್ಷಾತೀತವಾಗಿ ,ನಿಖರ, ಸೈದ್ದಾಂತಿಕ ನೆಲೆಗಟ್ಟಿನಲ್ಲಿ ವರದಿಗಳನ್ನು ಬಿತ್ತರಿಸುವ ಮಹತ್ತರ ಕಾರ್ಯ ಮಾಡಬೇಕಾಗಿದೆ.ಇತ್ತಿಚಿನ ದಿನಗಳಲ್ಲಿ ಬ್ಲಾಕ್ ಮೇಲ್ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ದುರಂತದ ಸಂಗತಿ.ಅಂತಹ ಪತ್ರಕರ್ತರ ಬಗ್ಗೆ ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಮಾಹಿತಿ ನೀಡಿದರೆ ಅಂತವರನ್ನು ಸಂಘದಿಂದಲೇ ಹೊರ ಹಾಕುವ ಕೆಲಸ ಮಾಡಲಾಗುವದು. ಪತ್ರಕರ್ತರಾದವರು ಸಮಾಜದಲ್ಲಿ ಬಡವ ಬಲ್ಲಿದವರ ಧ್ವನಿಯಾಗಿ, ಶೊಷಿತರ ಪರವಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.
ಕೊವಿಡ್ ನಂತಹ ಸಂದಿಗ್ಧ ಸ್ಥಿತಿಯಲ್ಲಿ ಹಲವು ಪತ್ರಕರ್ತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ವರದಿ ಬಿತ್ತರಿಸುವ ಕೆಲಸ ಮಾಡಿದ್ದಾರೆ.ಕೇಲವು ಪತ್ರಕರ್ತರು ಜೀವ ಕಳೆದುಕೊಂಡಿದ್ದಾರೆ. ಅಂತಹ ಅನೇಕ ಪತ್ರಕರ್ತರಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂ ಪರಿಹಾರ ಕೊಡಿಸುವ ಕೇಲಸವನ್ನು ಪತ್ರಕರ್ತರ ಸಂಘ ಮಾಡಿದೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನೆಲ್ ನ ಪ್ರಧಾನ ಸಂಪಾದಕ ರವಿ ಹೆಗಡೆಯವರು ಮಾಧ್ಯಮಗಳು ಕಿಡಿಗೇಡಿಗಳ ಕೈಗೆ ಸಿಗುವ ಅಸ್ತ್ರವಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಧ್ಯಮಗಳು ಅತ್ಯಂತ ವಿಶ್ವಾಸಾರ್ಹತೆ ಕಾಪಾಡಿಕೊಂಡು ಜಾಗುರುಕತೆಯಿಂದ ಕೆಲಸ ಮಾಡಬೇಕಾಗಿದೆ ಎಂದರು. ಮಾಧ್ಯಮಗಳು ಹೇಳಿದ್ದೆ ಸತ್ಯ ಎನ್ನುವ ಹಾಗೆ ಬಿಂಬಿಸಿದ್ರೆ ಜನ ಪಾಠ ಕಲಿಸುತ್ತಾರೆ. ಟಿವಿ ಚಾನೆಲ್ ಟಿ.ಆರ್.ಪಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಇದ್ದ TRP ಈಗ ಇಲ್ಲ. ಜನ ಹೆಚ್ಚು ಸಿನಿಮಾ ನೋಡಲು ಒಲವು ತೋರಿಸಲು ಆರಂಭಿಸಿದ್ದಾರೆ. ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗುತ್ತಿದೆ. ಇಲ್ಲಿ ಸಿನೆಮಾ ರಂಗ ಮಾರ್ಕೆಟ್ ಕಳೆದುಕೊಳ್ಳತ್ತಿದೆ ಎಂದು ಅಂತ ಅಲ್ಲ. ಜನರು ಸಿನಿಮಾ ನೋಡುವುದು ಒಟಿಟಿ ಸೇರಿದಂತೆ ನಾನಾ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಹಾಗೆ ನಾವು ತೊರಿಸಿದ್ದೆ ಸುದ್ದಿ ಎಂಬ ಅಹಂಕಾರಕ್ಕೆ ಹೊದ್ರೆ ಜನ ಒಳ್ಳೆದನ್ನೆ ನೊಡಲು ಆರಂಭಿಸುತ್ತಾರೆ. ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ನಲ್ಲಿ ಬಂದಷ್ಟು ಸುದ್ದಿ ಯಾವ ಪತ್ರಿಕೆ ಚಾನೆಲ್ ಳಲ್ಲಿಯೂ ಬರಲ್ಲ ಎಂದು ಹೇಳಿದರು. ಯುಟ್ಯೂಬ್ ಭೂಮಿ ಮೇಲಿರುವ ಅತ್ಯಂತ ದೊಡ್ಡ ವೇಗದಾಯಕ ಚಾನೆಲ್. ಆದ್ರೆ ಅದರ ಜತೆಗೆ ಅಪಾಯವೂ ಹೆಚ್ಚಾಗುತ್ತಿದೆ. ಸುಳ್ಳು ಸುದ್ದಿ ಹರಡುವ ಆತಂಕ ಎದುರಿಸುವಂತಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪತ್ರಿಕಾ ಭವನ ಕಟ್ಟಡ ಕಾಮಗಾರಿ ಸಹಾಯ ಹಸ್ತ ಚಾಚಿದ ಗಣ್ಯರಿಗೆ ಸನ್ಮಾನಿಸಲಾಯಿತು.ನೇತ್ರ ದಾನ ಮಾಡಿದ ಪತ್ರಕರ್ತರಿಗೆ ಪ್ರಮಾಣ ಪತ್ರಗಳ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಾನಪ್ಪ ವಜ್ಜಲ್,ಭೂಪನಗೌಡ ಕರಡಕಲ್, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಶಿವಮೂರ್ತಿ ಹೀರೆಮಠ ಜಿಲ್ಲಾಧ್ಯಕ್ಷರಾದ ಆರ್ ಗುರುನಾಥ್, ಪುರಸಭೆ ಅಧ್ಯಕ್ಷರಾದ ಸುನೀತ ಪರಶುರಾಮ ಕೆಂಭಾವಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಶಿವರಾಜ ಕೆಂಭಾವಿ,ಗೌರವ ಅಧ್ಯಕ್ಷ ಬಿ.ಎ ನಂದಿಕೋಲು ಮಠ, ಪ್ರಧಾನ ಕಾರ್ಯದರ್ಶಿ ಗುರುರಾಜ ಗೌಡೂರು ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಪತ್ರಕರ್ತರು, ಸಾರ್ವಜನಿಕರು ಉಪಸ್ಥರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವೆಂಕಟೇಶ್ ಹೂಗಾರ ರವಿಕುಮಾರ್ ಸುರ್ಯವಂಶಿ ನಡೆಸಿಕೊಟ್ಟರು.