ಆರ್ ಡಿ ರಾನಡೆ ಜೀವನದ ಕುರಿತು ಭಾಷಣ ಸ್ಪರ್ಧೆ ಆಯೋಜನೆ

ಆರ್ ಡಿ ರಾನಡೆ ಜೀವನದ ಕುರಿತು ಭಾಷಣ ಸ್ಪರ್ಧೆ ಆಯೋಜನೆ

e-ಸುದ್ದಿ ಬೆಳಗಾವಿ

ಬೆಳಗಾವಿ: ಗುರುದೇವ ಡಾ. ಆರ್ ಡಿ ರಾನಡೆಯವರ ಪುಣ್ಯತಿಥಿ ಅಂಗವಾಗಿ ಅವರ ಜೀವನ ಸಂದೇಶ ಕುರಿತು ಅಂತರ ಕಾಲೇಜು ಭಾಷಣ ಸ್ಪರ್ಧೆಯನ್ನು, ಅಕಾಡೆಮಿ ಆಫ್ ಕಂಪೆರೆಟಿವ್ ಫಿಲೋಸೊಫಿ ಆಂಡ್ ರಿಲಿಜನ್ ನ ಸಹಯೋಗದಲ್ಲಿ ,
ಎಂ ಎನ್ ಆರ್ ಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜನೆ ಮಾಡಲಾಗಿತ್ತು.‌

ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಗರದಲ್ಲಿ ಇರುವ ಎಲ್ಲ ಶಿಕ್ಷಣ ಮಹಾವಿದ್ಯಾಲಯಗಳ ಪ್ರಶಿಕ್ಷಣಾರ್ಥಿಗಳು ಆಗಮಿಸಿದರು. ‌

ಕಾರ್ಯಕ್ರಮದಲ್ಲಿ ಪ್ರಸ್ಥಾವಿಕವಾಗಿ ಮಾತನಾಡಿದ ಎಂ.ಎನ್.ಆರ್.ಎ ಬಿ.ಇಡ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್ ಜಿ ಬಟ್ಟಲ ಅವರು, ಜೂನ್ 6 ರಂದು ಬೆಳಗಾವಿಯ ಗುರುದೇವ ರಾನಡೆ ಮಂದಿರದಲ್ಲಿ ರಾನಡೆ ಅವರ ಪುಣ್ಯತಿಥಿ ಅಂಗವಾಗಿ, ಸ್ವಾಮಿ ವಿವೇಕಾನಂದರ ಜೀವನದ ಕುರಿತು ರೂಪಕ ಪ್ರಸ್ತುತಿ ಹಾಗೂ ಗುರುದೇವ ಡಾ.ಆರ್ ಡಿ ರಾನಡೆಯವರ ಜೀವನ ಸಂದೇಶಗಳು ಕುರಿತು ಭಾಷಣ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗ ವಹಿಸುವ ಪ್ರತಿಯೊಂದು ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಗುತ್ತದೆ ಎಂದರು

ಈ ಭಾಷಣ ಸ್ಪರ್ಧೆಯಲ್ಲಿನಿರ್ಣಾಯಕರಾಗಿ ಎಚ್ ಎನ್ ಎಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾರಾದ ಸುನೀಲ ಪಾಟೀಲ್, ಎಂ ಎನ್ ಆರ್ ಎ ಬಿ.ಇಡ್ ಕಾಲೇಜಿನ ಸಹಾಯಕ ಪ್ರಾಧ್ಯಪಕಿ ರೋಹಿಣಿ ಚನ್ನವೀರ ಭಾಗ ವಹಿಸಿದರು.

ಸಹ ಪ್ರಾದ್ಯಪಕರಾದ ಸೊನಲ ಚಿನವಾಲ, ರೂಪಾ ಅಕ್ಕಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Don`t copy text!