ಸೈಕಲ್ ಸವಾರಿ

 

( ಲಲಿತಪ್ರಬಂಧ)

ಇಂದು ಬೆಳಗ್ಗೆ ಗೂಗಲ್ ಇಂದಿನ ದಿನ ವಿಶೇಷ, ವಿಶ್ವ ಸೈಕಲ್ ದಿನಾಚರಣೆ ಎನ್ನುವುದನ್ನು ನೆನಪಿಸಿತು. ಬೆಳ್ಳಂಬೆಳಗ್ಗೆ ಸೈಕಲ್ ನೊಂದಿಗೆ ಬೆಸೆದ ನೆನಪುಗಳು ಸ್ಮತಿ ಪಟಲದ ಮೇಲೆ ಹಾಯ್ದು, ನನ್ನನ್ನು ಬಾಲ್ಯಕ್ಕೆ ಕರೆದುಕೊಂಡು ಹೋದವು.

ನಾನು ಚಿಕ್ಕವಳಿದ್ದಾಗಿನ ಮಾತು, ಜನರ ಓಡಾಟದ
ಅನೂಕುಲಕ್ಕಾಗಿ ಸೈಕಲ್ಗಳನ್ನು
ಬಾಡಿಗೆಗೆ ಕೊಡುತ್ತಿದ್ದರು.ತಾಸಿಗೆ ಇಂತಿಷ್ಟು ಹಣ ನೀಡಿ ಉಪಯೋಗಿಸು ಸೌಲಭ್ಯ ವನ್ನು ಅಂಗಡಿಗಳು ನೀಡುತ್ತಿದ್ದವು.ಸೈಕಲ್ ಬಾಡಿಗೆಗೆ ಕೊಡುವದು ಮತ್ತು ರೀಪೇರಿ ಮಾಡುವುದು ಒಂದು ಪ್ರಮುಖ ಉದ್ಯೋಗವೇ ಆಗಿತ್ತು.ಆಗ ಮನೆ ಮುಂದೆ ಸ್ವಂತ ಸೈಕಲ್ ಇದೆ ಅಂದ್ರೆ ತುಂಬಾ ಸೌಕರ್ಯವಂತರು ಅಂತ ಭಾವಿಸುತ್ತಿದ್ದ ಕಾಲ. ಹೀರೋ ಮತ್ತು ಹರ್ಕುಲಸ್ ಸೈಕಲ್ ಗಳು ರಾಜಾರೋಷವಾಗಿ ರಸ್ತೆಯನ್ನು ಆಳುತ್ತಿದ್ದ ಕಾಲ. ನಮ್ಮ ಅಪ್ಪನೂ ಕೂಡ ಓಡಾಟದ ಅನುಕೂಲಕ್ಕಾಗಿ ಸೈಕಲ್ ಒಂದನ್ನು ಕೊಂಡಿದ್ದರು. ಮನೆಯ ಮುಂದೆ ನಿಂತ ಸೈಕಲ್ ಅನ್ನು ಓಡಿಸಬೇಕೆನ್ನುವುದು ನನಗೂ ಆಸೆ. ಆದರೆ ನನ್ನ ಎತ್ತರಕ್ಕೆ ನಿಲುಕದ ಆ ಸೈಕಲ್ ತುಳಿಯುವುದು ನನ್ನಿಂದಾಗದು ಕೆಲಸವಾಗಿತ್ತು. ಆದರೂ ಸ್ಟ್ಯಾಂಡ್ ಹಾಕಿ ನಿಲ್ಲಿಸಿದ ಸೈಕಲ್ಲನ ಪೆಡಲ್ ಅನ್ನು ಕೈಯಿಂದ ತಿರುಗಿಸಿ,ಗಾಲಿ ಸುತ್ತುವುದನ್ನು ನೋಡಿ ಖುಷಿ ಪಡುತ್ತಿದ್ದೆ.ಹಾಗೆ ಗಾಲಿಯನ್ನು ತಿರುಗಿಸುವಾಗ ಬೈಸಿಕೊಂಡದ್ದು ಉಂಟು.

ನಾನು ಸೈಕಲ್ ಕಲಿಯಲೇಬೇಕು ಎನುವ ಕನಸು ಮತ್ತೆ ಮತ್ತೆ ಚಿಗುರೊಡೆಯುತ್ತಿದ್ದದ್ದು.ಒರಿಗೆಯ ಗೆಳತಿಯರು, ಮನೆಯಲ್ಲಿ ಕಾಡಿ ಬೇಡಿ ಹಣ ಪಡೆದುಕೊಂಡು
ಬಾಡಿಗೆ ಸೈಕಲ್ ತಂದು ಕಲಿಯುತ್ತಿದ್ದರು. ಹುಡುಗಿಯರು ಸೈಕಲ್ ಕಲಿಯಲು ಚಿಕ್ಕ ಸೈಕಲ್ ಗಳು ಬಾಡಿಗೆಗೆ ಸಿಗುತ್ತಿದ್ದುವು.
ಗುಂಪಿನಲ್ಲಿ ಯಾರಾದರೂ ಒಬ್ಬರು ಬಾಡಿಗೆಗೆ ಸೈಕಲ್ ತಂದರೆ ಉಳಿದವರು ಅವರ ಬೆನ್ನ ಹಿಂದೆ ಸುತ್ತುತ್ತಿದ್ದೆವು ಒಬ್ಬರು ಕಲಿಸುವವರು ಜೊತೆಗೆ ಇರುತ್ತಿದ್ದರು.
ಹೀಗೆ ಸೈಕಲ್ ಕಲಿಯಬೇಕು ಎನ್ನುವ ಆಸೆಗೆ ಸದವಕಾಶ ಕೂಡಿ ಬರುವುದು ಬೇಸಿಗೆ ರಜೆಯಲ್ಲಿ.ಭೂಮಿಯ ಆಳದಲ್ಲಿ ಗುಪ್ತ ವಾಗಿದ್ದ ಡೇರೆ ಗಡ್ಡೆಗಳು ಮಳೆಗಾಲಲ್ಲಿ ಚಿಗುರೊಡೆದಂತೆ.ಮಕ್ಕಳ ಪುಂಡಾಟಿಕೆಗೆ ಬೇಸಿಗೆ ರಜೆ ಹೇಳಿಮಾಡಿಸಿದಂತಿತ್ತು.ಅದು ಹೊಸ ಕಲಿಕೆಯ ಕಾಲ ಹುಡುಗರು ಈಜು, ಸೈಕಲ್, ಕಲಿಯಲು ತೊಡಿಗಿಕೊಂಡಿದ್ದರೆ, ಹುಡುಗಿಯರಿಗೆ ರಂಗೋಲಿ ,ಕಸುತಿಗೆ ತರಬೇತಿ ಆರಂಭವಾಗುತ್ತಿತ್ತು.ಈಜು ಮತ್ತು ಸೈಕಲ್ ಕಲಿಯಲು ಹುಡುಗಿಯರನ್ನು ಕಳಿಸುತ್ತಿದ್ದದ್ದು ಅಪರೂಪ. ನಾನು ಐದನೇ ತರಗತಿಯ ರಜೆಯಲ್ಲಿ ಇದ್ದಾಗ ನನ್ನ ಗೆಳತಿಯೊಬ್ಬಳು ತಾನು ಈಜು ಮತ್ತು ಸೈಕಲ್ ಕಲಿಯುತ್ತಿರುವುದಾಗಿ. ತಿಳಿಸಿದಳು.ಅವಳಿಂದ ಪ್ರೇರಿತಳಾದ ನಾನು ಸೈಕಲ್ ಕಲಿಯಲೇಬೇಕು ಎಂದು ದೃಢ ನಿರ್ಧಾರ ಮಾಡಿದೆ. ಏಕೆಂದರೆ ಭಾವಿ ಕಟ್ಟೆಯ ಮೇಲೆ ನಿಂತು ಬಾವಿಗೆ ಹಾರಿ ಈಜು ಕಲಿಯುವ ಧೈರ್ಯ ನನ್ನಲ್ಲಿ ಇರಲಿಲ್ಲ.ಹಾಗಾಗಿ ಸೈಕಲ್ ಕಲಿಯಲು ಕಾರ್ಯಯೋಜನೆ ರೂಪಿಸಿದೆ.ನನಗೆ ಸೈಕಲ್ ಕಲಿಸುವಂತೆ ನನ್ನ ಚಿಕ್ಕ ಅಣ್ಣನ ಮನ ಒಲಿಸಿದೆ.
ಈ ಮೊದಲು ಸೈಕಲ್ ಕಲಿಸು ಎಂದು ದೊಡ್ಡ ಅಣ್ಣಂದಿರನ್ನು ದುಂಬಾಲು ಬೀಳುತ್ತಿದ್ದೆ ಯಾವಾಗಲಾದರೂ ಅಣ್ಣಂದಿರು ಮನಸ್ಸು ಮಾಡಿದರೆ, ಸೈಕಲ್ ಕಲಿಸಲು ಮುಂದಾಗುತ್ತಿದ್ದರು. ಸೈಕಲ್ ನಲ್ಲಿ ಅಡ್ಡ ಕಾಲು ಹಾಕಿ ಸೈಕಲ್ ಏರುತ್ತಿದ್ದೆನಾದರೂ, ಭಾರಹಾಕಿ ಪೆಡಲ್ ತುಳಿದು ಸೈಕಲ್ ಮುಂದೆ ಓಡಿಸುವುದು ನನಗೆ ನೀಗದಾದಾಗ “ನೀನು ಇನ್ನೊಂದು ಸ್ವಲ್ಪ ದೊಡ್ಡಕಿ ಆದ ಮೇಲೆ ಕಲಿಯುವಂತೆ.ಆವಾಗ ಕಲಸ್ತೇನಿ.”ಎಂದು ಸಮಾಧಾನ ಪಡಿಸಿ, ನನ್ನಿಂದ ಬಿಡಿಸಿ ಕೊಳ್ಳುತ್ತಿದ್ದರು. ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿ ಸುಮ್ಮನಾಗುತ್ತಿದ್ದೆ. ಚಿಕ್ಕ ಅಣ್ಣನ ಜೊತೆಗೆ ಸಲಿಗೆ ಜಾಸ್ತಿ ಇರುವುದರಿಂದ “ಅಣ್ಣಾ ನನ್ನ ಗೆಳತೆರೆಲ್ಲ ಸೈಕಲ್ ಕಲ್ಯಾಕ ಹತ್ಯಾರ ನನಗೂ ಕಲಿಸಿಕೊಡು….”ಅಂತ ಅವನಿಗೆ ದುಂಬಾಲು ಬಿದ್ದೆ. ನನ್ನ ಕಿಟಿಕಿಟಿ ತಾಳಲಾರದೆ ಅವನು ನನಗೆ ಸೈಕಲ್ ಕಲಿಸುವ ಗುರುವಾಗುವುದಕ್ಕೆ ಒಪ್ಪಿಕೊಂಡ.ಅವನಲ್ಲಿಯೂ ತಂಗಿಗೆ ಸೈಕಲ್ ಕಲಿಸುವ ಉತ್ಸಾಹ ಮೂಡಿತ್ತು.
ನಮ್ಮ ಮನೆಯ ಹಿಂದಿರುವ
ಗೌಡರ ಮನೆಯ ಮುಂಭಾಗದ
ದೊಡ್ಡ ಪಟಂಗಳವೆ ನಮ್ಮ ಆಟದ
ಮೈದಾನ ವಾಗಿತ್ತು. ಸೈಕಲ್ ಕಲಿಕೆ ಪ್ರಾರಂಭವಾಯಿತು . ನಾನು ನಿನಗಿಂತ ಎತ್ತರವಾದ ಸೈಕಲ್ ನಲ್ಲಿ ಅಡ್ಡ ಕಾಲು ಹಾಕಿ ಎರಡೂ ಕೈಯಲ್ಲಿ ಹ್ಯಾಂಡಲ್ ಹಿಡಿದು ನಿಂತೆ. ನನ್ನ ಖುಷಿಗೆ ಪಾರವೇ ಇರಲಿಲ್ಲ.ಪೆಡಲ್ ಮೇಲೆ ಕಾಲಿಟ್ಟು ಭಾರಹಾಕಿ ತುಳಿಯಲು ಹೇಳಿದ, ಅವನು ಮಗ್ಗುಲಲ್ಲಿ ನಿಂತು ಹ್ಯಾಂಡಲ್ ನೀ ಒಂದು ಕೈ ಯಿಂದ, ಇನ್ನೊಂದು ಕೈಯಿಂದ ಸೈಕಲ್ ಹಿಂದಿನ ಕ್ಯಾರಿಯರ್ ಹಿಡಿದಿದ್ದ. ನನ್ನೆಲ್ಲಾ ಭಾರಹಾಕಿ ಸೈಕಲ್ ತುಳಿದೆ.ಅದು ಜೋರಾಗಿ ಮುಂದೆ ಹೊಯಿತು.ಅಣ್ಣನಿಗೆ ಜೋಲಿ ಸಂಭಾಳಿಸಲು ಆಗಲಿಲ್ಲ, ನನಗೆ ಗಾಬರಿ…, ಕೈಬಿಟ್ಟೆ.
ಅಣ್ಣ ವಯಸ್ಸಿನಲ್ಲಿ ದೊಡ್ಡವನಾದರು ನನಗಿಂತ ಕುಳ್ಳಗಿದ್ದ. ಇಬ್ಬರು ಹಾಕಿಕೊಂಡು ಬಿದ್ದೆವು. ಬಿದ್ದ ರಭಸಕ್ಕೆ
ಮೊಳಕೈ ಮೊಳಕಾಲು ರಕ್ತಮಯವಾದವು.
ಈ ದುಸ್ಸಾಹಸಕ್ಕೆ ಅಣ್ಣ ತಪ್ಪಿತಸ್ತ ಸ್ಥಾನ ದಲ್ಲಿ ನಿಂತ.ಅಣ್ಣನಿಗೆ ಅಪ್ಪನಿಂದ ಹೊಡೆತಬಿತ್ತು. ನನ್ನಿಂದಾಗಿ ಹೊಡೆತ ತಿಂದ ಅಣ್ಣ ಇನ್ನುಮುಂದೆ ನಿನಗೆ ಯಾವತ್ತೂ ಸೈಕಲ್ ಕಲಿಸುವುದಿಲ್ಲ ಎಂದು ಶಪಥ ಮಾಡಿಬಿಟ್ಟ.ನನ್ನ ಸೈಕಲ್ ಕಲಿಯಲು ಕನಸು ಪ್ರಥಮ ಚುಂಬನಂ ದಂತಭಗ್ನಂ ಎನ್ನುವಂತಾಯಿತು.
ಕಾಲಬದಲಾದದ್ದು ತಿಳಿಯಲೇ ಇಲ್ಲ ಸೈಕಲ್ ಬಳಸುವುದು ಅವಮಾನ ಎನ್ನುವ ಸ್ಥಿತಿಗೆ ಮನಸ್ಥಿತಿಗಳು ಬದಲಾದವು.ಸೈಕಲ್ ಅಂಗಡಿಗಳು ಮಾಯವಾದವ ಸೈಕಲ್ ಗಳು ಶಾಲಾ ಮಕ್ಕಳ ಉಪಯೋಗಕ್ಕೆ ಮಾತ್ರ ಸಿಮಿತವಾದವು.ಮಕ್ಕಳ ಪ್ರೀತಿಗೆ ಪಾತ್ರವಾದವು.
ಹಲವಾರು ವಿವಿಧದ ಇಂಧನ ಆಧಾರಿತ ದ್ವಿಚಕ್ರ ವಾಹನಗಳು ಎಲ್ಲರ ಕೈಗೆಟುಕುವಂತಾದವು. ಅಭಿವೃದ್ಧಿಯ ನಾಗಾಲೋಟ ಹಲವಾರು ಆಪತ್ತುಗಳಿಗೆ ಕಾರಣವಾಗಿದೆ. ಮತ್ತೆ ಸೈಕಲ್ ಸವಾರಿ ಹೊಸ ರೂಪದಲ್ಲಿ ಮತ್ತೆ ಬಂದರೆ.ಆ ಹುರುಪಿನಲ್ಲಾದರು ಮತ್ತೆ ಸೈಕಲ್ ತುಳಿಯುವಂತಾದರೆ ,ಮಗ ಹಟ ಮಾಡಿ ಕೊಂಡುಕೊಂಡು ಒಂದು ವರ್ಷ ಮಾತ್ರ ಬಳಸಿ ಮೂಲೆಯಲ್ಲಿ ನಿಲ್ಲಿಸಿದ ಸೈಕಲ್ ರೋಡಿಗಿಳಿದರೆ ಅದೆ ಸಂತೋಷ ಅಂದಹಾಗೆ ಬೆಳಗಾವಿ ಯಲ್ಲಿ ಇನ್ನೂ ಸೈಕಲ್ ಸವಾರಿದ್ದಾರೆ. ದಿನವು ಬೈಲಹೊಂಗಲ ದಿಂದ ಬೆಳಗಾವಿಗೆ ಓಡಾಡುವಾಗ ನಗರಪ್ರವೇಶದ ಒಳದಾರಿಯಲ್ಲಿ ಹೋಗುವ ಸೈಕಲ್ ಸವಾರರನ್ನು ನೋಡುವುದೆ ಒಂದು ಖುಷಿ. ಈಗ ಆ ರಸ್ತೆಯಲ್ಲಿಯು ಸೈಕಲ್ ಸವಾರರು ಕಣ್ಮರೆಯಾಗುತ್ತಿದ್ದಾರೆ.
ಸೈಕಲ್ ಗಳಿಗ ಗತಕಾಲದ ಪಳೆಯುಳಿಕೆಯಾಗಿ ಹೋಟೆಲ್, ಉದ್ಯಾನ ವನಗಳಲಿ ಅಲಂಕಾರಿಕ ವಸ್ತುವಾಗಿ ಫೋಟೋ ಪ್ರಿಯರಿಗೆ ಫೋಸ ಕೊಡಲು ನಿಂತಿವೆ.

ಡಾ. ನಿರ್ಮಲ ಬಟ್ಟಲ

One thought on “

Comments are closed.

Don`t copy text!