ಮಮತೆಯ ಮಾತೆ

ಮಮತೆಯ ಮಾತೆ

 

ಅಂಬರನ ಮುಖಕೆ ಮುತ್ತನೀವ
ಉತ್ತುಂಗ ಶಿಖರಗಳ ಹಿಮಾಲಯ
ಭೂಕೈಲಾಸದಲಿ ಶಿವನಾಲಯ

ಭರತ ಭೂಮಿಯ ಜೀವದಾಯಿನಿ
ಅಮೃತವನುಣಿಸುವ ಪುಣ್ಯವಾಹಿನಿ
ಗಂಗೆ ತುಂಗೆ ನರ್ಮದೆ ಕಾವೇರಿ

ಮೂಡಲದಿ ಹೊನ್ನಗಿಂಡಿ ಸುರಿಸುತ
ಕತ್ತಲೆ ಕಳೆಯುತ ಬೆಳಕನೀಯುತ
ಜಗವ ಬೆಳಗುತ ಬರುವ ಭಾಸ್ಕರ

ಜೀವಸಂಕುಲಕೆ ತಂಬೆಲರನು ತಂದುಣಿಸಲು
ಮಂದವಾಗಿ ಸುಗಂಧ ಪಸರಿಸುವ ಮಾರುತ

ಹಸಿರು ಮಡಿಯನುಟ್ಟು ರಾರಾಜಿಸುತ
ವಿಂಧ್ಯ ಸಹ್ಯಾದ್ರಿ ನಿಲಗಿರಿ ಪರ್ವತ
ಕಾನನ ಕಾಡುಗಳಿಂದಾವ್ರತ

ಸಾಧು ಸಂತ ಮಹಂತರ ನಾಡು
ತುಳಸಿದಾಸ ಕಾಳಿದಾಸರ ಬೀಡು
ಶರಣರ ದಾಸರ ಪವಿತ್ರ ಕರುನಾಡು

ಹಸಿರೇ ಉಸಿರೆನುತ ಉಸಿರಿಗಾಗಿ
ಪರಿಸರ ರಕ್ಷಿಸುವ ಮಕ್ಕಳು ನಾವು
ತಾಯೇ ಇರಲಿ ನಮಗೆ ನಿನ್ನ ಶ್ರೀರಕ್ಷೆ

ಪೃಕೃತಿಯ ಮಮತೆಯ ಮಡಿಲಲ್ಲಿ
ಮನಸೋತು ಮೂಕವಿಸ್ಮಿತಳಾದೆ
ಚಿರರುಣಿ ನಾ ನಿನಗೆ ಕೃತಜ್ಞತೆಯಿಂದ ತಲೆಬಾಗುವೆ

ರಚನೆ – ಅನ್ನಪೂರ್ಣ ಸಕ್ರೋಜಿ ಪುಣೆ

Don`t copy text!