(ಗಾನ ಗಂಧರ್ವ ದಿ//ಡಾ//ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಹುಟ್ಟುಹಬ್ಬದ ನಿಮಿತ್ತ ಸ್ವರಚಿತ ಕವನ)
ಗಾನಗಂಧರ್ವ
ಗಾಯನವನ್ನೇ ತಮ್ಮ ಉಸಿರಾಗಿಸಿಕೊಂಡವರು
ಹುಟ್ಟೂರು ಆಂಧ್ರವಾದರೂ ಹುಟ್ಟಿದರೆ ಮತ್ತೆಕನ್ನಡ ನಾಡಿನಲ್ಲಿ ಹುಟ್ಟಿ ಬರುವೆ ಎಂದು ಹೆಮ್ಮೆಯಿಂದ ಹೇಳಿದವರು
ನಲವತ್ತು ಸಾವಿರ ಹಾಡುಗಳ ಸರದಾರ
ಹದಿನಾರು ಭಾಷೆಗಳಲ್ಲಿ ಹಾಡಿ ನಲಿದ ಸೋಲಿಲ್ಲದ ಸರದಾರ
ಮೋಜುಗಾರ-ಸೊಗಸುಗಾರನಾಗಿ ಹಾಡಿ ಮೆರೆದ ಗಾನವೀರ
ನೂರೊಂದು ನೆನಪುಗಳನ್ನು ಎದೆಯಲ್ಲಿ ಮೀಟಿ ಹಾಡಿದ ಗಾನ ಕುಬೇರ
ಎಂದಿಗೂ ಮರೆಯದ ಹಾಡುಗಳನ್ನು ನಮಗೆ ಬಿಟ್ಟು ಹೋದ ಜಗದೇಕವೀರ
ಈ ಭೂಮಿ ಬಣ್ಣದ ಬುಗರಿ ಆ ಶಿವನೇ ಚಾಟಿ ಅಂತ ಹಾಡಿ ಆ ಶಿವನ ಚಾಟಿಗೆ ನೀವೇ ಬೇಕಿತ್ತಾ
ಬದುಕಲಿಕ್ಕೆ ಹಾಡುವವರು ಹಲವಾರು ಜನರು ಹಾಡಲಿಕ್ಕಾಗಿಯೇ ಬದುಕಿದವರು ಇವರು
ಆಕಾಶದಲ್ಲಿ ಅನೇಕ ನಕ್ಷತ್ರಗಳಿದ್ದರು “ಧ್ರುವ ನಕ್ಷತ್ರ”ಇರುವುದು ಒಂದೇ
ಅನೇಕ ಗಾಯಕರಿದ್ದರೂ “ಎಸ್ ಪಿ ಬಾಲಸುಬ್ರಹ್ಮಣ್ಯ”ಒಬ್ಬರೇ ಗಾನ ಲೋಕದ “ಧ್ರುವ ನಕ್ಷತ್ರ”
ಹಾಡಲೆಂದೇ ಭೂಲೋಕಕ್ಕೆ ಇಳಿದು ಬಂದ “ಗಾನ ಗಂಧರ್ವ”
ಸುಮಧುರ ಹಾಡುಗಳಿಂದ ನೀವು
ಏರಿದಿರಿ “ಮೇರುಪರ್ವ”
ನಿಮ್ಮ ಧ್ವನಿಯ ಮಾಧುರ್ಯಕ್ಕೆ ಸಂಗೀತ ಸರಸ್ವತಿ ನನ್ನ ಮಗನೆಂದು
ಪಟ್ಟಳು” ಗರ್ವ”
ನಿಮ್ಮ ಸಂಗೀತ ಪಯಣದಲ್ಲಿ ಆಯಿತು ಅನೇಕ “ಮಹಾಪರ್ವ”
ಅವರ ಶರೀರ ಅಳಿದರೂ ಅವರ ಶಾರೀ’ರ ನಮ್ಮೊಂದಿಗಿದೆ ಅದನ್ನು ಕೇಳುತ್ತಾ ಸಂತೋಷ ಪಡೋಣ
–ಶ್ರೀಮತಿ ಸುಧಾ ಕಬ್ಬೂರ
ಧಾರವಾಡ