ಭೂಮಿ ಉಳಿಸಿ ಜೀವ ಬೆಳೆಸಿ ಪ್ರಾಣ ಭಯ ಅಳಿಸಿ.
ಏಕೆ ಕುಣಿವೆ ತೂಕ ತಪ್ಪಿ ಸಾಕು ಮಾಡು ಭೈರವ
ನಾಕ ಹೋಗಿ ನರಕವಾಯಿತು ಸಾಕು ಮಾಡು ಸೈರವ .
ಡಾ .ಸಿದ್ಧಯ್ಯ ಪುರಾಣಿಕರ .
ಭೂಮಿ ಮತ್ತು ಜೈವಿಕ ವಿಕಾಸದಿಂದ ಹಿಡಿದು ಇತ್ತೀಚಿನ ಸುನಾಮಿ ಭೂಕಂಪ ಭೂ ಕೊರೆತ ಬಿರುಕು ,ಲಾವಾದ ಅಟ್ಟಹಾಸ ಅನಾಹುತ ಘಟನೆಗಳನ್ನು ಅವಲೋಕಿಸಿದರೆ ನಾಗಲೋಟದಲ್ಲಿ ಓಡುತ್ತಿರುವ ತಂತ್ರಜ್ಞಾನ ಮಾನವನ ಅವಿಷ್ಕಾರಗಳು ಇಡಿ ಜೈವಿಕ ಸಂಕುಲಕ್ಕೆ ಪ್ರಾಣ ಭಯದ ಸಂಚಕಾರ ತಂದು ಒಡ್ಡಿವೆ ಎಂದೆನಿಸುತ್ತದೆ.ಮಾನವ ಇಂದು ತಾನು ನಿಂತ ನೆಲೆಯ ಮೇಲೆ ನಿರಂತರ ದಾಳಿ ಮಾಡುತ್ತಿದ್ದಾನೆ. ಜಾಗತಿಕ ಯುದ್ಧಗಳು ,ಕ್ಷಿಪಣಿಗಳ ಬಳಕೆ ,ಅಣ್ವಸ್ತ್ರಗಳ ಸಂಶೋಧನೆ ಬಾಹ್ಯಾಕಾಶದ ಪ್ರಯೋಗಗಳು ಮನುಷ್ಯನ ತನ್ನ ಜೀವಕ್ಕೆ ಅಷ್ಟೆ ಅಲ್ಲ ಇಡಿ ಜಾಗತಿಕ ಜೀವಿ ಸಸ್ಯ ಪಕ್ಷಿ ಕೀಟ ಜಲಚರ ಕಾಡು ಪ್ರಾಣಿಗಳಿಗೆ ಕುತ್ತು ತಂದಿದ್ದಾನೆ.
ಇದಕ್ಕೆ ಒಂದು ಕೊನೆಯಿಲ್ಲವೆ ?
ಇಂತಹ ಓಟ ಬೆಳವಣಿಗೆ ನಿರಂತರವಾಗಿದ್ದರೆ ಭೂಮಿ ಎಂಬ ಗ್ರಹವು ತನ್ನ ವಿನಾಶದ ಅಂಚಿಗೆ ಹೋಗುವದರಲ್ಲಿ ಎರಡು ಮಾತಿಲ್ಲ.
ಅವಿಷ್ಕಾರ ಬೇಕು ಅವು ಪ್ರಗತಿಯತ್ತ ಒಯ್ಯಬೇಕು ಆದರೆ ಮಾನವನ ಸಂಕುಚಿತ ದ್ವೇಷ ಮಾತ್ಸರ್ಯ ಗುಣದಿಂದ ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರದ ಮೇಲೆ ಯುದ್ಧ ಸಾರಿ ಜಾಗತಿಕ ಅವಸಾನ ತಂದೊಡ್ಡಿವೆ .
ಓಜೋನ್ ಪದರಿನ ನಾಶ ( Depletion of Ozone )
ಓಜೋನ್ ಪದರು ಎಂದರೇನು?
ಭೂಮಿಯ ಪರಿಸರದಲ್ಲಿ ಓಜೋನ್ ಪದರು ಆಳವಾಗಿ ಸಾಂಧ್ರವಾಗಿ ಇರುತ್ತದೆ . ಆಮ್ಲಜನಕ ಮೂರು ಅಣುಗಲಿರುವ ಸ೦ಯೊಜನೆಗೆ ಓಜೋನ್ ಎನ್ನುತ್ತೇವೆ ಇಂತಹ ಅನಿಲಿನ ಪದರಿಗೆ ಸ್ಟ್ರಾಟೊಸ್ಫಿರ ಎನ್ನುತ್ತೇವೆ . ಹೆಚ್ಚಿನ ಸಾಂಧ್ರತೆ ಹೊಂದಿದ ಓಜೋನ್ ಪದರಿಗೆ ಓಜೊನೊಸ್ಫಿರ ಎನ್ನುತ್ತೇವೆ .ಓಜೊನೊಸ್ಫಿರ ಭೂಮಿಯ ಪರಿಸರದಲ್ಲಿ ಮೇಲೆ 12 -ರಿಂದ 20 ಕಿಲೋ ಮೀಟರ ಅಂತರದಲ್ಲಿ ಕಂಡು ಬರುತ್ತದೆ .
ಓಜೋನ್ ಪದರು ಗಟ್ಟಿಯಾಗಿದ್ದು ತನ್ನ ಸಾಂಧ್ರತೆಯಿಂದ ಭೂಮಿಗೆ ಆಗುವ ಅನಾಹುತಗಳನ್ನು ತಪ್ಪಿಸಿ ಭೂಮಿಯನ್ನು ರಕ್ಷಿಸುತ್ತದೆ. .ಭೂಮಿಗೆ ಮುಖ್ಯ ಹಾನಿ ಮಾಡುವುದೇ ಸೂರ್ಯ . ಸೂರ್ಯನ ಅತ್ಯಂತ ಬಲಶಾಲಿ ನೀಲಾತೀತ ಕಿರಣಗಳು ( ULTRA VIOLET RAYS ) ಭೂಮಿಗೆ ಹಾಳು ಉಂಟುಮಾಡುತ್ತವೆ . ಓಜೋನ್ ಪದರನ್ನು ಮೊಟ್ಟ ಮೊದಲಿಗೆ 1913 ರಲ್ಲಿ ಫ್ರೆಂಚ್ ಭೌತ ಶಾಸ್ತ್ರಜ್ಞ ಚಾರ್ಲ್ಸ್ ಫ್ಯಾಬ್ರಿ ಮತ್ತು ಹೆನ್ರಿ ಭುಯಿಸ್ಸೊನ್ ಕಂಡು ಹಿಡಿದರು . ಓಜೋನ್ ಪದರು ಭೂಮಿಗೆ ಆಗುವ ಶೇಕಡಾ 97-99% ಹಾನಿಕಾರಕ ನೀಲಾತೀತ ಕಿರಣಗಳನ್ನು ನಾಶ ಮಾಡಿ ಭೂಮಿಯನ್ನು ಶುದ್ಧ ಆಮ್ಲ ಜನಕದಿಂದ ರಕ್ಷಿಸುತ್ತವೆ. .ಸೂರ್ಯನಿಂದ ನೇರವಾಗಿ ನೀಲಾತೀತ ಕಿರಣಗಳು ಬಂದರೆ ಭೂಮಿಯ ಪ್ರಾಣಿ ಪಕ್ಷಿಗೆ ಹಾನಿಕಾರಕವಾಗುತ್ತದೆ .
ಓಜೋನನ ಮುಖ್ಯ ಲಕ್ಷಣ -ಸೂರ್ಯನ ಕಿರಣಗಳನ್ನು ಸಂಪೂರ್ಣವಾಗಿ ಹೀರಿಕೊಂಡು ಶುದ್ಧ ಮತ್ತು ನೀಲಾತೀತ ಕಿರಣ ಮುಕ್ತ ಶುದ್ಧ ಬೆಳಕು ದೊರೆಯ ಬಲ್ಲದು 290 ನ್ಯಾನೋ ಮೀಟರ ಹೊಂದಿದ ಪರಮಾಣುವನ್ನು ಓಜೋನ್ ಸಂಪೂರ್ಣ ಹೀರಬಲ್ಲದು. 1970 ರಲ್ಲಿ ಮೊಟ್ಟ ಮೊದಲಿಗೆ ಓಜೋನ್ ಕೊರೆಯುವದರ ಬಗ್ಗೆ ಪತ್ತೆ ಹಚ್ಚಲಾಗುತ್ತದೆ .
ಓಜೋನ್ ಕ್ಷಿಣಿಸುವ ಕಾರಣಗಳು
–
ಭೂಮಿಯ ಮೇಲಿನ ಜ್ವಾಲ ಮುಖಿ ಮತ್ತು ಕುದಿಯುವ ಶಾಖ ಎಲ್ ಚಿಚೋನ್ 1983 ರಲ್ಲಿ ಮತ್ತು ಎಂ ಟಿ . ಪಿನಟುಬೊ 1991 ರಲ್ಲಿ ಅವರು ಓಜೋನ್ ಕೊರೆತ ವಿನಾಶದ ಬಗ್ಗೆ ಸಂಶೋಧನೆ ಮಾಡಿದರು.
ಮನುಷ್ಯ ಮಾಡುವ ತಪ್ಪಿನಿಂದ ಆಗುವ ಓಜೋನ್ ಕೊರೆತ . ಮಾನವ ನಿರ್ಮಿತ ಕ್ಲೋರಿನ್ ಮತ್ತು ಬ್ರೋಮೀನ್ ಕ್ಲೋರೋಫ್ಲೋರೋ ಪದಾರ್ಥಗಳ ಬಳಕೆ. (CFCs). CFCs (chlorofluorocarbons), , CH3CCl3 (Methyl chloroform), CCl4 (Carbon tetrachloride), HCFCs (hydro-chlorofluorocarbons), ಹೈಡ್ರೋ ಬ್ರೋಮೋ ಫ್ಲೋರೋ ಕಾರ್ಬನ್ , ಮೀಥೈಲ್ ಬ್ರೊಮೈಡ್ ಮುಂತಾದ ರಾಸಾಯನಿಕ ಪದಾರ್ಥಗಳು ಓಜೋನ್ ಪದರಿನ ವಿನಾಶಕ್ಕೆ ಕಾರಣವಾಗುತ್ತದೆ, ಇಂತಹ ಪದಾರ್ಥಗಳನ್ನು (ODS) ಎಂದು ಕರೆಯಲಾಗುವದು.ಕ್ಲೋರೋಫ್ಲೋರೋಕಾರ್ಬೋನ್
ವಾಯುಗೊಳದಲ್ಲಿ ಬಿಡುಗಡೆಯಾಗುವದರಿ೦ದ ಓಜೋನ್ ಪದರು ನಾಶ ಹೊಂದುತ್ತದೆ.
ಸ್ವಚತೆಯ ಮಾಡುವ ರಾಸಾಯನಿಕಗಳು (Cleaning Agents ).
ಕೊಲಂಟ್ಸ್ ಮತ್ತು ರಿಫ಼್ರಿಜಿರಟರ
ಪ್ಯಾಕಿಂಗ ಮಾಡುವ ವಸ್ತುಗಳು (Packing material )
ಹವಾ ನಿಯಂತ್ರಿತ ವ್ಯವಸ್ಥೆ (Air conditioning )
ಎರೊಸೊಲ್ಸ್ ಮತ್ತು ಸ್ಪ್ರೇ (Aerosol spray cans etc.)
ಓಜೋನ್ ಪದರು ನಾಶವು ನಿರಂತರ ಮಾನ್ಸೂನ ಮಳೆಯಿಂದಾ ಮತ್ತೆ ಸುಧಾರಿಸುವ ಸಾಧ್ಯತೆ ಇರುತ್ತದೆ. ಆದರೆ ಮಳೆಯಾ ವೈಫಲ್ಯದಿಂದ ಇಂತಹ ರಾಸಾಯನಿಕಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.- ಒಂದು ಕ್ಲಾರಿನೆ ಪರಮಾಣು 1, 00,000 ಓಜೋನ್ ಪರಮಾಣು ಗಳನ್ನು ಹಾಲು ಮಾಡುತ್ತದೆ..ಇದೆ ರೀತಿ ಬ್ರೋಮೀನ್ ಪರಮಾಣು ಕ್ಲೋರಿನಿಗಿಂತ 40 ಪಟ್ಟು ಹಾನಿಕಾರಕವಾಗಿದೆ.
ಆಮ್ಲಿಯ ಮಳೆಗಳು ( ACID RAIN )
ರಾಸಾಯನಿಕ ಸ೦ಯೊಜನೆಯಿ೦ದಾ ಹವಾಮಾನ ಮತ್ತು ವಾಯು ಗೋಳದಲ್ಲಿ ಸಲ್ಫರ್ ಡೈಆಕ್ಸೈಡ್ ನೈಟ್ರೋಜನ್ ಆಕ್ಸೈಡ್ ಇಂತಹ ಅನಿಲಗಳು ಅನಿಲದಲ್ಲಿ ವಿಲಿನಗೊಂದು ಅಲ್ಲಿನ ಜಲಜನಕದೊಂದಿಗೆ ಕೂಡಿಕೊಂಡು ಗಂಧಕಾಮ್ಲ ಮತ್ತು ನೈಟ್ರಿಕ್ ಆಮ್ಲ ಉಂಟು ಮಾಡುತ್ತವೆ. ಮೊಡಗಳಲಿ ಶೇಖರಣೆಗೊಂಡ ಗಾಳಿಯಲ್ಲಿ ತೇಲಿಕೊಂಡು ಸಾಂಧ್ರತೆ ಹೆಚ್ಚಾದಾಗ ಮಳೆ ಸುರಿಯುತ್ತದೆ. ಆಮ್ಲಿಯ ಅ೦ಶ ಹೊಂದಿದ ಈ ಮಳೆಯಿಂದಾ ವಿಪರಿತ ಮಳೆ ಮಂಜು ಹಿಮವಾಗಿ
ಜೀವ ಕುಲಕ್ಕೆ ಕಂಟಕ ಒಡ್ಡುತ್ತದೆ.
ಮಾನವನ ದೈನಂದಿಕ ಜೀವನ ಚಟುವಟಿಕೆಗಳು ವಿಪರೀತ ಗಂಧಕ ನೈಟ್ರೋಜನ್ ಪದಾರ್ಥಗಳ ಬಳಕೆ , ಕೆಲ ದಶಕಗಳಿಂದಾ ಮನುಷ್ಯ ಅನೇಕ ರಾಸಾಯನಿಕ ಪದಾರ್ಥಗಳ ಮಿತಿ ಮೀರಿ ಬಳಕೆ ಮಾಡಿ ವಾತಾವರಣದಲ್ಲಿ ಅವುಗಳ ಅನಿಲ ರೂಪ ಹೆಚ್ಚಿಗೆಯಾಗಿ ಅವೆಲ್ಲ ವಾಯುಗೊಳದಲ್ಲಿ ಮಿಲನಗೊಂಡು ಆಮ್ಲಿಯ ಮಳೆಯಾಗುತ್ತವೆ. ವಾಹನಗಳ ಹೊಗೆ ಕಲ್ಲಿದ್ದಲಿನ ನಿರುಪಯುಕ್ತ ವಸ್ತುಗಳು ,ವಿದ್ಯುತ್ ಘಟಕಗಳು ,ಪಳೆಯುಳಕೆಗಳ ವಸ್ತುಗಳನ್ನು ಬಳಸುವ ಕಾರಣದಿಂದಾ ಆಮ್ಲಿಯ ಮಳೆಗಳು ಹೆಚ್ಚಾಗಿ ಕಾಣುತ್ತವೆ. ಇಂತಹ ನಿರುಪಯುಕ್ತ ತ್ಯಾಜಗಳ ಸಂಸ್ಕರಣಾ ಘಟಕ ಅಗತ್ಯ.ಕಾರ್ಖಾನೆ ಉದ್ಧಿಮೆ ಸಕ್ಕರೆ ಉದ್ಧಿಮೆ ,ಲಾವಾ ದಿಂದ ಉತ್ಪತ್ತಿಯಾಗುವ ಗಂಧಕ ಹಾನಿಕಾರಕ.
ನಿಸರ್ಗ ತನ್ನ ಸಮತೋಲನವನ್ನು ಕಾಪಡಿಕೊಂಡು ಹೋಗುತ್ತದೆ. ಸಾಮಾನ್ಯವಾಗಿ ಮಳೆಯ ಆಮ್ಲಿಯ ಅ೦ಶ (5PH ) ಆಮ್ಲಿಯ ಅ೦ಶದಿ೦ದ ಮಳೆಯು ಹರಳುಗೊಂಡು ಗಟ್ಟಿಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಸಧ್ಯ ಬೀಳುವ ಹಿಮಪಾತ ದಟ್ಟವಾದ ಮಂಜು ಹಿಮದ ಕುಸಿತ ವಿಪರಿತ ಮಳೆ , ಭೂಮಿಯಲ್ಲಿನ ಅನೇಕ ಜೀವ ಜಾಲಕ್ಕೆ ಪ್ರಾಣಿ ಹಾನಿ ಮಾಡುವ ಸಾಧ್ಯತೆಗಳಿವೆ.
ಆಮ್ಲಿಯ ಮಳೆಯ ಹಾನಿಗಳು
ಭೂಮಿಯೊಳಗಿನ ತಟಸ್ಥ ರಾಸಾಯನಿಕ ( NEUTRAL ) ವಸ್ತುಗಳು ಭೂಮಿಯ ಸಕಲ ಸಮತೋಲನವನ್ನು ಕಾಪಾಡುವಲ್ಲಿ ನಿರಂತರವಾಗಿರುತ್ತವೆ. ಆದರೆ ನಿರಂತರ ಆಮ್ಲಿಯ ಮಳೆ ಆದರೆ ಬಂಡೆಗಲ್ಲು ಭೂಮಿಯ ಗುಣ ಲವಣಾ೦ಶಗಳು ನಾಶ ಹೊಂದುವದರಲ್ಲಿ ಎರಡು ಮಾತಿಲ್ಲ.
ಭೂಮಿ ಬಂಜರಾಗುತ್ತದೆ. ಆಮ್ಲಿಯ ಮಳೆಯಿ೦ದಾ ಬೆಲೆ ಹಾನಿ ಜಲ ಚರ ಹಾನಿ ಮರಗಳು ನದಿಗಳು ಹಳ್ಳ ಕೊಳ್ಳಗಳು ತಮ್ಮ ಮೂಲ ಸ್ವರೂಪವನ್ನು ಕಳೆದು ಕೊಂದು ಅಮ್ಲಿಯ ಅಥವಾ ಲವಣಗಳ ನೀರು ಕ್ಷಾರದ ಭೂಮಿ ಉಂಟಾಗುವ ಸಾಧ್ಯತೆಯಿದೆ.
ನೈಸರ್ಗಿಕ ಗೊಬ್ಬರ ದೇಸಿ ಬೀಜಗಳು ಕಡಿಮೆ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಆರೋಗ್ಯ ಕಾಪಾಡಬಹುದು.
ಪರಮಾಣು ವಿಕಿರಣ ಹಾನಿ ಮತ್ತು ನಷ್ಟ .( NUCLEAR RADIATION )
ಸಾಮಾನ್ಯವಾಗಿ ಅಲ್ಫಾ ಬೀಟಾ ಗಾಮಾ ಕಿರಣಗಳು ನಾವು ನೋಡಿದ್ದೇವೆ, ಆದರೆ ಇಂದಿನ ಅಣುವಿಕಿರಣ ಸೋರಿಕೆ ಸೂಸಿಕೆ ,
ಅಲ್ಫಾ ಕಣಗಳಲ್ಲಿ ಎರಡು ಪ್ರೋಟಾನ್ ಮತ್ತು ಎರಡು ನ್ಯೂಟ್ರಾನ್ ಇದ್ದು ಹೀಲಿಯಂ ಅಂತಹ ಪರಮಾಣುವಿನಲ್ಲಿ ಅಣುವಿನ ಮತ್ತು ಪ್ರೋಟಾನ್ ನ್ಯೂಟ್ರಾನ್ ಪ್ರಪಾತವು ಏರು ಪೇರಾಗಿ ಅಲ್ಲಿ ವಿಕಿರಣವು ಸೂಸುತ್ತದೆ.
ಹೀಲಿಯಂ ಥೋರಿಯಂ ಯುರೇನಿಯಂ ಹೀಗೆ ಅಣು ವಿಕಿರಣಗಳು ಮನುಷ್ಯನ ಅನೇಕ ಶಕ್ತಿಯ ರೂಪವನ್ನು ಮತ್ತು ಪರ್ಯಾಯವಾದ ಶಕ್ತಿಯನ್ನು ಕೊಡಬಲ್ಲದಾದರು ಅದರ ಹಿಂದಿನ ಅನೇಕ ಹಾನಿಗಳ ಬಗ್ಗೆ ಮನುಷ್ಯ ತನ್ನ ಗಮನ ಹರಿಸ ಬೇಕಿದೆ. ಚೆರ್ನೋಬಿಲ್ಲ ದುರನ್ತವಿನ್ನೂ ಮನುಷ್ಯನ ಮನಸ್ಸಿನಿಂದಾ
ಮಾಸಿಲ್ಲ.
ವೈದ್ಯಕೀಯ ಆರೋಗ್ಯ ಔಷಧಿ ಕೃಷಿ ತಂತ್ರಜ್ಞಾನ ಯುದ್ಧ ಸಲಕರಣೆಗಳು ವಿದ್ಯುತ್ ಹೀಗೆ ಅನೇಕ ಜನೋಪಯೋಗಿ ಲಾಭವಿದ್ದಾರೂ ಅದರ ಹಾನಿ ಭೀಕರವಾಗಿದೆ.ಹೀಗಾಗಿ ವಿಶ್ವ ಪರಮಾಣು ಒಪ್ಪಂದವನ್ನು ಎಲ್ಲಾ ರಾಷ್ಟ್ರಗಳು ಅಂಕಿತ ಹಾಕಿ ಅದಕ್ಕೆ ಬದ್ಧರಾಗಿ ಇತಿ ಮಿತಿ ಪರಮಾಣು ಶಕ್ತಿ ಮತ್ತು ಇತರ ಉಪಯೋಗಕ್ಕೆ ಬಳಸಿಕೊಂಡರೆ ಅದು ನಿಜಕ್ಕೂ ಮನುಕುಲಕ್ಕೆ ಲಾಭವಾಗುತ್ತದೆ.
ಮನುಷ್ಯ ಇಂದು ತನಗೆ ಗೊತ್ತಿಲದೇ ಜೈವಿಕ ಮಿತಿ ಮೀರಿ ಪರಮಾಣು ವಿಕಿರಣ ಸೂಸಿಕೆ ಸೋರಿಕೆಯನ್ನ್ ಆಸ್ವಾದಿಸುತ್ತಿದ್ದಾನೆ . ಇದರಿಂದ ಕಿವುಡುತನ ಬಂಜೆತನ ಕಾನ್ಸರ್ ಪಿತ್ತ ಕೋಶ ಶ್ವಾಸಕೋಶ ಹೀಗೆ ಪ್ರತಿ ಅಂಗಾಂಗಗಳು ಹಾನಿಗೊಳ್ಳುತ್ತವೆ.
ಶುದ್ಧ ಹವೆ ಗಾಳಿ ನೀರು ಮತ್ತು ಯೋಗಗಳಿಂದ ಇಂತಹ ಪರಮಾಣು ವಿಕಿರಣಕ್ಕೆ ತುತ್ತದವರನ್ನು ಸ್ವಲ್ಪ ಮಟ್ಟಿಗೆ ರಕ್ಷಿಸಬಹುದು ಮತ್ತು ಪರಮಾಣು ಶಕ್ತಿ ಮು೦ಬರುವ ದಿನಗಳ ಅತ್ಯಂತ ಅಗತ್ಯವಾದ ಬೇಡಿಕೆ ಹೀಗಾಗಿ ಪರಮಾಣುವಿನ ಶಕ್ತಿ ಮತ್ತು ಅದರಿಂದಾಗುವ ಅನಾಹುತಗಳ ಬಗ್ಗೆ ತೀವ್ರವಾಗಿ ಗಮನ ಹರಿಸುವ ಅಗತ್ಯವಿದೆ.
ಪ್ರತಿಯ ಹಂತಕೋ ಪ್ರಳಯದಾ ದುರಂತಕೋ ಓಡುತಿದೆ ವಿಶ್ವ ಎಂದು ರಾಷ್ಟ್ರ ಕುವೆಂಪು ಅವರು ಹೇಳಿದ ಹಾಗೆ ಪರಮಾಣು ಅಣು ಶಕ್ತಿಯ ಉಪಯೋಗ ಮಾಡುವ ಹುಮ್ಮಸದಲ್ಲಿ ಭೂಮಿಯನ್ನು ವಿನಾಶದ ಅಂಚಿಗೆ ಸಿಲುಕಿಸುವುದು ಬೇಡ.
ಕುಸಿಯುತ್ತಿರುವ ಅಂತರ ಗಂಗೆ .( Decrease of under water table )
ಅಂತರ ಗಂಗೆ ಪ್ರತಿವರ್ಷ ಆಳಕ್ಕೆ ಕುಸಿಯುತ್ತಿದೆ . ಹೆಚ್ಚುತ್ತಿರುವ ಜನ ಸಂಖ್ಯೆ , ಮಿತಿ ಮೀರಿದ ನಗರೀಕರಣ ,ಜಾಗತಿಕ ತಾಪಮಾನದ ವೈಪರಿತ್ಯ .ಮಾನ್ಸೂನಗಳ ವೈಫಲ್ಯ ,ನಿರಂತರವಾದ ಮರಳು ಮಾಫಿಯಾ ,ಮರಳು ದಂದೆ, ಕೆರೆ ಹಳ್ಳ ನದಿಗಳ ಒತ್ತುವರಿ. ಹೆಚ್ಚುತ್ತಿರುವ ಕೊಳವೆ ಭಾವಿಗಳು ಇಂತಹ ಮಾನವ ನಿರ್ಮಿತ ಚಟುವಟಿಕೆಗಳಿಂದಾಗಿ ನದಿಯ ಪಾತ್ರದ ಭೂ ಪ್ರದೇಶದಲ್ಲಿ ನೀರು ಶೇಖರನೆಯಾಗದೆ ಸಮುದ್ರ ಪಾಲಾಗುತ್ತಿರುವುದು ದುರಂತದ ವಿಷಯ.
ನದಿ ನೀರಿನ ಹಂಚಿಕೆ ತಗಾದೆ ವ್ಯಾಜ್ಯ ನಿಲ್ಲಬೇಕು ಆಳ ಮತ್ತು ಉದ್ದವಾದ ನದಿಗಳು ಫಲವತ್ತಾದ ಭೂ ಪ್ರದೇಶವನ್ನು ನಿರ್ಮಿಸುತ್ತವೆ. ಆದರೆ ನದಿಯ ನೀರನ್ನು ನಾವು ಸರಿಯಾಗಿ ಬಳಸದೆ ನದಿಯ ಕೆಳಗಡೆ ಭೂ ಭಾಗದ ನೀರು ಇನ್ಗುವಿಕೆಯ ಬಗ್ಗೆ ಲಕ್ಷ ವಹಿಸದೆ ಅತ್ಯಂತ ಅನಾಹುತಕ್ಕೆ ಕಾರಣವಾಗಿದ್ದೇವೆ.
ಅಂತರಗಂಗೆಯ ಮತ್ತ ಅದರ ಆಳದ ಬಗ್ಗೆ ನಾವು ಎಚ್ಚರ ವಹಿಸಬೇಕು.
1 )ಡ್ಯಾಮಗಳಲ್ಲಿನ ಹೂಳು ಎತ್ತಬೇಕು
2 ) ಕೊಳವೆ ಭಾವಿಯ ಸುತ್ತ ಇಂಗು ಬಚ್ಚಲು ನಿರ್ಮಿಸಬೇಕು. ಪ್ರತಿ ಹೊಲದಲ್ಲಿ ಇಂದು ಬಚ್ಚಲು ನಿರ್ಮಾಣ ಅಗತ್ಯ.
3 ) ನದಿ ಹಳ್ಳ ಕೆರೆಯ ಸುತ್ತ ಬೆಳೆದ ಕಸವ ಕಿತ್ತು ಅಂತರ ಗಂಗೆ ಮಟ್ಟ ಹೆಚ್ಚಿಸಬೇಕು.
4 ) ನಗರೀಕರಣದ ಸಮಯದಲ್ಲಿ ಮಳೆಯ ನೀರಿನ ಕೊಯ್ಲು ಒಂದು ಯೋಜನೆ ಕಡ್ಡಾಯಗೊಳಿಸಬೇಕು.
5 ) ನದಿಗಳ ವಿಪರಿತ ಒತ್ತುವರಿ ನಿಲ್ಲಬೇಕು
6 ) ನದಿ ಕೆರೆ ಸರೋವರ ಹಳ್ಳಗಳ ಒತ್ತುವರಿ ತೆರುವುಗೊಳಿಸುವ ಆದೇಶ ಮತ್ತು ಕಠಿಣ ಕ್ರಮ ಕಾನೂನು ನಿರ್ಮಾಣಗೊಳ್ಳಬೇಕು .
7) ವ್ಯಾಪಕವಾಗಿ ನಡೆಯುವ ಮರಳು ದಂದೆಗೆ ಕಡಿವಾಣ ಹಾಕಬೇಕು.
ಪರಿಸರ ಮಾಲಿನ್ಯ ನಿಯಂತ್ರಣ ಒಂದು ಸಾಮಾಜಿಕ ಹೊಣೆಗಾರಿಕೆ.
1) *ಜಲಮಾಲಿನ್ಯ –
ಇಂದು ಕಾರ್ಖಾನೆ ಉದ್ಧಿಮೆಗಳು ತಮ್ಮ ನಿರುಪಯುಕ್ತ ರಾಸಾಯನಿಕ ವಸ್ತುಗಳನ್ನು ನೇರವಾಗಿ ನದಿಗೆ ಹಳ್ಳಕ್ಕೆ ಸಮದ್ರಕ್ಕೆ ವಿಸರ್ಜಿಸುತ್ತಿದ್ದಾರೆ . ಇದರಿಂದ ಜಲಚರ ಮೀಎನು ಮೊಸಳೆ ಎಲ್ಲ ಜಾತಿಗೆ ಸೇರಿದ ಜಲಚರಗಳು ಕ್ರಮೇಣವಾಗಿ ನಶಿಸಿ ಹೋಗುತ್ತಿವೆ.ನದಿ ಶುದ್ಧಿಕರಣಕ್ಕೆ ಸಾವಿರಾರು ಕೋಟಿ ಹಣ ಹಾಕಿ ಅದನ್ನು ನೈರ್ಮಲ್ಯ
ಮಾಡುವ ಮೊದಲು ಜಲ ಸ೦ರಕ್ಷಣೆ ಅದು ಒಂದು ಸಾಮಾಜಿಕ ಹೊಣೆಗಾರಿಕೆಯಾಗಬೇಕು. ಕಾರ್ಖಾನೆಯ ತ್ಯಾಜ್ಯ ವಸ್ತು , ನಗರೀಕರಣದ ಎಲ್ಲ ತ್ಯಾಜ್ಯಗಳು ಇಂದು ನದಿಯ ಪಾಲಗುತ್ತಿದ್ದು ಅದು ಪ್ರಾಣಿ ಪಕ್ಷಿ ಮನುಷ್ಯರ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತವೆ . ಹೀಗಾಗಿ ಕಾರ್ಖಾನೆಯ ತ್ಯಾಜ್ಯ ವಸ್ತು ಮತ್ತು ನಗರೀಕರಣದ ನಿರುಪಯುಕ್ತ ವಸ್ತುಗಳ ನಿರ್ವಹಣೆಯಲ್ಲಿ ( SOLID WASTE MANAGEMENT )ಸರಕಾರ ಮತ್ತು ಸಾರ್ವಜನಿಕರು ಪ್ರಾಮಾಣಿಕವಾಗಿ ಕಾಳಜಿ ವಹಿಸಬೇಕು. ಬೆಂಗಳೂರಿನಲ್ಲಿ ತ್ಯಾಜ್ಯ ವಸ್ತುಗಳ ವಿಲೇವಾರಿ ಒಂದು ದೊಡ್ಡ ಸಮಸ್ಯೆಯಾಗಿದೆ.ಪ್ರತಿ ವರ್ಷ ರಾಜಾ ಕಾಲುವೆಯಲ್ಲಿ ಹತ್ತು ಮಕ್ಕಳು ಜೀವ ತೆತ್ತುತ್ತವೆ. ಭಾರತದಲ್ಲಿ ಬರುವ ಸರಸ್ವತಿ ನದಿ ಈಗ ಇಲ್ಲದಾಗಿದೆ.
2 ) ವಾಯು ಮಾಲಿನ್ಯ
ವಿಪರಿತ ಕ್ಲೋರೋ ಫ್ಲೋರೋ ಪದಾರ್ಥಗಳ ಬಳಕೆ ಎರೋಸೋಲ್ಸ್ ,ಸ್ಪ್ರೇ ಸಕ್ಕರೆ ಉದ್ಧಿಮೆ ರಾಸಾಯನಿಕ ಫ್ಯಾಕ್ಟರಿಗಳು ಕಲುಷಿತ ವಾತಾವರಣ ವನ್ನು ನಿರ್ಮಿಸುತ್ತವೆ. ಇಂದು ಶುದ್ಧ ಹವೆ ಗಾಳಿ ಜೈವಿಕ ಜಾಲದ ಬೇಡಿಕೆ. ಜನರು ಮುಂಜಾನೆ ಗಾರ್ಡನ್ ,ತೋಟ ಲಾಲ ಬಾಗ್ ದತ್ತ ಓಡುತ್ತಾರೆ.
ಆಮ್ಲ ಜನಕ ಪ್ರಮಾಣ ಮತ್ತು ಅದರ ಶುದ್ದತೆ ನಿತ್ಯ ನಿತ್ಯ ಕಡಿಮೆಯಾಗುತ್ತಿದೆ.ಅನೇಕ ರಾಸಾಯನಿಕ ಅನಿಲಗಳು ಶ್ವಾಸಕೋಶ ಪುಪ್ಪಸವನ್ನು ಹಾಳು ಮಾಡುತ್ತಿವೆ.ಇಂಗಾಲಾಮ್ಲ ಡೈಆಕ್ಸೈಡ್ ಕಾರ್ಬನ್ ಡೈಆಕ್ಸೈಡ್ ಗಾತ್ರರಿಂದ ಹಿಮಾಯದಲ್ಲಿನ ಪರಿಸರದಲ್ಲಿ ಹೆಚ್ಚಾಗುತ್ತಿದೆ ಇದರಿಂದ ಹಿಮಾಲಯದ ಹಿಮದ ಪದರುಗಳು ಕರಗಿ ನೀರಾಗುತ್ತಿದೆ . ನದಿಯ ಪಾತ್ರದಲ್ಲಿ ಬದುಕು ಅನಿಶ್ಚಿತವಾಗಿದೆ . ಸಮುದ್ರ ಮತ್ತ ಹೆಚ್ಚುತ್ತಿದೆ.
3 ಶಬ್ದ ಮಾಲಿನ್ಯ
ವಾಹನಗಳ ದಟ್ಟ ಓಡಾಟ ಕಾರ್ಖಾನೆಗಳ ಸಪ್ಪಳ ಭೌಗೋಲಿಕ ಅನಾಹುತಗಳು ಭೂಕಂಪನ ಸುನಾಮಿ ಭೂಮಿ ಬಿರುಕು .ಜನರು ಬಳಸುವ ಸಂಗೀತ ಚಲನ ಚಿತ್ರ ಮೊಬೈಲ್ ಫೋನಿನ ಧ್ವನಿ ಕರ್ಕಶವಾದ ವಾದ್ಯ ಸಂಗೀತ ಮೇಳಗಳು . ಹಬ್ಬದ ಪಟಾಕಿಗಳು , ಯುದ್ಧದಬಾಂಬ್ ಗೋಲಿ ತುಪಾಕಿಯ ಶಬ್ಧಗಳು ಸಿಡಿಮದ್ದು ,ಗಣಿಗಾರಿಕೆಯ ಜೆಲ್ಟಿನ್ ಸ್ಪೊಟ್ ,ದೇಸಿ ಮತ್ತು ಪಾಶ್ಚಿಮಾತ್ಯ ಚರ್ಮ ವಾದ್ಯಗಳು ವಾಹನಗಳ ದಟ್ಟವಾದ ಹಾರ್ನ್ ಇಂದು ಶಬ್ದ ಮಾಲಿನ್ಯವನ್ನು ನಿರ್ಮಿಸುತ್ತಿವೆ.
ಮಿತಿ ಮೀರಿದ ಮೊಬೈಲ್ ಬಳಕೆಯಿಂದಾಗಿ ಮೊಬೈಲ್ ಟವರ್ ಬೆಂಗಳೂರು ದಿಲ್ಲಿ ಮುಂಬೈ ಕಲಕತ್ತ ಮಂಗಳೂರು ಹುಬ್ಬಳ್ಳಿ ಮುಂತಾದ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಅಕಾನೂನಾತ್ಮಕವಾಗಿ ನಿಲ್ಲಿಸಲಾಗಿದೆ. ಇಂತವರ ಕಠಿಣ ಕ್ರಮ ಕೈಗೊಳ್ಳಬೇಕು.
ಇಂದು ಗುಬ್ಬಿ ಮತ್ತು ಹದ್ದುಗಳು ಗಣನೀಯವಾಗಿ ಕಡಿಮೆಯಾಗಿವೆ ಅನೇಕ ಪುಟ್ಟ ಪಕ್ಷಿಗಳ ಸಂತತಿ ನಾಶ ಹೊಂದಿವೆ.
ಕಿವುಡುತನ ಹೃದಯ ವಿಕಾರ ರಕ್ತದೊತ್ತಡ ಮುಂತಾದ ಕಾಯಿಲೆಗಳು ಮನುಷ್ಯರನ್ನು ಕಾಡುತ್ತವೆ.
ಒಟ್ಟಾರೆ ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
4 ಜಾಗತಿಕ ತಾಪಮಾನ ಹೆಚ್ಚಳ
ಪ್ಲಾಸ್ಟಿಕ್ ಕ್ಲೋರೋ ಫ್ಲೋರೋ ಪದಾರ್ಥಗಳು ಹೆಚ್ಚಿದ ಅಣುವಿಕಿರಣ ಮೊಬೈಲ್ ಟವರ್ ಗಳು ಜೈವಿಕವಾಗಿ ನಶಿಸಿ ಹೋಗದ ( BIODEGRADABLE )
ವಸ್ತುಗಳ ಪದಾರ್ಥಗಳ ಬಳಕೆ . ಅಣ್ವಸ್ತ್ರಗಳ ಬಳಕೆ ,ಕೊಲ್ಲಿ ಮಹಾಯುದ್ಧಗಳು , ಕ್ಷಿಪಣಿಗಳು ಅಂತರಿಕ್ಷ ನೌಕೆಗಳು , ಸಿಡಿ ಮದ್ದು ,ತುಪಾಕಿ ಜಾಗತಿಕ ತಾಪಮಾನವನ್ನು ಹೆಚ್ಚಿಸಿವೆ. ಪ್ಲಾಸ್ ಟಿಕ್ ಪಾಲಿಥಿನ್ ರುಬ್ಬೆರ್ಗಳ ಕಡಿವಾನಗ ಅಗತ್ಯ.
ಭೂಮಿ ಭಾರವಾಗುತ್ತಿದೆ ಅಂತರಿಕ್ಷ ನೌಕಾ ಯಾತ್ರೆ ,ಕ್ಷಿಪಣಿಗಳು
ಭೂಮಿಯ ಗಾತ್ರ ಹೆಚ್ಚಾಗುತ್ತಿದ್ದು ಅದು ತನ್ನ ಪಥದ ಕ್ಷಿತಿಜದಲ್ಲಿ ಸ್ವಲ್ಪ ಹೇರು ಪೇರಾದರೂ ಗಂಡಾಂತರ ತಪ್ಪಿದ್ದಲ್ಲ . ಭೂಮಿಯ ಶೋಧದ ನೆಪದಲ್ಲಿ ಅದರ ಹುಟ್ಟು
ಬೆಳವಣಿಗೆ ವಿಕಾಸದ ರಹಸ್ಯವನ್ನು ಬೇಧಿಸುವ ಸಲುವಾಗಿ ವಿಜ್ಞಾನಿ ಗಳು ನಿರಂತರ ಅವಿಷ್ಕಾರ ಮಾಡುತ್ತಿದ್ದಾರೆ.ಪ್ರತಿ ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಅಂತರಿಕ್ಷ ನೌಕಾ ಯಾತ್ರೆ ,ಕ್ಷಿಪಣಿಗಳು ಅವಿಷ್ಕಾರಗಳು ಆತಂಕಕ್ಕೆ ಎಡೆ ಮಾಡಿಕೊಟ್ಟಿವೆ. ಅಂತರಿಕ್ಷಗಳ ಮಿತಿಮೀರಿದ ಹಾರಾಟ ಓಜೋನ್ ಪದರು ನಿರ್ನಾಮ ಮಾಡುತ್ತಿವೆ.ರಾಷ್ಟ್ರದ ಭದ್ರತೆ ಮುಖ್ಯ ಆದರೆ ಅದಕ್ಕಿಂತ ಮುಖ್ಯ ಜೀವ ಸಂಕುಲದ ಸ೦ರಕ್ಷಣೆ ಇದು ಜಗತ್ತಿನ ನಾಗರಿಕ ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇವುಗಳ ಕಡಿವಾಣಕ್ಕೆ ಅಂತರಾಷ್ಟ್ರಿಯ ಒಪ್ಪಂದ ಅತ್ಯಗತ್ಯವಾಗಿದೆ.
ನಗರೀಕರಣ ಒಂದು ಶಾಪವೇ ?
ಇತ್ತೀಚಿಗೆ ಬೆಂಗಳೂರು ಸುತ್ತ ಮುತ್ತ ಅನಧಿಕೃತ ಕೆರೆ ಒತ್ತುವರಿ ಸಮಿತಿಯೊಂದು ಅಧ್ಯನ ಮಾಡಿ ಸರಕಾರಕ್ಕೆ ತನ್ನ ವರದಿ ಸಲ್ಲಿಸಲಾಗಿ ಅದರಲ್ಲಿ ಲಕ್ಷಾಂತರ ಎಕರೆ ಭೂಮಿ ಕೆರೆ ನದಿಗಳು ಒತ್ತುವರೆಯಾಗಿದ್ದು ಕಂಡು ಬಂದಿದೆ. ಇದರಿಂದ ನೆಲ ಜಲ ಸ೦ರಕ್ಷಣೆ ಒಂದು ಸವಾಲಾಗಿ ನಿಂತಿದೆ.ಪ್ರಭಾವಿ ರಾಜಕಾರಣಿಗಳು ಭೂ ಗಳ್ಳರು . ನೆಲದ ಸಾವಿಗೆ ಗುರಿಯಾಗಿದ್ದಾರೆ.ವ್ಯವಸ್ತಿತ ಚರಂಡಿ ನೀರು ಪೂರೈಕೆ ಆಹಾರ ವಸತಿ ಜೊತೆಗೆ ತ್ಯಾಜ್ಯ ವಸ್ತುಗಳ ವಿಲೇವಾರಿ ಬಗ್ಗೆ ನಾವೆಲ್ಲರೂ
ಯೋಚಿಸಬೇಕಿದೆ. ಹೆಚ್ಚಾದ ನಗರಿಕರಣದಿಂದ ಮತ್ತು ಕಾಡಿನ ವಿನಾಶದಿಂದ ಕಾಡು ಪ್ರಾಣಿಗಳು ಇಂದು ನಗರಕ್ಕೆ ನುಗ್ಗುತ್ತಿವೆ ಹುಲಿ ಚಿರತೆ ಕರಡಿ ಆನೆಗಳ ದಂಡು
ಆಹಾರವನ್ನು ಅರಸಿ ನಗರಗಳತ್ತ ಬರುವುದುನ್ನು ನಾವು ನಿತ್ಯ ನೋಡುತ್ತಿದ್ದೇವೆ.
ಈ ಭೂಮಿಯ ಎಂಬ ಗ್ರಹದ ಮೇಲೆ ಸಾವಿರಾರು ಜಾತಿಗೆ ಸೇರಿದ ಪಕ್ಷಿ ಪ್ರಾಣಿ ಕೀಟಗಳು ಸಸ್ಯಗಳು ಇವೆ ಅವುಗಳಿಗೂ ಬದುಕುವ ಹಕ್ಕಿದೆ.ಅನೇಕ ಸರಿಸ್ರಪಗಳು ಭೂಮಿಯಿಂದ ಮಾಯವಾಗಿವೆ . ಈಗ ಪಕ್ಷಿ ಕುಲಕ್ಕೆ ಸಾವಿನ ಸಂಚಕಾರ .ಅನೇಕ ಸಸ್ಯಗಳು ಸಾವಿನ ಅಂಚಿನಲ್ಲಿವೆ .ಕಡಲ ಜೀವಿ ಉಸಿರುಗಟ್ಟಿ ಸಾಯುತ್ತಿವೆ .
(Endangerment of biological livings ) ಇದು ಭೂಮಿಯ ಸಮತೋಲನ ತಪ್ಪಿಸುವ ಹುನ್ನಾರ ಕಾರಣ ಭೂಮಿಯ ಉಳಿಸೋಣ.
ಸುನಾಮಿ ಭೂಕಂಪ ಚಂಡ ಮಾರುತ ಪ್ರವಾಹ
ಸುನಾಮಿ ಸಾಮನ್ಯವಾಗಿ ಕಡಲಿನ ಕೆಳಗೆ ನಡೆವ ಭೂಕಂಪ ಮತ್ತು ಭೊಮಿ ಬಿರುಕಿನಿಂದಾ ಉಧ್ಬವಿಸುತ್ತದೆ , ದೊಡ್ಡ ದೊಡ್ಡ ಸುನಾಮಿಗಳು ರೆಕ್ಟಾರ್ ಮಾಪಕದಲ್ಲಿ 7 ಕ್ಕಿಂತ ಹೆಚ್ಚಿನ ತೀವ್ರತೆಯಲ್ಲಿ ಕಂಡು ಬರುತ್ತವೆ. ಭೂಖಂಡಗಳ ಮತ್ತು ಕಡಲಿನ ಭೂಮಿಯ ತಳದ ಗರ್ಶನೆಯಿಂದಾಗಿ ಉಂಟಾಗುವ ಭೂಕಂಪನ ಒಂದು ರುದ್ರಾವತಾರದ ಶಕ್ತಿ ನಿರ್ಮಿತಗೊಂಡು ಭೀಕರ ದೊಡ್ಡ ದೊಡ್ಡ ಅಲೆಗಳು ಕಡಲಿನ ದಕ್ಕೆ ಅಪ್ಪಳಿಸುತ್ತವೆ. 1850 ರಲ್ಲಿ ಸುನಾಮಿಯಾಯಿತು. ಮುಂದೆ 1998 ಸುನಾಮಿ ಕಾಣಿಸಿಕೊಂಡಿತು.
2004 ರಲ್ಲಿ ಇಂಡೊನೆಷೆಯಾದಲ್ಲಿ ಕಾಣಿಸಿದ (9) ರೆಕ್ಟಾರ ಮಾಪಕದ ಸುನಾಮಿ 240000 ಜನರನ್ನು ಬಲಿತೆಗೆದುಕೊಂಡಿತು 30 ಮೀಟರ್ ಅಗಲ ಮತ್ತು 100 ಮೀಟರ್ ಎತ್ತರದ ಅಲೆಗಳು ಎರಡು ಘಂಟೆಯ ನಂತರ ಶ್ರೀಲಂಕಾದಲ್ಲಿ ೫೮೦೦೦ ಜನರನ್ನು ಮತ್ತು ಅಂಡಮಾನ ನಿಕೊಬಾರ್ ತಮಿಳುನಾಡು ಕರಾವಳಿಯ ಥೈಲಾಂಡ್ ದೇಶದ ಪ್ರಜೆಗಳನ್ನು ಬಾಲಿ ತೆಗೆದುಕೊಂಡಿತು. ಜಾಗತಿಕ ಅತ್ಯಂತ ದೊಡ್ಡ ಅನಾಹುತ .
ಚಿಲಿ ದಕ್ಷಿಣ ಆಮೇರಿಕಾ ಅಂಟಾರ್ಟಿಕಾ ಮುಂತಾದ ದೇಶಗಳು ಭಾರತದ ಮುಂಬೈ ಮತ್ತು ಗೋವಾ ತಮಿಳುನಾಡಿನ ನಾಗ ಪಟ್ಟಣಂ ಸುನಾಮಿಗೆ ತುತ್ತಾಗುವ ಸ೦ಭವ ಹೆಚ್ಚಾಗಿದೆ .ಕಡಲ ಕೊರೆತ ಕ್ಷಾರ ಭೂಮಿ ಭೂ ಪ್ರದೇಶಗಳು ಬೇರ್ಪಡುವ ಸಾಧ್ಯತೆ ಹೆಚ್ಚಾಗುವದು.ವಾಯು ಸಾಂಧ್ರ ಕಡಿಮೆ ಅತಿವ್ರುಷ್ಟಿ ಅನಾವ್ರಷ್ಟಿ ವಾಯು ಭಾರ ಕುಸಿತ ಚಂಡ ಮಾರುತ ಕಡಲ ಕೊರೆತ ಇವು ಅತ್ಯಂತ ಗ೦ಭಿರ ಮತ್ತು ಅನಾಹುತಕಾರಿಯಾಗಿ ಪರಿಣಮಿಸುತ್ತಿವೆ.
ಉದಕದಲ್ಲಿ ಕಿಚ್ಚು ಹುಟ್ಟಿ ಸುಡುತಿರ್ದುದ ಕಂಡೆ
ಗಗನದಲ್ಲಿ ಮಾಮರವ ಕಂಡೆ
ಪಕ್ಕವಿಲ್ಲದ ಹಕ್ಕಿ ಭುವಿಯ ನುಂಗಿದ ಕಂಡೆ ನೋಡಾ ಗುಹೇಶ್ವರಾ –
ಅಲ್ಲಮ ಪರ್ಭುಗಳು ತಮ್ಮ ಕಾಲಜ್ಞಾನದ ವಚನದಲ್ಲಿ ನೀರಿನಲ್ಲಿ ಬೆಂಕಿ ಹುಟ್ಟಿತು ಅಂದರೆ ವಿದ್ಯುತ್ ಹುಟ್ಟಿತು. ಗಗನದಲ್ಲಿ ಮಾಮರವ ಕಂಡೆ ಅಂದರೆ ಮನುಷ್ಯನ ಆವಿಷ್ಕಾರಗಳ ಭರಾಟೆಯಲ್ಲಿ ನಾಸಾ ವಿಜ್ಞಾನಿಗಳು ಗಗನದಲ್ಲಿಯು ಮತ್ತು ಚಂದ್ರನ ಮೇಲೂ ಜೈವಿಕ ಪ್ರಕ್ರಿಯಗಳನ್ನು ಶೋಧಿಸುತ್ತಿದ್ದಾರೆ. ಚಂದ್ರನ ಮೇಲೆ ಸಸ್ಯ ನೀರಿನ ಸುಳಿವು ಸಿಕ್ಕಿದೆ . ಪಕ್ಕವಿಲ್ಲದ ಹಕ್ಕಿ ಭುವಿ ನುಂಗಿದ ಕಂಡೆ ಎಂದರೆ. ಮಾನವನಆತ್ಮ ಎಂಬ ಪಕ್ಷಿಗೆ ರೆಕ್ಕೆ ಪಕ್ಕವಿಲ್ಲ ಆದರೆ ಅದು ಜಗವ ನುಂಗುವ ಸಂಚಕಾರ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟು ಭೂಮಿಯ ಪ್ರಳಯದ ಬಗ್ಗೆ ಮೂನ್ಸೂಚನೆ ನೀಡಿದ್ದಾರೆ.ಇದು ವಚನದ ಆಶಯವಷ್ಟೆ.
ಭೂಮಿಯು ಉಳಿಯಬೇಕು ಜೀವಿ ಬೆಳೆಯ ಬೇಕು ಸಾವಿನ ಆತಂಕ ದುಗುಡು ಅಳಿಯಲಿ .
–ಡಾ. ಶಶಿಕಾಂತ.ಪಟ್ಟಣ.ರಾಮದುರ್ಗ