ಪ್ರಕೃತಿ ಮುಂದೆ ನಾವು ಶೂನ್ಯ

 

ಪ್ರಕೃತಿ ಮುಂದೆ ನಾವು ಶೂನ್ಯ

ನಮ್ಮ ಸುತ್ತಮುತ್ತಲಿನ ಸೃಷ್ಟಿ ಸೌಂದರ್ಯ ದೇವರು ನಮಗಿತ್ತ ವರದಾನ
ಅದನ್ನು ನಾಶ ಮಾಡಲು ನಮಗಿಲ್ಲ ಹಕ್ಕು
ಅದನ್ನು ನಾವು ಕಣ್ತುಂಬಾ ನೋಡಬೇಕು ಮನಸ್ಪೂರ್ತಿ ಅನುಭವಿಸಬೇಕು

ಆದರೆ ಖೇದವೆಂದರೆ ಮನುಷ್ಯನ ದುರಾಶೆಯಿಂದ ಅಳಿಯುತ್ತಿದೆ
ಪಕ್ಷಿ ಮತ್ತು ಪ್ರಾಣಿ ಸಂಕುಲ
ದೇವರು ಸೃಷ್ಟಿಸಿದ ಈ ನಿಸರ್ಗದಲ್ಲಿ
ಎಲ್ಲರಿಗೂ ಬದುಕುವ ಹಕ್ಕಿದೆ ಇದನ್ನು ಮನುಷ್ಯನೇಕೆ ಅರ್ಥಮಾಡಿಕೊಳ್ಳುತ್ತಿಲ್ಲ

ಕಾಡುಗಳನ್ನು ಕಡಿದು ಕಾಡುಪ್ರಾಣಿಗಳು ನಾಡಿಗೆ ಬರುವಂತೆ ಮಾಡಿದ್ದಾನೆ ಗಿಡಮರಗಳನ್ನು ಕಡಿದು ಕಾಂಕ್ರೀಟ್ ನಾಡನ್ನಾಗಿ ಮಾಡಿದ್ದಾನೆ

ನೀರು ಭೂಮಿಯೊಳಗೆ ಇಂಗದೆ ಅತಿವೃಷ್ಠಿ ಅನಾವೃಷ್ಠಿ ಪ್ರಳಯ ಮುಂತಾದ ನೈಸರ್ಗಿಕ ವಿಕೋಪಗಳು ಉಂಟಾಗುತ್ತಿವೆ

ಪ್ರಕೃತಿ ಮುಂದೆ ನಾವು ಶೂನ್ಯ ಇನ್ನಾದರೂ ಎಚ್ಚೆತ್ತು ಕೊಳ್ಳೋಣ
ಯಾವ ಜನ್ಮದ ಪುಣ್ಯವೋ ಮನುಷ್ಯರಾಗಿ ಹುಟ್ಟಿದ್ದೇವೆ
ಮನುಷ್ಯರಂತೆ ವರ್ತಿಸೋಣ

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉಳಿಸೋಣ ಪ್ರತಿಯೊಬ್ಬರು ಗಿಡ ನೆಡೋಣ ನೆಟ್ಟ ಗಿಡವನ್ನು ನೀರು ಹಾಕಿ ಪೋಷಿಸೋಣ


ಶ್ರೀಮತಿ ಸುಧಾ ಕಬ್ಬೂರ
ಧಾರವಾಡ

Don`t copy text!