ಪರಿಸರ ಸ್ನೇಹಿ ಶಿಕ್ಷಕ ಚಂದ್ರು ಕಬ್ಬಲಿಗೇರ
ವರದಿ ವೀರೇಶ ಅಂಗಡಿ ಗೌಡೂರು
ಲಿಂಗಸುಗೂರು ತಾಲ್ಲೂಕಿನ ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಗಿಡದದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಚಂದ್ರು ಕಬ್ಬಲಿಗೇರ ಅವರು ವಿಶೇಷ ಕಾಳಜಿಯಿಂದ ಶಾಲಾ ಆವರಣ ಸ್ವಚ್ಛಂದದ ಪರಿಸರದಿಂದ ಹಸಿರು ಹೊದ್ದು ನಿಂತಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ.
ಬಹುತೇಕ ಗುಡ್ಡಗಾಡು ಪ್ರದೇಶದಲ್ಲಿರುವ ಈ ಶಾಲೆಯನ್ನು ಎಲ್ಲರೂ ತಿರುಗಿ ನೋಡುವಂತೆ ಮಾಡುವಲ್ಲಿ ಅವಿರತವಾಗಿ ಶ್ರಮಿಸಿ ಯಶಸ್ವಿಯಾದವರು ಶಿಕ್ಷಕ ಚಂದ್ರು ಕಬ್ಬಲಿಗೇರ. ಅವರ ಪರಿಸರ ಕಾಳಜಿ ಎಂತಹದು ಎಂಬುದನ್ನು ತಿಳಿಯಬೇಕೆಂದರೆ ಸ್ವತಃ ಆ ಶಾಲೆಗೆ ಭೇಟಿ ಕೊಟ್ಟಾಗ ಮಾತ್ರ ಅಚ್ಚರಿಯ ಅನುಭವ ವಾಗುವದಂತೂ ಸತ್ಯ.
ಕಾರಣ ಈ ಶಾಲೆಯು ಆಕರ್ಷಕ ದ್ವಾರ ಬಾಗಿಲು ಹೊಂದಿದ್ದು ಶಾಲಾ ಆವರಣದಲ್ಲಿ ಗಣಿತ ಕ್ರಿಯೆಗಳಿಗೆ ಸಂಬಂದಿಸಿದ ಕಲಿಕೆಯ ಆಕೃತಿಗಳಾದ ವೃತ್ತ,ತ್ರಿಬುಜ,ತ್ರಿಕೋನ ಆಯತಾಕಾರ, ಹೀಗೆ ಮುಂತಾದ ವಿವಿಧ ಬಗೆಯ ವಿಷಯಗಳ ಕುರಿತು ಪರಿಸರದ ಮೂಲಕವೇ ಮಕ್ಕಳಿಗೆ ಸರಳ ರಿತಿಯ ಪರಿಣಾಮಕಾರಿ ಕಲಿಕೆಗೆ ಒತ್ತು ನಿಡಿದ್ದಾರೆ. ಆವರಣದಲ್ಲಿಕಾಂರಜಿ ರೂಪದಲ್ಲಿ ಚಿಮ್ಮುವ ನೀರು ಮತ್ತಷ್ಟು ಆಕರ್ಷಿಸಿಸುತ್ತದೆ.
ಈ ಶಾಲೆಯ ಏಕೋಪಾದ್ಯಾಯ ಶಾಲೆಯಾಗಿದ್ದು 1 ರಿಂದ 5 ನೇ ತರಗತಿಯ ವರೆಗೆ ಶಿಕ್ಷಣ ಕೊಡಲಾಗುತ್ತಿದೆ. ಸದ್ಯ 50 ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತಿ ವರ್ಷವು ಈ ಶಾಲೆಯ ಮಕ್ಕಳು ಪ್ರತಿಭಾ ಕಾರಂಜಿಯ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದವರೆಗೂ ಪ್ರತಿನಿಧಿಸುವಲ್ಲಿ ಮುಂಚುಣಿಯಲ್ಲಿದ್ದಾರೆ.
ಈ ಶಾಲೆಯ ಆವರಣದಲ್ಲಿ ಸಾಗುವಾನಿ,ತೇಗ,ಹೊನ್ನೆ, ಅಶೋಕ,ಸೀತಾಫಲ, ಮಾವು, ತೆಂಗು, ಸೇರಿದಂತೆ ವಿವಿಧ ಬಗೆಯ ಹೂವಿನ ಗಿಡಗಳನ್ನು ಬೆಳೆಸಿ ಪೊಸಿಸುತ್ತಿದ್ದಾರೆ.ಇವುಗಳ ಬೆಳವಣಿಗೆಗೆ ನಿರಂತರ ನೀರಿನ ವ್ಯವಸ್ಥೆ ಕೂಡಾ ಮಾಡಲಾಗಿದೆ. ಇವರು ನಿರ್ಮಿಸಿದ ಈ ಸುಂದರ ಪರಿಸರಕ್ಕೆ ಬಾಲವನ ಎಂದು ಹೆಸರಿಡಲಾಗಿದೆ.
ಶಾಲಾ ಎಸ್.ಡಿ.ಎಂ.ಸಿ ಹಾಗೂ ಗ್ರಾಮದ ಜನರ ಸಹಕಾರದಿಂದ ಶಾಲೆಯನ್ನು ನಂದನ ವನದಂತೆ ಮಾಡಿದ ಶಿಕ್ಷಕ ಚಂದ್ರು ರವರಿಗೆ ಹಲವಾರು ಪ್ರಶಸ್ತಿಗಳು ಸಹ ಲಭಿಸಿವೆ.
1)2015 ರಲ್ಲಿ ಜಿಲ್ಲಾಧಿಕಾರಿಗಳಿಂದ ಉತ್ತಮ ಶಾಲೆ ಪ್ರಶಸ್ತಿ.
2)2017 ರಲ್ಲಿ ಹಸಿರು ಶಾಲೆ ಪ್ರಶಸ್ತಿ.
3) ಸಾರ್ವಜನಿಕ ಶಿಕ್ಷಣ ಇಲಾಖೆಯ 2021 ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯೂ ಕೂಡ ಲಭಿಸಿದೆ.
ಪ್ರಸ್ತುತ ದಿನಮಾನಗಳಲ್ಲಿ ಕೇವಲ ವೇತನಕ್ಕಾಗಿ ಸರ್ಕಾರಿ ಕೇಲಸ ಮಾಡುವ ಬಹುತೇಕರ ನಡುವೆ ತಮಗೆ ಬರುವ ವೆತನದಲ್ಲಿ ಅಷ್ಟೋ ಇಷ್ಟೋ ಉಳಿಸಿ ಶಾಲಾ ಅಭಿವೃದ್ಧಿಗೆ ಬಳಕೆ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.
ಶಿಕ್ಷಕ ಚಂದ್ರು ಕಬ್ಬಲಿಗೇರ ಅವರ ವೃತ್ತಿ ಜೀವನದಲ್ಲಿ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಲಭಿಸಲಿ ಉತ್ತಮ ಹೆಸರು ಮಾಡಲಿ ಎಂಬುದು ನಮ್ಮ ಆಶಯ.
ಪರಿಸರದಿಂದಲೇ ಜೀವ,ಜೀವನ. ಮುಂದಿನ ಪೀಳಿಗೆಗೆ ಸ್ವಚ್ಚಂದದ ಪರಿಸರ ಒದಗಿಸುವಲ್ಲಿ ಎಲ್ಲರ ಶ್ರಮ ಅತ್ಯಗತ್ಯವಾಗಿದ್ದು.ನಮ್ಮ ತಂದೆ ತಮ್ಮ ಎಲ್ಲರೂ ಶಿಕ್ಷಕರಾಗಿದ್ದು ಉತ್ತಮ ಜೀವನ ನಡೆಸುತಿದ್ದೆವೆ. ಅಮರಗುಂಡನ ಕರುಣೆ ,ಪಾಲಕರ ಸಹಕಾರದಿಂದ ಶಾಲೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತಿದ್ದೆನೆ
-> ಚಂದ್ರು ಕಬ್ಬಲಿಗೇರ ಬಾರಿಗಿಡದ ದೊಡ್ಡಿ ಶಾಲೆಯ ಮುಖ್ಯ ಶಿಕ್ಷಕರು*