ನಾವು ಮಾನವರು ನಾವು ಶ್ರೇಷ್ಠರು

ನಾವು ಮಾನವರು ನಾವು ಶ್ರೇಷ್ಠರು

ಮನಸ್ಸು ಸುಚಿಗೊಳಿಸದೇ
ದೇಶ ಸ್ವಚ್ಛಗೊಳಿಸುತ್ತಿರುವವರು,
ಮಲಗಿ ಕನಸ್ಸು ಕಾಣುವವರು
ಆ ಕನಸ್ಸಿಗಾಗಿ ಮತ್ತೆ ಮಲಗುವವರು,
//ನಾವು ಮಾನವರು, ನಾವು ಶ್ರೇಷ್ಠರು.

ಹೊಲ-ಗದ್ದೆ ಸಮತಟ್ಟಾಗಿಸುವವರು
ನಮ್ಮ-ನಮ್ಮಲ್ಲೆ ಸಮಾನತೆ ಕಾಣದವರು
ಕೆಳಜಾತಿನ ಮುಟ್ಟಿದರೆ ಮೈಲಿಗೆ ಎನ್ನುವವರು
ಮನಸ್ಸನ್ನೇ ಮೈಲಿಗೆ ಮಾಡಿಕೊಂಡವರು,
//ನಾವು ಮಾನವರು, ನಾವು ಶ್ರೇಷ್ಠರು

ಮನಸಿಗೆ ಬಾಗಿಲ ಹಾಕಿದವರು
ಕಲ್ಲಿಗೆ ದೇವರೆಂದವರು,
ನಿನ್ನ ಕುಲ-ಘೋತ್ರ ತಿಳಿಯುವವರು
ನಮ್ಮ ಮೂಲ ಧರ್ಮವೇ ಮರೆತವರು
//ನಾವು ಮಾನವರು ನಾವು ಶ್ರೇಷ್ಠರು


-ಮೌನೇಶ ಬಾರ್ಕೆರ, ಮಸ್ಕಿ

Don`t copy text!