ಗೆಳೆಯ

 

ಗೆಳೆಯ

ನೀನು ಆಕಾಶ
ನಿನ್ನ ಸೇರಬೇಕೆಂಬ
ಆಸೆ ಬಯಕೆ ಕಡಲ ಪ್ರೀತಿ
ನಿನ್ನ ಮೋಡದ
ನೆರಳಲ್ಲಿ ಮೈ ಚಾಚಿದ
ನಾನು ನೀಲವೇಣಿ
ಉಕ್ಕಿ ಹರಿವ
ಭಾವ ತರಂಗಗಳು
ಹೊಸ ಮಳೆಗೆ
ಕೊಚ್ಚಿ ಹೋಗುವ
ಜಾತಿ ಮತ ಕಟ್ಟಳೆ
ಕೂಡಿ ಕೊಳ್ಳುವೆ
ಚೆಲುವ
ನಿನ್ನ ಒಡಲ ಪ್ರೇಮದಲ್ಲಿ
ಬಿಸಿಲಿಗೆ ಕಾಯ್ದ
ಆವಿಯಾಗಿ
ಕಪ್ಪು ಮಳೆ ಮೋಡಗಳ
ಬಾಹು ಬಂಧನದಲ್ಲಿ
ಬಯಲಿಗೆ ಭಾಮಿನಿಯಾಗಿ

ವಂದನಾ ಕರಾಳೆ ಹುಬ್ಬಳ್ಳಿ
,

Don`t copy text!